Heel Pain: ಹಿಮ್ಮಡಿ ನೋವು ಉಂಟಾಗಲು 5 ಕಾರಣಗಳಿವು

Updated on: Sep 06, 2023 | 3:05 PM

ಹಿಮ್ಮಡಿ ನೋವನ್ನು ನಿರ್ಲಕ್ಷ್ಯಿಸಿ ನೀವು ಕೆಲಸ ಮುಂದುವರೆಸಿದರೆ ಆ ನೋವು ಗಂಭೀರ ರೂಪ ತಾಳಬಹುದು. ಹಿಮ್ಮಡಿ ನೋವಿನಿಂದ ತಾತ್ಕಾಲಿಕ ಪರಿಹಾರ ಪಡೆಯಲು ಹಾಟ್‌ ವಾಟರ್‌ ಬ್ಯಾಗ್​ನಿಂದ ಮಸಾಜ್‌ ಮಾಡಿಕೊಳ್ಳಿ. ಅಥವಾ ರೆಡಿಮೇಡ್ ಐಸ್ ಪ್ಯಾಕ್​ ಕೂಡ ಬಳಸಬಹುದು.

1 / 7
ಹಿಮ್ಮಡಿ ನೋವು ಬಹುತೇಕ ಎಲ್ಲರನ್ನೂ ಒಂದಲ್ಲ ಒಂದು ಬಾರಿಯಾದರೂ ಕಾಡಿರುವ ಆರೋಗ್ಯ ಸಮಸ್ಯೆಯಾಗಿದೆ. 1 ಮೈಲಿ ನಡೆದಾಗ ನಾವು ನಮ್ಮ ಪಾದದ ಮೇಲೆ 60 ಟನ್​ನಷ್ಟು ಒತ್ತಡ ಹಾಕಿರುತ್ತೇವೆ. ಆ ಹೊರೆಯನ್ನು ಪಾದಗಳು ನಿಭಾಯಿಸಬಲ್ಲವು. ಆದರೆ, ಪಾದ ಅಥವಾ ಹಿಮ್ಮಡಿಯ ಆರೋಗ್ಯ ಸರಿಯಿಲ್ಲದಿದ್ದರೆ ನೋವು ಪದೇಪದೆ ಮರುಕಳಿಸಬಹುದು. ಹಿಮ್ಮಡಿ ನೋವನ್ನು ನಿರ್ಲಕ್ಷ್ಯಿಸಿ ನೀವು ಕೆಲಸ ಮುಂದುವರೆಸಿದರೆ ಆ ನೋವು ಗಂಭೀರ ರೂಪ ತಾಳಬಹುದು. ಹಿಮ್ಮಡಿ ನೋವು ಹೆಚ್ಚಾಗಲು 5 ಪ್ರಮುಖ ಕಾರಣಗಳು ಇಲ್ಲಿವೆ.

ಹಿಮ್ಮಡಿ ನೋವು ಬಹುತೇಕ ಎಲ್ಲರನ್ನೂ ಒಂದಲ್ಲ ಒಂದು ಬಾರಿಯಾದರೂ ಕಾಡಿರುವ ಆರೋಗ್ಯ ಸಮಸ್ಯೆಯಾಗಿದೆ. 1 ಮೈಲಿ ನಡೆದಾಗ ನಾವು ನಮ್ಮ ಪಾದದ ಮೇಲೆ 60 ಟನ್​ನಷ್ಟು ಒತ್ತಡ ಹಾಕಿರುತ್ತೇವೆ. ಆ ಹೊರೆಯನ್ನು ಪಾದಗಳು ನಿಭಾಯಿಸಬಲ್ಲವು. ಆದರೆ, ಪಾದ ಅಥವಾ ಹಿಮ್ಮಡಿಯ ಆರೋಗ್ಯ ಸರಿಯಿಲ್ಲದಿದ್ದರೆ ನೋವು ಪದೇಪದೆ ಮರುಕಳಿಸಬಹುದು. ಹಿಮ್ಮಡಿ ನೋವನ್ನು ನಿರ್ಲಕ್ಷ್ಯಿಸಿ ನೀವು ಕೆಲಸ ಮುಂದುವರೆಸಿದರೆ ಆ ನೋವು ಗಂಭೀರ ರೂಪ ತಾಳಬಹುದು. ಹಿಮ್ಮಡಿ ನೋವು ಹೆಚ್ಚಾಗಲು 5 ಪ್ರಮುಖ ಕಾರಣಗಳು ಇಲ್ಲಿವೆ.

