Updated on: Feb 10, 2023 | 8:27 PM
ಪರಿಮಳಭರಿತ ಮೇಣದಬತ್ತಿಗಳು ಕೇವಲ ಅಲಂಕಾರಕ್ಕೆ, ಮನೆಯನ್ನು ಸುಗಂಧಗೊಳಿಸಲು ಮಾತ್ರವಲ್ಲ. ಅದರಿಂದ ಆರೋಗ್ಯ ಪ್ರಯೋಜನಗಳು ಕೂಡ ಸಾಕಷ್ಟಿವೆ. ಬೆಳಕನ್ನು ನೀಡುವುದರ ಜೊತೆಗೆ ಮೇಣದಬತ್ತಿಗಳಿಂದ ಹಲವಾರು ಪ್ರಯೋಜನಗಳಿವೆ. ಕಳೆದ 2 ವರ್ಷಗಳಲ್ಲಿ ಕೊವಿಡ್-19 ಸಾಂಕ್ರಾಮಿಕವು ಜಾಗತಿಕವಾಗಿ ಲಕ್ಷಾಂತರ ಜನರ ಜೀವನದ ಮೇಲೆ ಮಹತ್ವದ ಪ್ರಭಾವವನ್ನು ಬೀರಿದೆ.
ಈ ಸಂದರ್ಭದಲ್ಲಿ ಸುವಾಸನೆಭರಿತ ಕ್ಯಾಂಡಲ್ಗಳಿಂದ ಹಲವರ ಮೇಲೆ ಹಲವು ರೀತಿಯ ಪರಿಣಾಮಗಳು ಆಗಿವೆ. ಪರಿಮಳಯುಕ್ತ ಮೇಣದಬತ್ತಿಗಳು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು ಎಂದು ನಿಮಗೆ ತಿಳಿದಿದೆಯೇ? ಉತ್ತಮ ಆರೋಗ್ಯಕ್ಕಾಗಿ ಪರಿಮಳಯುಕ್ತ ಮೇಣದಬತ್ತಿಗಳನ್ನು ಬಳಸಲು 5 ಕಾರಣಗಳು ಹೀಗಿವೆ...
1. ನಿದ್ರೆ ಸಮಸ್ಯೆ ದೂರ: ನಿದ್ರೆಯೂ ಒಂದು ಸೈಕಲ್ ರೀತಿ ಕಾರ್ಯ ನಿರ್ವಹಿಸುತ್ತದೆ. ಸರಿಯಾದ ಸಮಯಕ್ಕೆ ಮಲಗಿ, ಸರಿಯಾದ ಸಮಯಕ್ಕೆ ಏಳುವುದರಿಂದಲೂ ಆರೋಗ್ಯಕ್ಕೆ ನಾನಾ ರೀತಿಯ ಪ್ರಯೋಜನಗಳಿವೆ. ಈ ಸುವಾಸನೆಭರಿತ ಮೇಣದ ಬತ್ತಿ ಮಾನಸಿಕ ಶಾಂತಿಯನ್ನು ಉತ್ತೇಜಿಸುತ್ತದೆ ಮತ್ತು ನಿಮ್ಮ ಕಣ್ಣುಗಳನ್ನು ನೀಲಿ ಬೆಳಕಿಗೆ ಒಡ್ಡಿಕೊಳ್ಳುವುದನ್ನು ತಡೆಯುತ್ತದೆ.
2. ಜ್ಞಾಪಕಶಕ್ತಿಯ ವೃದ್ಧಿ: ಸ್ಮರಣೆ ನಿಮ್ಮ ಮೆದುಳಿನ ಪ್ರಮುಖ ಕಾರ್ಯಗಳಲ್ಲಿ ಒಂದಾಗಿದೆ. ನಿಮ್ಮ ಸ್ಮರಣೆಯು ಇತ್ತೀಚೆಗೆ ಸ್ವಲ್ಪ ಮಬ್ಬು ಅಥವಾ ಗೊಂದಲಮಯವಾಗಿದ್ದರೆ ಅಥವಾ ನೀವು ವಿಷಯಗಳನ್ನು ನೆನಪಿಸಿಕೊಳ್ಳುವಲ್ಲಿ ತೊಂದರೆ ಹೊಂದಿದ್ದರೆ ಪರಿಮಳಯುಕ್ತ ಮೇಣದಬತ್ತಿಗಳು ಪ್ರಯೋಜನಕಾರಿಯಾಗಬಹುದು. ಪರಿಮಳ ವಿಜ್ಞಾನ, ಸ್ಮರಣಶಕ್ತಿ ಮತ್ತು ಭಾವನೆಗಳೆಲ್ಲವೂ ಒಂದಕ್ಕೊಂದು ಹೆಣೆದುಕೊಂಡಿವೆ.
