ಧನಂಜಯ್ ನಟನೆಯ ‘ಹೆಡ್ ಬುಷ್’ ಸಿನಿಮಾದಲ್ಲಿ ನಟಿಸಿ ಪಾಯಲ್ ರಜಪೂತ್ ಅವರು ಗಮನ ಸೆಳೆದಿದ್ದರು. ಈ ಚಿತ್ರದ ಮೂಲಕ ಅವರು ಕನ್ನಡಕ್ಕೆ ಪರಿಚಯಗೊಂಡರು. ಅವರು ಒಂದು ದೊಡ್ಡ ಯಶಸ್ಸಿಗಾಗಿ ಕಾದು ಕುಳಿತಿದ್ದಾರೆ.
2018ರಲ್ಲಿ ರಿಲೀಸ್ ಆದ ‘ಆರ್ಎಕ್ಸ್ 100’ ಸಿನಿಮಾ ಮೂಲಕ ಪಾಯಲ್ ಸಾಕಷ್ಟು ಜನಪ್ರಿಯತೆ ಪಡೆದರು. ಕಾರ್ತಿಕೇಯಗೆ ಜೊತೆಯಾಗಿ ಅವರು ನಟಿಸಿದ್ದರು.
‘ಹೆಡ್ ಬುಷ್’ ಸಿನಿಮಾ ಮೆಚ್ಚುಗೆ ಪಡೆಯಿತು. ವಿಮರ್ಶೆಯಲ್ಲಿ ಈ ಸಿನಿಮಾ ಗೆದ್ದಿದೆ. ಅವರ ಪಾತ್ರಕ್ಕೂ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಕ್ಕಿದೆ. ಸದ್ಯ ಮೂರ್ನಾಲ್ಕು ಸಿನಿಮಾ ಕೆಲಸಗಳಲ್ಲಿ ಪಾಯಲ್ ಬ್ಯುಸಿ ಇದ್ದಾರೆ. ಪಾಯಲ್ಗೆ ದೊಡ್ಡ ಯಶಸ್ಸಿನ ಅವಶ್ಯಕತೆ ಇದೆ.
ಸದ್ಯ ಪಾಯಲ್ ಅವರು ‘ಮಂಗಳವಾರಂ’ ಹೆಸರಿನ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಈ ಚಿತ್ರಕ್ಕಾಗಿ ಅವರು 99 ದಿನಗಳ ಕಾಲ್ಶೀಟ್ ನೀಡಿದ್ದಾರೆ. ‘ಆರ್ಎಕ್ಸ್ 100’ ನಿರ್ದೇಶಕ ಅಜಯ್ ಭೂಪತಿ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.
ಈ ಚಿತ್ರದ ಮೂಲಕ ಪಾಯಲ್ ಗೆಲ್ಲುವ ಭರವಸೆಯಲ್ಲಿದ್ದಾರೆ. ಈ ಚಿತ್ರ ಗೆದ್ದರೆ ಅವರ ವೃತ್ತಿ ಜೀವನಕ್ಕೆ ಮೈಲೇಜ್ ಸಿಗಲಿದೆ. ಇಲ್ಲವಾದರೆ ಹೊಸ ಆಫರ್ ಸಿಗೋದು ಕಷ್ಟ ಆಗಲಿದೆ.