2 / 7

1. ಪ್ಲಾಂಟರ್ ಫ್ಯಾಸಿಟಿಸ್ ಎಂಬುದು ಹಿಮ್ಮಡಿ ನೋವಿಗೆ ಒಂದು ಮುಖ್ಯ ಕಾರಣವಾಗಿದೆ. ಪ್ಲಾಂಟರ್ ಎಂಬುದು ಹಿಮ್ಮಡಿಯ ಮೂಳೆಯಿಂದ ಪಾದದ ತುದಿಯವರೆಗೆ ಚಲಿಸುವ ಬಲವಾದ ಅಸ್ಥಿರಜ್ಜು. ಅಸ್ಥಿರಜ್ಜು ಹಿಮ್ಮಡಿ ಮೂಳೆಗೆ ಅಂಟಿಕೊಳ್ಳುವ ಸ್ಥಳದಲ್ಲಿ ನೋವು ಹೆಚ್ಚಾಗಿರುತ್ತದೆ. 40-70 ವರ್ಷ ವಯಸ್ಸಿನವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಗರ್ಭಿಣಿಯಾಗಿರುವ ಮಹಿಳೆಯರಲ್ಲೂ ಪ್ಲ್ಯಾಂಟರ್ ಫ್ಯಾಸಿಟಿಸ್ ಹೆಚ್ಚಾಗಿ ಕಂಡುಬರುತ್ತದೆ. ಅಧಿಕ ತೂಕ ಅಥವಾ ಬೊಜ್ಜು ಇರುವವರಲ್ಲೂ ಇದು ಕಾಣಿಸಿಕೊಳ್ಳುತ್ತದೆ.

3 / 7

2. ಅಕಿಲ್ಸ್ ಟೆಂಡೈನಿಟಿಸ್ ಎಂಬುದು ಅಂಗಾಂಶದ ಬ್ಯಾಂಡ್ ಆಗಿದ್ದು, ಅದು ನಿಮ್ಮ ಸ್ನಾಯುಗಳನ್ನು ಹಿಮ್ಮಡಿಯ ಮೂಳೆಗೆ ಸಂಪರ್ಕಿಸುತ್ತದೆ. ನೀವು ನಡೆಯುವಾಗ, ಓಡುವಾಗ, ಜಿಗಿಯುವಾಗ ಇದನ್ನು ಬಳಸುತ್ತೀರಿ. ಅಕಿಲ್ಸ್ ಟೆಂಡೈನಿಟಿಸ್ ಸಮಸ್ಯೆ ಸಾಮಾನ್ಯವಾಗಿ ಓಟಗಾರರು, ಹೆಚ್ಚು ವ್ಯಾಯಾಮ ಮಾಡುವವರಲ್ಲಿ ಕಂಡುಬರುತ್ತದೆ.

4 / 7

3. ಹೀಲ್ ಬರ್ಸಿಟಿಸ್ ಎಂಬುದು ಉರಿಯೂತದ ಸ್ಥಿತಿಯಾಗಿದೆ. ಹಿಮ್ಮಡಿಗಳ ಮೇಲೆ ಗಟ್ಟಿಯಾಗಿ ನಡೆಯುವುದರಿಂದ ಆಗುವ ಕಿರಿಕಿರಿಯಿಂದ ಉರಿಯೂತ ಉಂಟಾಗುತ್ತದೆ. ಚಪ್ಪಲಿಗಳಿಂದ ಹಿಮ್ಮಡಿಯ ಮೇಲೆ ಹೆಚ್ಚಿನ ಒತ್ತಡವನ್ನು ಹಾಕುವುದರಿಂದಲೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಹಿಮ್ಮಡಿಯ ಒಳಭಾಗದಲ್ಲಿ ಅಥವಾ ಅದರ ಹಿಂಭಾಗದಲ್ಲಿ ನೀವು ನೋವನ್ನು ಅನುಭವಿಸಬಹುದು. ದಿನ ಕಳೆದಂತೆ ಈ ನೋವು ಉಲ್ಬಣಗೊಳ್ಳುತ್ತದೆ.

