
ಬಾಲಿವುಡ್ನ ಬಹುಬೇಡಿಕೆಯ ನಾಯಕಿಯರಲ್ಲಿ ಈಗ ಆಲಿಯಾ ಭಟ್ ಮುಂಚೂಣಿಯಲ್ಲಿದ್ದಾರೆ. ಇಂದು (ಮಾ.15) ಅವರು 29ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ಪ್ರಸ್ತುತ ಆಲಿಯಾ ಭಟ್ ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರದ ಭರ್ಜರಿ ಯಶಸ್ಸಿನಲ್ಲಿ ತೇಲುತ್ತಿದ್ದಾರೆ.

ಆಲಿಯಾ ಇಂದು ಹುಟ್ಟುಹಬ್ಬವನ್ನು ತಮ್ಮ ಸಹೋದರಿ ಹಾಗೂ ತಾಯಿಯೊಂದಿಗೆ ಮುಂಬೈ ಹೊರಗೆ ಆಚರಿಸುತ್ತಿದ್ದಾರೆ.

ಆಲಿಯಾ ಗೆಳೆಯ ರಣಬೀರ್ ಕಪೂರ್ ಚಿತ್ರೀಕರಣದಲ್ಲಿ ಬ್ಯುಸಿಯಿರುವುದರಿಂದ ನಂತರದಲ್ಲಿ ಆಲಿಯಾ ಜತೆ ಹುಟ್ಟುಹಬ್ಬ ಆಚರಿಸಲಿದ್ದಾರೆ ಎಂದು ಬಾಲಿವುಡ್ ವರದಿಗಳು ಹೇಳಿವೆ.

ಆಲಿಯಾ ಹಾಗೂ ರಣಬೀರ್ ಮುಂದಿನ ತಿಂಗಳು ಏಪ್ರಿಲ್ನಲ್ಲಿ ಶಿಮ್ಲಾದಲ್ಲಿ ವಿವಾಹವಾಗಬಹುದುಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ಮಾಹಿತಿ ಖಚಿತವಾಗಿಲ್ಲ.

ಚಿತ್ರಗಳ ವಿಷಯಕ್ಕೆ ಬಂದರೆ ಆಲಿಯಾ ಈಗ ‘ಆರ್ಆರ್ಆರ್’ ಚಿತ್ರದ ರಿಲೀಸ್ ಸಿದ್ಧತೆಯಲ್ಲಿದ್ದಾರೆ. ‘ಗಂಗೂಬಾಯಿ ಕಾಠಿಯಾವಾಡಿ’ ಅವರಿಗೆ ದೊಡ್ಡ ಮಟ್ಟದಲ್ಲಿ ಯಶಸ್ಸು ತಂದುಕೊಟ್ಟಿದೆ.