AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Christmas 2022 : ಕ್ರಿಸ್ಮಸ್ ಪಾರ್ಟಿಗಾಗಿ ಸ್ಪೆಷಲ್ ರೆಸಿಪಿಗಳು ಇಲ್ಲಿವೆ

ಹಬ್ಬಗಳ ಸಮಯದಲ್ಲಿ ಮನೆಗೆ ಅತಿಥಿಗಳು ಬಂದಾಗ ಆರೋಗ್ಯಕರ ಹಾಗೂ ರುಚಿಕರ ಆಹಾರಗಳೊಂದಿಗೆ ಅವರನ್ನು ಸ್ವಾಗತಿಸಿ. ಅದಕ್ಕಾಗಿ ಈ ಕ್ರಿಸ್‌ಮಸ್ ಹಬ್ಬದ ಸಮಯದಲ್ಲಿ ನಿಮಗಾಗಿ ಗರಿ ಗರಿಯಾದ ತಿಂಡಿಗಳ ರೆಸಿಪಿ ಇಲ್ಲಿದೆ.

TV9 Web
| Edited By: |

Updated on: Dec 16, 2022 | 2:16 PM

Share
ಹಬ್ಬಗಳ ಸಮಯದಲ್ಲಿ ಮನೆಗೆ ಅತಿಥಿಗಳು ಬಂದಾಗ ಆರೋಗ್ಯಕರ ಹಾಗೂ ರುಚಿಕರ ಆಹಾರಗಳೊಂದಿಗೆ ಅವರನ್ನು ಸ್ವಾಗತಿಸಿ. ಅದಕ್ಕಾಗಿ ಈ ಕ್ರಿಸ್‌ಮಸ್ ಹಬ್ಬದ ಸಮಯದಲ್ಲಿ ನಿಮಗಾಗಿ  ಗರಿ ಗರಿಯಾದ ತಿಂಡಿಗಳ ರೆಸಿಪಿ ಇಲ್ಲಿದೆ.

ಹಬ್ಬಗಳ ಸಮಯದಲ್ಲಿ ಮನೆಗೆ ಅತಿಥಿಗಳು ಬಂದಾಗ ಆರೋಗ್ಯಕರ ಹಾಗೂ ರುಚಿಕರ ಆಹಾರಗಳೊಂದಿಗೆ ಅವರನ್ನು ಸ್ವಾಗತಿಸಿ. ಅದಕ್ಕಾಗಿ ಈ ಕ್ರಿಸ್‌ಮಸ್ ಹಬ್ಬದ ಸಮಯದಲ್ಲಿ ನಿಮಗಾಗಿ ಗರಿ ಗರಿಯಾದ ತಿಂಡಿಗಳ ರೆಸಿಪಿ ಇಲ್ಲಿದೆ.

1 / 6
ಆಲೂಗಡ್ಡೆ ಚೀಸ್: ಬೇಯಿಸಿದ ಆಲೂಗಡ್ಡೆಯನ್ನು ಸಿಪ್ಪೆ ತೆಗೆದು ಮ್ಯಾಶ್ ಮಾಡಿ. ಇದಕ್ಕೆ ಬೆಳ್ಳುಳ್ಳಿ, , ಕೊತ್ತಂಬರಿ ಸೊಪ್ಪು, ಚಿಟಿಕೆ ಉಪ್ಪು, ಚಿಲ್ಲಿ ಫ್ಲೇಕ್ಸ್, ಮೆಣಸು ಮತ್ತು ಬ್ರೆಡ್ ತುಂಡುಗಳನ್ನು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ ಉಂಡೆ ಮಾಡಿ. ನಂತರ ಚೀಸ್ ತೆಗೆದುಕೊಂಡು ಚಿಕ್ಕ ಚಿಕ್ಕದಾಗಿ ಕತ್ತರಿಸಿ ಮತ್ತು ಈಗಾಗಲೇ ಮಾಡಿಟ್ಟ ಉಂಡೆಗಳ ಒಳಗೆಡೆ ಮಧ್ಯಕ್ಕೆ ಹಾಕಿ. ನಂತರ ಇದನ್ನು ಕಾರ್ನ್‌ಫ್ಲೋರ್‌ನಲ್ಲಿ ಹರಡಿ ನಂತರ ಹಸಿ ಮೊಟ್ಟೆಯಲ್ಲಿ ಅದ್ದಿ ನಂತರ ಬ್ರೆಡ್ ಪುಡಿಗಳನ್ನು ಇದರ ಮೇಲೆ ಹರಡಿ ಎಣ್ಣೆಯಲ್ಲಿ ಕರಿಯಿರಿ.

