
ಶ್ರೀನಗರ ಕಿಟ್ಟಿ, ರಚಿತಾ ರಾಮ್ ನಟಿಸಿ ನಾಗಶೇಖರ್ ನಿರ್ದೇಶನ ಮಾಡಿರುವ ‘ಸಂಜು ವೆಡ್ಸ್ ಗೀತಾ 2’ ಸಿನಿಮಾ ಚಿತ್ರಮಂದಿರಗಳಲ್ಲಿ ಎರಡೆರಡು ಬಾರಿ ಬಿಡುಗಡೆ ಆಯ್ತು. ಆದರೂ ಫ್ಲಾಪ್ ಆಯ್ತು. ಇದೀಗ ಈ ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿದೆ.

ಕನ್ನಡದಲ್ಲಿ ವೆಬ್ ಸರಣಿಗಳು ಬರುವುದು ಕಡಿಮೆ ಎಂಬ ದೂರು ಇರುವಾಗಲೇ ‘ಅಯ್ಯನ ಮನೆ’ ವೆಬ್ ಸರಣಿ ಬಿಡುಗಡೆ ಆಗಿ ಹಿಟ್ ಆಯ್ತು. ಇದೀಗ ಲೂಸಿಯಾ ಪವನ್ ನಟಿಸಿರುವ ‘ಶೋಧ’ ಹೆಸರಿನ ವೆಬ್ ಸರಣಿ ಬಿಡುಗಡೆ ಆಗಿದೆ. ಇದು ಸಹ ಜೀ5ನಲ್ಲಿ ಲಭ್ಯವಿದೆ.

ಖ್ಯಾತ ನಟ ಫಹಾದ್ ಫಾಸಿಲ್ ಮತ್ತು ತಮಿಳಿನ ಲಿಜೆಂಡರಿ ಹಾಸ್ಯನಟ ವಡಿವೇಲು ಒಟ್ಟಿಗೆ ನಟಿಸಿರುವ ಥ್ರಿಲ್ಲರ್ ಮತ್ತು ಡ್ರಾಮಾ ಅಂಶಗಳನ್ನು ಒಳಗೊಂಡಿರುವ ಸಿನಿಮಾ ‘ಮಾರೀಸನ್’ ಈ ವಾರ ಒಟಿಟಿಗೆ ಬಂದಿದೆ. ಒಬ್ಬ ಕಳ್ಳ ಮತ್ತು ಒಬ್ಬ ಮರೆವಿನ ಕಾಯಿಲೆಯುಳ್ಳ ವ್ಯಕ್ತಿಯ ನಡುವೆ ನಡೆವ ಕತೆಯಿದು. ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ಲಭ್ಯವಿದೆ.

ವಿಜಯ್ ಸೇತುಪತಿ ಮತ್ತು ನಿತ್ಯಾ ಮೆನನ್ ನಟಿಸಿರುವ ರೊಮ್ಯಾಂಟಿಕ್ ಕಾಮಿಡಿ ಮತ್ತು ಆಕ್ಷನ್ ಅನ್ನೂ ಒಳಗೊಂಡಿರುವ ‘ತಲೈವನ್-ತಲೈವಿ’ ಸಿನಿಮಾ ಕೆಲ ದಿನಗಳ ಹಿಂದೆ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿ ಗಮನ ಸೆಳೆದಿತ್ತು. ಇದೀಗ ಈ ಸಿನಿಮಾ ಈ ವಾರ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿದೆ.

ಇತ್ತೀಚೆಗೆ ಬಿಡುಗಡೆ ಆಗಿ ಬ್ಲಾಕ್ ಬಸ್ಟರ್ ಆದ ಬ್ರಾಡ್ ಪಿಟ್ ನಟನೆಯ ‘ಎಫ್1’ ಸಿನಿಮಾ ಇದೀಗ ಒಟಿಟಿಗೆ ಬಂದಿದೆ. ಭಾರತದಲ್ಲೂ ಬ್ಲಾಕ್ ಬಸ್ಟರ್ ಆದ ಈ ಸಿನಿಮಾ ಇದೀಗ ಅಮೆಜಾನ್ ಪ್ರೈಂನಲ್ಲಿ ಬಾಡಿಗೆ ವಿಧಾನದಲ್ಲಿ ವೀಕ್ಷಣೆಗೆ ಲಭ್ಯವಿದೆ.

ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ಬಾಸ್ ಹಿಂದಿ ಸೀಸನ್ 19 ಇದೇ ವಾರ ಆರಂಭವಾಗಲಿದ್ದು, ಟಿವಿಯ ಜೊತೆಗೆ ಜಿಯೋ ಹಾಟ್ಸ್ಟಾರ್ನಲ್ಲಿಯೂ ಪ್ರಸಾರ ಆಗಲಿದೆ. ಆಗಸ್ಟ್ 24 ರಿಂದ ಬಿಗ್ಬಾಸ್ ಹಿಂದಿ ಪ್ರಸಾರ ಆರಂಭವಾಗಲಿದೆ.

ಕಾಜೋಲ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ಹಾರರ್ ಥ್ರಿಲ್ಲರ್ ಸಿನಿಮಾ ‘ಮಾ’ ಕೆಲ ವಾರಗಳ ಹಿಂದೆ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿ ಸಾಧಾರಣ ಯಶಸ್ಸು ಗಳಿಸಿತ್ತು. ಈ ಸಿನಿಮಾ ಇದೀಗ ನೆಟ್ಫ್ಲಿಕ್ಸ್ನಲ್ಲಿ ತೆರೆಗೆ ಬಂದಿದೆ.