Updated on: Dec 30, 2022 | 6:28 AM
Heeraben Modi
ಹೀರಾಬೆನ್ ಮೋದಿ ಅವರ ಗಂಡ ದಾಮೋದರದಾಸ್ ಮುಲ್ಚಂದ್ ಮೋದಿ, ಅವರು 1989 ರಲ್ಲಿ ಮೂಳೆ ಕ್ಯಾನ್ಸರ್ ನಿಂದ ನಿಧನರಾದರು.
ಹೀರಾಬೆನ್ ಅವರು ಪ್ರಧಾನಿಯವರ ಕಿರಿಯ ಸಹೋದರ ಪಂಕಜ್ ಮೋದಿ ಅವರೊಂದಿಗೆ ಗಾಂಧಿನಗರ ನಗರದ ಹೊರವಲಯದಲ್ಲಿರುವ ರೈಸನ್ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ.
ಹೀರಾಬೆನ್ ಮೋದಿಯವರಿಗೆ 6 ಮಕ್ಕಳು. ನರೇಂದ್ರ ಮೋದಿ ಅವರಿಗೆ 4 ಸಹೋದರರು ಮತ್ತು ಒಬ್ಬ ಸಹೋದರಿ ಇದ್ದಾರೆ. ಎಲ್ಲರೂ ಗುಜರಾತ್‌ನಲ್ಲಿ ವಾಸಿಸುತ್ತಿದ್ದಾರೆ. ಸೋಮ ಮೋದಿ, ಅಮೃತ್ ಮೋದಿ, ಪ್ರಹ್ಲಾದ್ ಮೋದಿ, ಪಂಕಜ್ ಮೋದಿ, ಸೋದರಿ ವಸಂತಿಬೆನ್ ಹಸ್ಮುಖಲಾಲ್ ಮೋದಿ
ಪ್ರಧಾನಿಯಾದ ನಂತರ ತಮ್ಮ ಮೊದಲ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಮೋದಿ, ಯಾವುದೇ ಭದ್ರತೆಯಿಲ್ಲದೆ 17 ಸೆಪ್ಟೆಂಬರ್ 2014 ರಂದು ತಮ್ಮ ತಾಯಿಯನ್ನು ಭೇಟಿ ಮಾಡಲು ಗಾಂಧಿನಗರಕ್ಕೆ ಭೇಟಿ ನೀಡಿದ್ದರು.
16 ಮೇ 2016 ರಂದು, ದೆಹಲಿಯಲ್ಲಿ ಪ್ರಧಾನಿ ಮೋದಿ ಅವರು ಸುಮಾರು ಎರಡು ವರ್ಷಗಳ ಹಿಂದೆ ವಾಸಿಸಲು ಪ್ರಾರಂಭಿಸಿದ ನಂತರ ಮೊದಲ ಬಾರಿಗೆ ಈ ಅಧಿಕೃತ ರೇಸ್ ಕೋರ್ಸ್ ರಸ್ತೆ (RCR) ನಿವಾಸಕ್ಕೆ ಅವರ ತಾಯಿ ಅವರನ್ನು ಭೇಟಿ ಮಾಡಿದರು.
ಹರ್ ಘರ್ ತಿರಂಗ ಅಭಿಯಾನ ಆರಂಭವಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ ಮೋದಿ ಅವರು ಮಕ್ಕಳಿಗೆ ರಾಷ್ಟ್ರಧ್ವಜವನ್ನು ವಿತರಿಸಿದರು ಮತ್ತು ತ್ರಿವರ್ಣ ಧ್ವಜವನ್ನು ಹಾರಿಸಿದರು.
ಪ್ರಧಾನಿ ಮೋದಿ ಅವರು ಅವರ ತಾಯಿ ಹೀರಾಬಾ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಅವರೊಂದಿಗೆ ಮೋದಿ ಭೋಜನ ಮಾಡಿದ ಕ್ಷಣ
ಪ್ರಧಾನಿ ಮೋದಿ ಅವರ ತಾಯಿ ರಾಮ ಜನ್ಮ ಭೂಮಿಯಲ್ಲಿ ತನ್ನ ಮಗ ಭೂಮಿ ಪೂಜೆಯನ್ನು ನೆರವೇರಿಸುತ್ತಿರುವುದನ್ನು ಅಂದು ಟಿವಿಯಲ್ಲಿ ವೀಕ್ಷಣೆ ಮಾಡಿದ ಕ್ಷಣ
ಅಮ್ಮನ ಜೊತೆ ನರೇಂದ್ರ ಮೋದಿಯ ಹಳೆಯ ಫೋಟೋಗಳನ್ನು ಅನೇಕ ಬಾರಿ ಹಂಚಿಕೊಂಡಿದ್ದಾರೆ. ಆದರೆ ಇಂದು ತನ್ನ ಮನೆಯವರನ್ನು ಮತ್ತು ಪ್ರೀತಿ ಮಗ ಮೋದಿ ಅವರನ್ನು ಬಿಟ್ಟು ಹೋಗಿದ್ದಾರೆ.