Updated on: Jun 29, 2022 | 12:54 PM
2022ರ ಜುಲೈನಿಂದ ಬಹಳ ವಿಚಾರಗಳಲ್ಲಿ ನಿಯಮಾವಳಿಗಳು ಬದಲಾಗಲಿವೆ. ಕ್ರಿಪ್ಟೋಕರೆನ್ಸಿಗಳ ಮೇಲೆ ಸರ್ಕಾರ ಶೇಕಡಾ 30ರಷ್ಟು ತೆರಿಗೆ ವಿಧಿಸಲಾಗಿತ್ತು. ಆ ಬಳಿಕ ಇದೀಗ ಜುಲೈ 1ರಿಂದ ಕ್ರಿಪ್ಟೋ ಹೂಡಿಕೆದಾರರಿಗೆ ಮತ್ತೊಂದು ಹಿನ್ನಡೆ ಆಗಲಿದೆ. ವಾಸ್ತವವಾಗಿ, ಜುಲೈನಿಂದ ಹೂಡಿಕೆದಾರರು ಎಲ್ಲ ರೀತಿಯ ಕ್ರಿಪ್ಟೋ ವಹಿವಾಟುಗಳ ಮೇಲೆ ಶೇಕಡಾ 1ರ ದರದಲ್ಲಿ ಟಿಡಿಎಸ್ ಅನ್ನು ಪಾವತಿಸಬೇಕಾಗುತ್ತದೆ. ಅದು ಕ್ರಿಪ್ಟೋ ಆಸ್ತಿಯನ್ನು ಮಾರಿದ್ದರಿಂದ ಲಾಭವೋ ಅಥವಾ ನಷ್ಟವೋ ಒಟ್ಟಿನಲ್ಲಿ ಪಾವತಿಸಬೇಕು. ವಾಸ್ತವವಾಗಿ, ಸರ್ಕಾರದ ಈ ನಿರ್ಧಾರದ ಹಿಂದಿನ ಉದ್ದೇಶವೆಂದರೆ, ಹಾಗೆ ಮಾಡುವುದರಿಂದ ಕ್ರಿಪ್ಟೋಕರೆನ್ಸಿಗಳಲ್ಲಿ ವಹಿವಾಟು ನಡೆಸುವವರ ಮೇಲೆ ನಿಗಾ ಇಡಲು ಸಾಧ್ಯವಾಗುತ್ತದೆ.
ಉಡುಗೊರೆಗಳಿಗೆ ಟಿಡಿಎಸ್ ಎರಡನೇ ಪ್ರಮುಖ ಬದಲಾವಣೆ ಅಂದರೆ, ಜುಲೈ 1, 2022ರಿಂದ ವ್ಯವಹಾರಗಳಿಂದ ಸ್ವೀಕರಿಸಿದ ಉಡುಗೊರೆಗಳಿಗೆ ಮೂಲದಲ್ಲಿ (ಟಿಡಿಎಸ್) ಶೇಕಡಾ 10ರ ದರದಲ್ಲಿ ತೆರಿಗೆ ಕಡಿತಗೊಳಿಸಬೇಕಾಗುತ್ತದೆ. ಈ ತೆರಿಗೆಯು ಸಾಮಾಜಿಕ ಮಾಧ್ಯಮದ ಪ್ರಭಾವಿಗಳು ಮತ್ತು ವೈದ್ಯರಿಗೆ ಅನ್ವಯಿಸುತ್ತದೆ. ಕಂಪೆನಿಯಿಂದ ಮಾರ್ಕೆಟಿಂಗ್ ಉದ್ದೇಶಗಳಿಗಾಗಿ ಉಡುಗೊರೆಯನ್ನು ನೀಡಿದಾಗ ಸಾಮಾಜಿಕ ಮಾಧ್ಯಮದ ಪ್ರಭಾವಿಗಳು ಟಿಡಿಎಸ್ ಪಾವತಿಸಬೇಕಾಗುತ್ತದೆ. ಆದರೆ ಈ ನಿಯಮವು ಉಚಿತ ಔಷಧ ಮಾದರಿಗಳು, ವಿದೇಶಿ ವಿಮಾನ ಟಿಕೆಟ್‌ಗಳು ಅಥವಾ ವೈದ್ಯರು ಸ್ವೀಕರಿಸುವ ಇತರ ದುಬಾರಿ ಉಡುಗೊರೆಗಳಿಗೆ ಅನ್ವಯಿಸುತ್ತದೆ.
ಕಾರ್ಮಿಕ ನಿಯಮಾವಳಿಗಳಲ್ಲಿ ಬದಲಾವಣೆ
ಏಸಿ ನೇರವಾಗಿ 4 ಸ್ಟಾರ್ಗೆ
ಪ್ಯಾನ್ ಕಾರ್ಡ್ ಆಧಾರ್ ಜೋಡಣೆ
ಡಿಮ್ಯಾಟ್ ಟ್ರೇಡಿಂಗ್ ಖಾತೆಯ ಕೆವೈಸಿ
ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಹೆಚ್ಚಳ
Published On - 12:29 pm, Wed, 29 June 22