- Kannada News Photo gallery Siddu Moolimani and Yash Shetty starrer new Kannada movie muhurtha held in Bengaluru
ಯಶ್ ಶೆಟ್ಟಿ, ಸಿದ್ದು ಮೂಲಿಮನೆ ಹೊಸ ಚಿತ್ರಕ್ಕೆ ಪೂಜೆ; ‘ಧರಣಿ ಮಂಡಲ..’ ಬಳಿಕ ಇನ್ನೊಂದು ಪ್ರಯತ್ನ
Siddu Moolimani | Yash Shetty: ‘ಧರಣಿ ಮಂಡಲ ಮಧ್ಯದೊಳಗೆ’ ಚಿತ್ರದಲ್ಲಿ ನಟಿಸಿದ ಯಶ್ ಶೆಟ್ಟಿ ಮತ್ತು ಸಿದ್ದು ಮೂಲಿಮನಿ ಅವರು ಮತ್ತೊಂದು ಸಿನಿಮಾದಲ್ಲಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಹೊಸ ಚಿತ್ರದ ಮುಹೂರ್ತ ನೆರವೇರಿದೆ.
Updated on: Dec 16, 2022 | 3:34 PM

Siddu Moolimani and Yash Shetty starrer new Kannada movie muhurtha held in Bengaluru

Siddu Moolimani and Yash Shetty starrer new Kannada movie muhurtha held in Bengaluru

ಸದ್ಯಕ್ಕೆ ‘K A’ ಎಂದು ಅರ್ಧ ಟೈಟಲ್ ರಿವೀಲ್ ಮಾಡುವ ಮೂಲಕ ಕುತೂಹಲ ಮೂಡಿಸಲಾಗಿದೆ. ‘ಧರಣಿ ಮಂಡಲ ಮಧ್ಯದೊಳಗೆ’ ಚಿತ್ರಕ್ಕೆ ಸಹ ನಿರ್ದೇಶಕನಾಗಿದ್ದ ಸಂತೋಷ್ ಈಗ ಸ್ವತಂತ್ರ ನಿರ್ದೇಶಕನಾಗಿ ಚೊಚ್ಚಲ ಸಿನಿಮಾ ಶುರುಮಾಡಿದ್ದಾರೆ.

ಯಶ್ ಶೆಟ್ಟಿ ಈಗಾಗಲೇ ಅನೇಕ ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಅದೇ ರೀತಿ, ಸಿದ್ದು ಮೂಲಿಮನಿ ಕೂಡ ವಿವಿಧ ಬಗೆಯ ಪಾತ್ರದ ಮೂಲಕ ಗುರುತಿಸಿಕೊಂಡಿದ್ದಾರೆ. ‘ಧರಣಿ ಮಂಡಲ ಮಧ್ಯದೊಳಗೆ’ ಬಳಿಕ ಅವರಿಬ್ಬರು ಮತ್ತೆ ಒಂದಾಗಿದ್ದಾರೆ.

ಕೀರ್ತನ್ ಪೂಜಾರಿ ಛಾಯಾಗ್ರಹಣ, ರೋಣದ ಬಕ್ಕೇಷ್ ಹಾಗೂ ಕಾರ್ತಿಕ್ ಚಿನ್ನೋಜಿ ರಾವ್ ಸಂಗೀತ ನಿರ್ದೇಶನ, ಗೌಸ್ ಪೀರ್ ಗೀತ ರಚನೆ, ಉಜ್ವಲ್ ಚಂದ್ರ ಸಂಕಲನ, ಚಂದ್ರು ಬಂಡೆ ಅವರ ಸಾಹಸ ನಿರ್ದೇಶನ ಹಾಗೂ ಪ್ರಶಾಂತ್ ಅವರ ಕಲಾ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರಲಿದೆ.