3. ಮೈಂಡ್‌ಫುಲ್‌ನೆಸ್‌ನ ಪರಿಣಾಮಗಳು: ಒಬ್ಬರ ಮನಸ್ಥಿತಿ, ಉತ್ಪಾದಕತೆಯ ಮಟ್ಟ ಮತ್ತು ಒತ್ತಡದ ಮೇಲೆ ಪರಿಮಳದ ಪರಿಣಾಮಗಳು ಗಣನೀಯವಾಗಿರುತ್ತವೆ. ಇನ್ನೂ ಸರಿಯಾಗಿ ಹೇಳುವುದಾದರೆ, ಪರಿಮಳಯುಕ್ತ ಮೇಣದಬತ್ತಿಗಳು ಮೂಡ್ ಹೆಚ್ಚಿಸಲು ಮತ್ತು ಆತಂಕ ಕಡಿಮೆ ಮಾಡಲು ಸಹಕಾರಿಯಾಗಿದೆ.
4. ಒತ್ತಡ ನಿವಾರಕ: ಕೆಲವು ಮೇಣದಬತ್ತಿಯ ಪರಿಮಳಗಳು ದೇಹದಲ್ಲಿನ ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಭಾವಿಸಲಾಗಿದೆ. ಡೋಪಮೈನ್ ಮತ್ತು ಸಿರೊಟೋನಿನ್ ನಂತಹ ಭಾವನೆಗಳು ಮೆದುಳಿನ ರಾಸಾಯನಿಕಗಳ ಹರಿವನ್ನು ಹೆಚ್ಚಿಸುತ್ತದೆ. ಇವು ನಿಮ್ಮ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಉತ್ಪಾದಕ ಮನಸ್ಥಿತಿಯನ್ನು ಅಳವಡಿಸಿಕೊಳ್ಳಲು ಸಹಾಯ ಮಾಡುತ್ತದೆ.
5. ಆಧ್ಯಾತ್ಮಿಕ ಆರೋಗ್ಯ: ನೀವು ನಿಯಮಿತವಾಗಿ ಧ್ಯಾನವನ್ನು ಅಭ್ಯಾಸ ಮಾಡುತ್ತಿದ್ದರೆ ಪರಿಮಳಯುಕ್ತ ಮೇಣದಬತ್ತಿಗಳು ನಿಮಗೆ ಸಹಾಯಕವಾಗಬಹುದು. ಜಾಸ್ಮಿನ್, ಲ್ಯಾವೆಂಡರ್ ಮತ್ತು ಪುದೀನಾ ನಿಮ್ಮ ಮನಸನ್ನು ನಿಯಂತ್ರಿಸಲು ಅಥವಾ ನಿಮ್ಮ ಯೋಗಾಭ್ಯಾಸವನ್ನು ಹೆಚ್ಚಿಸಲು ಪ್ರಯೋಜನಕಾರಿಯಾಗಿದೆ.
ಸುವಾಸನೆಯ ಮೇಣದಬತ್ತಿಗಳನ್ನು ಬೆಳಗಿಸುವುದು ನಿಮ್ಮ ಸಂಜೆ ಮತ್ತು ನಿಮ್ಮ ರಾತ್ರಿಯನ್ನು ನಿಜವಾಗಿಯೂ ರೋಮ್ಯಾಂಟಿಕ್ ಆಗಿಸಬಹುದು. ನಿಮಗಿಷ್ಟವಾದ ಸುವಾಸನೆಯ ಕ್ಯಾಂಡಲ್ಗಳನ್ನು ಹಚ್ಚಿಟ್ಟುಕೊಂಡರೆ ನಿಮ್ಮ ಮನಸು ಶಾಂತವಾಗಿರುತ್ತದೆ.