5 / 7

4. ಮಕ್ಕಳಲ್ಲಿ ಹಿಮ್ಮಡಿ ನೋವು ಅದರಲ್ಲೂ ಯುವ ಕ್ರೀಡಾಪಟುಗಳಲ್ಲಿ ಹಿಮ್ಮಡಿ ನೋವು ಹೆಚ್ಚಾಗಿರುತ್ತದೆ. ಇದು ಸಾಮಾನ್ಯವಾಗಿ 8-13 ವರ್ಷ ವಯಸ್ಸಿನ ಹುಡುಗಿಯರ ಮೇಲೆ ಮತ್ತು 10-15 ವರ್ಷ ವಯಸ್ಸಿನ ಹುಡುಗರ ಮೇಲೆ ಪರಿಣಾಮ ಬೀರುತ್ತದೆ. ಹಿಮ್ಮಡಿ ಮೂಳೆಯು ಕಾಲುಗಳ ಅಸ್ಥಿರಜ್ಜುಗಳಿಗಿಂತ ವೇಗವಾಗಿ ಬೆಳೆಯುತ್ತದೆ.

6 / 7

5. ಹೀಲ್ ಸ್ಪರ್ಸ್ ಹಿಮ್ಮಡಿ ಮೂಳೆಯ ಕೆಳಭಾಗದಲ್ಲಿ ಎಲುಬಿನ ಮುಂಚಾಚಿರುವಿಕೆಯನ್ನು ಉಂಟುಮಾಡುತ್ತವೆ. ಹೀಲ್ ಸ್ಪರ್ಸ್ ಕ್ರೀಡಾಪಟುಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಸಮಸ್ಯೆಯಾಗಿದೆ.

7 / 7

ಹಿಮ್ಮಡಿ ನೋವಿನಿಂದ ತಾತ್ಕಾಲಿಕ ಪರಿಹಾರ ಪಡೆಯಲು ಹಾಟ್‌ ವಾಟರ್‌ ಬ್ಯಾಗ್​ನಿಂದ ಮಸಾಜ್‌ ಮಾಡಿಕೊಳ್ಳಿ. ಇದು ನೋವನ್ನು ನಿವಾರಿಸುವುದು ಮಾತ್ರವಲ್ಲದೆ ಒತ್ತಡವನ್ನು ಕೂಡ ಕಡಿಮೆ ಮಾಡುತ್ತದೆ. ಅಥವಾ ಬಾಟಲಿಯಲ್ಲಿ ನೀರು ತುಂಬಿಸಿ ಫ್ರಿಜ್‌ನಲ್ಲಿಡಿ. ಅದು ಗಟ್ಟಿಯಾದಾಗ ಆ ಬಾಟಲಿಯನ್ನು ಬಟ್ಟೆಯಲ್ಲಿ ಸುತ್ತಿ ಪಾದಗಳ ಅಡಿಭಾಗಕ್ಕೆ ಮಸಾಜ್ ಮಾಡಿ. ಅಥವಾ ರೆಡಿಮೇಡ್ ಐಸ್ ಪ್ಯಾಕ್​ ಕೂಡ ಬಳಸಬಹುದು. ಅಥವಾ ಒಂದು ಬಕೆಟ್ ಉಗುರುಬೆಚ್ಚಗಿನ ನೀರಿಗೆ ಸ್ವಲ್ಪ ಅರಿಶಿನ ಮತ್ತು ಉಪ್ಪನ್ನು ಹಾಕಿ. ನಿಮ್ಮ ಪಾದಗಳನ್ನು ಸ್ವಲ್ಪ ಸಮಯದವರೆಗೆ ಅದರಲ್ಲಿ ಮುಳುಗಿಸಿಟ್ಟುಕೊಳ್ಳಿ. ಇದರಿಂದಲೂ ಹಿಮ್ಮಡಿ ನೋವು ಕಡಿಮೆಯಾಗುತ್ತದೆ.

Loading...
Unable to load recommendations.
Follow Us