2 / 6
ಚಿಕನ್‌ ನ್ಯಾಚೋ: ಮೊದಲಿಗೆ ಕೋಳಿ ಮಾಂಸವನ್ನು ತೆಗೆದುಕೊಂಡು ನೀರಿನಲ್ಲಿ ಹಾಕಿ ಬೇಯಿಸಿ. ಬೇಯಿಸಿದ ಕೋಳಿಯನ್ನು ಚಿಕ್ಕ ಚಿಕ್ಕದಾಗಿ ಚೂರು ಚೂರುಮಾಡಿ. ಈಗ ಒಂದು ಪ್ಯಾನ್‌ನಲ್ಲಿ ಸ್ವಲ್ಪ ಎಣ್ಣೆಯನ್ನು ಸೇರಿಸಿ ಮತ್ತು ಎಣ್ಣೆ ಬಿಸಿಯಾದ ಮೇಲೆ ಚೂರುಚೂರು ಮಾಡಿದ ಚಿಕನ್‌ ಹಾಕಿ. ನಂತರ ಕೆಂಪು ಮೆಣಸಿನ ಪುಡಿ, ಉಪ್ಪು, ಮೆಣಸು ಮತ್ತು ಗರಂ ಮಸಾಲೆ ಪುಡಿಯನ್ನು ಹಾಕಿ, ಬೇಯಲು ಬಿಡಿ. ನಂತರ ಗ್ಯಾಸ್ ಆಫ್ ಮಾಡಿ. ಅದಕ್ಕೆ ನುಣ್ಣಗೆ ಕತ್ತರಿಸಿದ ಈರುಳ್ಳಿ, ಟೊಮ್ಯಾಟೊ, ಕಾರ್ನ್ ಮತ್ತು ಕ್ಯಾಪ್ಸಿಕಮ್ ಹಾಕಿ. ನಂತರ ನಿಮ್ಮ ರುಚಿಗೆ ಬೇಕಾಗುವ ಸಾಸ್ ಮತ್ತು ಚೀಸ್ ಸಾಸ್ ಹಾಕಿ. ಚಿಕನ್‌ ನ್ಯಾಚೋ ಸಿದ್ದವಾಗಿದೆ.

3 / 6
ಗಾರ್ಲಿಕ್ ಪ್ರಾನ್ಸ್: ಸಿಗಡಿ ಮೀನುಗಳನ್ನು ಚೆನ್ನಾಗಿ ತೊಳೆದಿಡಿ. ನಂತರ, ನಾನ್ ಸ್ಟಿಕ್ ಪ್ಯಾನ್ ತೆಗೆದುಕೊಂಡು ಅದಕ್ಕೆ ಬೆಣ್ಣೆ, ಆಲಿವ್ ಎಣ್ಣೆ ಹಾಕಿ ಇದು ಬಿಸಿಯಾದ ಮೇಲೆ ಇದಕ್ಕೆ ಕತ್ತರಿಸಿದ ಬೆಳ್ಳುಳ್ಳಿಯನ್ನು ಹಾಕಿ, ಬೆಳ್ಳುಳ್ಳಿ ಕಂದು ಬಣ್ಣಕ್ಕೆ ತಿರುಗಿದಾಗ, ಪ್ಯಾನ್‌ಗೆ ಸೀಗಡಿಗಳನ್ನು ಸೇರಿಸಿ. ಸೀಗಡಿಗಳು ಸೇರಿಸಿದ ನಂತರ, ಉಪ್ಪು ಮತ್ತು ಮೆಣಸು ಸೇರಿಸಿ. ನಂತರ ವೈಟ್ ವೈನ್ ಸೇರಿಸಿ ಬೇಯಿಸಿ. ನಂತರ ಕೊತ್ತಂಬರಿ ಸೊಪ್ಪು ಮತ್ತು ನಿಂಬೆರಸ ಹಾಕಿ. ಗಾರ್ಲಿಕ್ ಪ್ರಾನ್ಸ್ ಸಿದ್ದವಾಗಿದೆ.

