- Kannada News Photo gallery Kannada | HD Deve Gowda turns to 91 see his rare pics hdd birthday special
HD Deve Gowda Birthday: ಪ್ರಧಾನಿಯಾದ ಏಕೈಕ ಕನ್ನಡಿಗ ಹೆಚ್ಡಿ ದೇವೇಗೌಡರ ಅಪರೂಪದ ಚಿತ್ರಗಳು
ಭಾರತದ 11 ನೇ ಪ್ರಧಾನ ಮಂತ್ರಿಯಾಗಿ ಹಾಗೂ ಕರ್ನಾಟಕದ 14 ನೇ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ. ದೇವೇಗೌಡರಿಗೆ ಇಂದು 91ನೇ ಹುಟ್ಟುಹಬ್ಬದ ಸಂಭ್ರಮ.
Updated on: May 18, 2023 | 8:41 AM

ಭಾರತದ 11 ನೇ ಪ್ರಧಾನ ಮಂತ್ರಿಯಾಗಿ ಹಾಗೂ ಕರ್ನಾಟಕದ 14 ನೇ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ. ದೇವೇಗೌಡರಿಗೆ ಇಂದು 91ನೇ ಹುಟ್ಟುಹಬ್ಬದ ಸಂಭ್ರಮ. 1996 ರಿಂದ 97 ರ ಅವಧಿಯಲ್ಲಿ ಪ್ರಧಾನ ಮಂತ್ರಿಯಾಗಿ ಹಾಗೂ 1994 ರಿಂದ 96 ರ ಅವಧಿಯಲ್ಲಿ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿರುವ ಇವರು ರಾಜ್ಯಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ.

1933ರ ಮೇ 18ರಂದು ಕರ್ನಾಟಕದ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹರದನಹಳ್ಳಿ ಗ್ರಾಮದಲ್ಲಿ ಜನಿಸಿದರು. ಸಿವಿಲ್ ಎಂಜಿನಿಯರಿಂದ ಡಿಪ್ಲೊಮಾ ಪಡೆದಿರುವ ಹೆಚ್ಡಿಡಿ 20 ವರ್ಷದ ಯುವಕನಾಗಿದ್ದಾಗಲೇ ರಾಜಕಾರಣಕ್ಕೆ ಧುಮುಕಿದರು. ಶಿಕ್ಷಣ ಪೂರೈಸಿದ ನಂತರ 1953ರಲ್ಲಿ ಕಾಂಗ್ರೆಸ್ ಸೇರಿದ್ದರು.

ಮಧ್ಯಮ ವರ್ಗದ ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದ ಗೌಡರಿಗೆ ರೈತನ ಬದುಕಿನ ಕಷ್ಟಗಳು ಚೆನ್ನಾಗಿ ತಿಳಿದಿದ್ದವು. ಬಡ ರೈತರು, ಸೌಲಭ್ಯ ವಂಚಿತರು ಹಾಗೂ ಸಮಾಜದ ದುರ್ಬಲ ವರ್ಗಗಳ ಒಳಿತಿಗಾಗಿ ತಾವೊಬ್ಬ ಹೋರಾಟಗಾರನಾಗುವುದಾಗಿ ಘೋಷಿಸಿದ್ದರು.

ದೊಡ್ಡೇಗೌಡ ಮತ್ತು ಶ್ರೀಮತಿ ದೇವಮ್ಮ ಅವರ ಪುತ್ರರಾಗಿ ಜನಿಸಿದ ಶ್ರೀದೇವೇಗೌಡರಿಗೆ ತಾವು ಸರಳ ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದಿದ್ದಕ್ಕೆ ಹೆಮ್ಮೆ ಇದೆ. ಶೀಮತಿ ಚೆನ್ನಮ್ಮ ಅವರನ್ನು ವಿವಾಹವಾದ ದೇವೇಗೌಡ ದಂಪತಿಗಳಿಗೆ ನಾಲ್ವರು ಪುತ್ರರು ಮತ್ತು ಇಬ್ಬರು ಪುತ್ರಿಯರಿದ್ದಾರೆ.

ಸಮಾಜದ ಎಲ್ಲ ವರ್ಗಗಳ ಜನರ ಅಹವಾಲುಗಳನ್ನು ಸಮಾಧಾನ ಚಿತ್ತದಿಂದ ಆಲಿಸಿ ಪರಿಹಾರ ನೀಡಲು ಯತ್ನಿಸುವ ತಮ್ಮ ಗುಣದಿಂದ ದೇವೇಗೌಡರು ’ಮಣ್ಣಿನ ಮಗ’ ಎಂದು ಹೆಸರುವಾಸಿಯಾಗಿದ್ದಾರೆ. ಈ ಚಿತ್ರ 1994ರಲ್ಲಿ ಹೆಚ್ಡಿ ದೇವೇಗೌಡರು ಸಿಎಂ ಆಗಿದ್ದಾಗ ತೆಗೆದ ಚಿತ್ರ.

ತಮ್ಮ 91ನೇ ವಯಸ್ಸಿನಲ್ಲೂ ಕನ್ನಡಕ ಬಳಸದೇ, ಧ್ವನಿಯಲ್ಲಿ ಬದಲಾವಣೆ ಇಲ್ಲದೆ ಆರೋಗ್ಯವಂತರಾಗಿರುವ ಹೆಚ್ಡಿ ದೇವೇಗೌಡರು ಯೋಗ ಮಾಡುತ್ತಾರೆ. ಕಟ್ಟುನಿಟ್ಟಿನ ಜೀವನ ಶೈಲಿಯಿಂದ ತಮ್ಮ ಆರೋಗ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ.

1995ರ ಜನವರಿ ತಿಂಗಳಲ್ಲಿ ಹೆಚ್ಡಿಡಿ ಸ್ವಿಟ್ಜರಲೆಂಡಿನಲ್ಲಿ ನಡೆದ ಅಂತಾರಾಷ್ಟ್ರೀಯ ಅರ್ಥಶಾಸ್ತ್ರಜ್ಞರ ಫೋರಂ ಸಮಾವೇಶದಲ್ಲಿ ಭಾಗವಹಿಸಿದರು. ನಂತರ ಇವರು ಸಿಂಗಾಪುರ ಪ್ರವಾಸಕ್ಕೆ ತೆರಳಿ ಕರ್ನಾಟಕಕ್ಕೆ ಸಾಕಷ್ಟು ವಿದೇಶಿ ಬಂಡವಾಳ ಹರಿದು ಬರಲು ಕಾರಣರಾದರು.

1983 ರಿಂದ 1988 ರವರೆಗೆ ಅಸ್ತಿತ್ವದಲ್ಲಿದ್ದ ರಾಮಕೃಷ್ಣ ಹೆಗಡೆ ನೇತೃತ್ವದ ಜನತಾ ಪಕ್ಷದ ಸರಕಾರದಲ್ಲಿ ದೇವೇಗೌಡರು ಸಚಿವರಾಗಿ ಕೆಲಸ ಮಾಡಿದರು.

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ (1975 ರಿಂದ 77)ಇವರನ್ನು ಬೆಂಗಳೂರಿನ ಸೆಂಟ್ರಲ್ ಜೈಲಿಗೆ ಹಾಕಲಾಗಿತ್ತು.

ಭಾರತದ 11ನೇ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಮೇ 30, 1996ರಂದು ಕರ್ನಾಟಕ ಮುಖ್ಯಮಂತ್ರಿ ಹುದ್ದೆಗೆ ದೇವೇಗೌಡರು ರಾಜೀನಾಮೆ ನೀಡಿದ್ದರು.



















