Apple iPhone 12 ಮತ್ತು Apple iPhone 12 Mini ಕಡಿಮೆ ಬೆಲೆಗೆ ಖರೀದಿಸುವ ಅವಕಾಶ ಕಂಪನಿ ಮಾಡಿಕೊಟ್ಟಿದೆ. ಇ-ಕಾಮರ್ಸ್ ತಾಣವಾದ ಫ್ಲಿಪ್ಕಾರ್ಟ್ನಲ್ಲಿ ಈ ಎರಡೂ ಸ್ಮಾರ್ಟ್ಫೋನ್ಗಳ ಬೆಲೆಯನ್ನು ಕಡಿತಗೊಳಿಸಲಾಗಿದೆ. ಇದರ ಜೊತೆಗೆ ಇಕ್ಸ್ಚೇಂಜ್ ಆಫರ್, ಬ್ಯಾಂಕ್ ಕೊಡುಗೆಗಳ ಮೂಲಕ ಈ ಫೋನನ್ನು ನೀವು ಮತ್ತಷ್ಟು ಡಿಸ್ಕೌಂಟ್ನಲ್ಲಿ ಖರೀದಿಸಬಹುದು.
ಐಫೋನ್ 12 ಮೂಲ ಬೆಲೆ 65,900 ರೂ. ಆಗಿದ್ದು, ರಿಯಾಯಿತಿಗಳು ಮತ್ತು ಇತರೆ ಕೊಡುಗೆಗಳ ನಂತರ ಇದನ್ನು ನೀವು ಕೇವಲ 39,199 ರೂ. ಗಳಿಗೆ ಖರೀದಿಸಬಹುದು. ಇನ್ನು ಐಫೋನ್ 12 ಮಿನಿ ಅನ್ನು ಕೇವಲ 26,499 ರೂ. ಗೆ ನಿಮ್ಮದಾಗಿಸಬಹುದು.
Apple iPhone ಗೆ USB C ಟೈಪ್ ಚಾರ್ಜರ್ ಅಳವಡಿಸಲು ಚಿಂತನೆ
ಐಫೋನ್ 12 ರ ಬೆಲೆಯನ್ನು ಮತ್ತಷ್ಟು ಕಡಿಮೆ ಮಾಡಲು ಇತರೆ ಆಫರ್ ಕೂಡ ಇದೆ. ಇದರ ಸಹಾಯದಿಂದ 14,800 ರೂ. ವರೆಗೆ ಮತಷ್ಟು ರಿಯಾಯಿತಿ ಪಡೆಯಬಹುದಾಗಿದೆ. iPhone 12 UPI ವಹಿವಾಟಿನ ಸಹಾಯದಿಂದ, ನೀವು ಶೇಕಡಾ 10 ರಷ್ಟು ರಿಯಾಯಿತಿಯನ್ನು ಕೂಡ ಪಡೆಯಬಹುದು.
iPhone 12 Mini (64GB) ಬೆಲೆ ರೂ. 59,900. ಇದರ ಮೇಲೆ ಶೇಕಡಾ 31 ರಷ್ಟು ರಿಯಾಯಿತಿ ಪಡೆದ ನಂತರ ಕೇವಲ ರೂ. 41999 ನಲ್ಲಿ ಖರೀದಿಸಬಹುದು. ಈ ಡೀಲ್ ಫ್ಲಿಪ್ಕಾರ್ಟ್ನಲ್ಲಿ ಮಾತ್ರ ಲಭ್ಯವಿದೆ. ಈ ಕೊಡುಗೆಯ ಅಡಿಯಲ್ಲಿ ಖರೀದಿದಾರರು 18601 ರೂ. ಗಳ ರಿಯಾಯಿತಿ ಪಡೆಯಬಹದು.
Published On - 1:27 pm, Fri, 25 February 22