4 / 6
ಪನೀರ್ ಪಾಪ್ ಕಾರ್ನ್ : ಒಂದು ಪಾತ್ರೆಯಲ್ಲಿ ಪನೀರ್, ಕಾಶ್ಮೀರಿ ಕೆಂಪು ಮೆಣಸಿನ ಪುಡಿ, ಕೊತ್ತಂಬರಿ ಸೊಪ್ಪು,ಓರೆಗಾನೊ, ಕರಿಮೆಣಸಿನ ಪುಡಿ ಮತ್ತು ಉಪ್ಪು ಸೇರಿಸಿ. ನಂತರ ಪನೀರ್ ತುಂಡುಗಳು ಒಡೆಯದಂತೆ ನಿಧಾನವಾಗಿ ಮಿಶ್ರಣ ಮಾಡಿ. ಇದನ್ನು ಎಣ್ಣೆಯಲ್ಲಿ ಕಂದು ಬಣ್ಣ ಆಗುವವರೆಗೆ ಫ್ರೈ ಮಾಡಿ, ಪನೀರ್ ಪಾಪ್ ಕಾರ್ನ್ ಸಿದ್ಧವಾಗಿದೆ.

5 / 6
ಆಲೂಗಡ್ಡೆ ರಿಂಗ್ಸ್: ಆಲೂಗಡ್ಡೆ ರಿಂಗ್ಸ್ ತಯಾರಿಸಲು ಒಂದು ಪ್ಯಾನ್‌ನಲ್ಲಿ ಸ್ವಲ್ಪ ಬೆಣ್ಣೆ, ಬೆಳ್ಳುಳ್ಳಿ, ಚಿಲ್ಲಿ ಫ್ಲೇಕ್ಸ್ ಮತ್ತು ಓರೆಗಾನೊ ಸೇರಿಸಿ. ನಂತರ ಸ್ವಲ್ಪ ನೀರು ಸೇರಿಸಿ. ನೀರು ಕುದಿಯುತ್ತಿರುವಾಗ ರವೆ ಸೇರಿಸಿ. 5 ನಿಮಿಷದ ನಂತರ ಬೆಂಕಿಯಿಂದ ಕೆಳಗಿಳಿಸಿ ತಣ್ಣಗಾಗಲು ಬಿಡಿ. ಮುಂದೆ, ಅದಕ್ಕೆ ಬೇಯಿಸಿದ ಹಿಸುಕಿದ ಎರಡು ಆಲೂಗಡ್ಡೆಗಳನ್ನು ಸೇರಿಸಿ. ನಂತರ ಚಪ್ಪಟೆ ಆಕಾರದಲ್ಲಿ ತಟ್ಟಿ ಕಟ್ಟರ್ ಬಳಸಿ ಸಣ್ಣ ಉಂಗುರಗಳ ಆಕಾರದಲ್ಲಿ ಕತ್ತರಿಸಿ. ಅಥವಾ ಕೈಯಲ್ಲಿಯೇ ಉಂಗುರಗಳ ಆಕಾರದಲ್ಲಿ ಮಡಚಬಹುದು. ನಂತರ ಅದರ ಮೇಲೆ ಸ್ವಲ್ಪ ಕಾರ್ನ್‌ಫ್ಲೋರ್ ಸಿಂಪಡಿಸಿ ಮತ್ತು ಗರಿಗರಿಯಾಗುವವರೆಗೆ ಡೀಪ್ ಫ್ರೈ ಮಾಡಿ. ಈಗ ಆಲೂಗಡ್ಡೆ ರಿಂಗ್ಸ್ ಸಿದ್ದವಾಗಿದೆ.

6 / 6