
ದೇಹಕ್ಕೆ ಅಗತ್ಯವಿರುವಷ್ಟು ಪ್ರಮಾಣದ ನೀರನ್ನು ಸೇವಿಸಿ. ಇದು ನೀವು ಹೊಸದಾಗಿ ಕಿವಿ ಚುಚ್ಚಿಸಿಕೊಂಡಿದ್ದರ ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಹೊಸದಾಗಿ ಕಿವಿ ಚುಚ್ಚಿಸಿಕೊಡಾಗ ಅಗಾಧ ನೋವು ಇರುತ್ತದೆ. ಅದನ್ನು ಹೋಗಲಾಡಿಸಲು ಆರೋಗ್ಯಕರವಾದ ಆಹಾರ ತಿನ್ನಬೇಕು. ಜತೆಗೆ ನೋವು ಬೇಗ ವಾಸಿಯಾಗಲು ಕಬ್ಬಿಣ, ವಿಟಮಿನ್ ಬಿ, ವಿಟಮಿನ್ ಸಿ ಪೂರಕ ಆಹಾರವನ್ನು ತೆಗೆದುಕೊಳ್ಳಿ.

ಕಿವಿ ಚುಚ್ಚಿದ ಮೇಲೆ ಆ ಜಾಗದಲ್ಲಿ ಸ್ರವಿಸುವಿಕೆ ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಿ. ಆದಷ್ಟು ಸ್ವಚ್ಛವಾಗಿರಿಸಿಕೊಳ್ಳಿ.

ಚರ್ಮ ಒಣಗಿರುವಾಗ ನಿಮ್ಮ ಆಭರಣವನ್ನು ತೆಗೆಯಬೇಡಿ. ಅದು ನೊವುಂಟು ಮಾಡಬಹುದು. ಆಭರಣವಿರುವ ಜಾಗವನ್ನು ಸ್ವಲ್ಪ ಒದ್ದೆ ಮಾಡಿಕೊಂಡು ನಿಧಾನವಾಗಿ ತೆರೆಯಿರಿ.

ತಲೆಸ್ನಾನ ಮಾಡುವಾಗ ಎಚ್ಚರಿಕೆವಹಿಸಿ. ಹೆಚ್ಚು ವಾಸನೆಯಿರುವ ಸೋಪ್ನ ಬಳಕೆ ಬೇಡ. ಕೂದಲಿನ ಸ್ನಾನದ ಬಳಿಕ ಆಭರಣಗಳಿರುವ ಜಾಗವನ್ನು ನೀರಿನಿಂದ ಸ್ವಚ್ಛಗೊಳಿಸಿ.

ನಿಮ್ಮ ಆಭರಣಗಳನ್ನು ಉಪ್ಪು ನೀರಿನಲ್ಲಿ ಸ್ವಚ್ಚಗೊಳಿಸಿ. ಇದರಿಂದ ಬ್ಯಾಕ್ಟೀರಿಯಾಗಳಿದ್ದರೆ ಸ್ವಚ್ಚವಾಗುತ್ತದೆ. ನಿಮ್ಮ ಕಿವಿಯಲ್ಲಿ ಆಭರಣ ಧರಿಸಿದ ವೇಳೆ ನೋವು ಕಾಣಿಸಕೊಳ್ಳುವುದಿಲ್ಲ.
Published On - 4:14 pm, Thu, 20 January 22