Kannada News Photo gallery Hockey World Cup2023 | Know how much was spent on Odisha FIH Hockey Mens World Cup 2023
Hockey World Cup2023: ಅಬ್ಬಬ್ಬಾ,, ಇಷ್ಟೊಂದಾ! ಹಾಕಿ ವಿಶ್ವಕಪ್‌ನ ಬಜೆಟ್ ಎಷ್ಟು ಸಾವಿರ ಕೋಟಿ ಗೊತ್ತಾ?
Hockey World Cup2023: ಈ ಬಾರಿಯ ವಿಶ್ವಕಪ್ ಆತಿಥ್ಯಕ್ಕೆ 1098 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದು ಬಜೆಟ್ನಲ್ಲಿ ತೋರಿಸಲಾಗಿದೆ. ಇದು ಕ್ರೀಡಾಂಗಣ ನಿರ್ಮಾಣ, ಸಾರಿಗೆ, ನಿರ್ವಹಣೆಗೆ ಎಲ್ಲಾ ರೀತಿಯ ವೆಚ್ಚಗಳನ್ನು ಒಳಗೊಂಡಿದೆ.
ಭಾರತ ಸತತ ಎರಡನೇ ಬಾರಿಗೆ ಹಾಕಿ ವಿಶ್ವಕಪ್‌ಗೆ ಆತಿಥ್ಯ ವಹಿಸುತ್ತಿದೆ. ಆದಾಗ್ಯೂ, ಈ ಬಾರಿಯ ವಿಶ್ವಕಪ್ ಅನ್ನು ದೊಡ್ಡ ಮಟ್ಟದಲ್ಲಿ ಮತ್ತು 2018 ಕ್ಕಿಂತ ಹೆಚ್ಚು ವೈಭವದಿಂದ ಆಯೋಜಿಸಲಾಗಿದೆ. ರೂರ್ಕೆಲಾ ಮತ್ತು ಭುವನೇಶ್ವರದಲ್ಲಿ ಹಾಕಿ ವಿಶ್ವಕಪ್ ನಡೆಯುತ್ತಿದ್ದು, ಅದ್ಧೂರಿಯಾಗಿ ಈ ಕ್ರೀಡಾಕೂಟವನ್ನು ಆರಂಭಿಸಲಾಗಿದೆ. ಈ ಹಿರಿಮೆಗೆ ಹಣವೂ ನೀರಿನಂತೆ ಹರಿದುಬಂದಿದೆ.
1 / 5
ಈ ಬಾರಿಯ ವಿಶ್ವಕಪ್ ಆತಿಥ್ಯಕ್ಕೆ 1098 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದು ಬಜೆಟ್ನಲ್ಲಿ ತೋರಿಸಲಾಗಿದೆ. ಇದು ಕ್ರೀಡಾಂಗಣ ನಿರ್ಮಾಣ, ಸಾರಿಗೆ, ನಿರ್ವಹಣೆಗೆ ಎಲ್ಲಾ ರೀತಿಯ ವೆಚ್ಚಗಳನ್ನು ಒಳಗೊಂಡಿದೆ. ರೂರ್ಕೆಲಾದ ಬಿರ್ಸಾ ಮುಂಡಾ ಕ್ರೀಡಾಂಗಣವನ್ನು ನಿರ್ಮಿಸಲು ಹೆಚ್ಚಿನ ಹಣವನ್ನು ಖರ್ಚು ಮಾಡಲಾಗಿದೆ. 20 ಸಾವಿರ ಪ್ರೇಕ್ಷಕರ ಸಾಮರ್ಥ್ಯವಿರುವ ಈ ಕ್ರೀಡಾಂಗಣವನ್ನು ನಿರ್ಮಿಸಲು 875.78 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ.
2 / 5
ಈ ವಿಶ್ವಕಪ್‌ನ ಪಂದ್ಯಗಳು ಭುವನೇಶ್ವರದ ಕಳಿಂಗ ಕ್ರೀಡಾಂಗಣ ಮತ್ತು ರೂರ್ಕೆಲಾದ ಬಿರ್ಸಾ ಮುಂಡಾ ಕ್ರೀಡಾಂಗಣದಲ್ಲಿ ನಡೆಯಲಿವೆ. ವಿಶ್ವಕಪ್‌ಗಾಗಿ ಎರಡೂ ಕ್ರೀಡಾಂಗಣಗಳಲ್ಲಿ ಹೊಸ ಟರ್ಫ್ ಹಾಕಲಾಗಿದೆ. ಇದಕ್ಕಾಗಿ ಸುಮಾರು 17.5 ಕೋಟಿ ರೂ. ಖರ್ಚು ಮಾಡಲಾಗಿದೆ.
3 / 5
ಈ ಬಾರಿಯ ವಿಶ್ವಕಪ್‌ನಲ್ಲಿ 16 ತಂಡಗಳು ಭಾಗವಹಿಸುತ್ತಿವೆ. ಪಂದ್ಯಾವಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆಟಗಾರರು, ಕೋಚಿಂಗ್ ಸಿಬ್ಬಂದಿ ಮತ್ತು ಇತರ ಅಧಿಕಾರಿಗಳ ನಿವಾಸಕ್ಕಾಗಿ ಹೊಸ ಕಟ್ಟಡಗಳನ್ನು ಸಿದ್ಧಪಡಿಸಲಾಗಿದೆ. ಇದಕ್ಕಾಗಿ 84 ಕೋಟಿ ರೂ. ವ್ಯಯಿಸಲಾಗಿದೆ.
4 / 5
ಸ್ಥಳ ನಿರ್ವಹಣೆ, ತಂಡಗಳು, ಅಧಿಕಾರಿಗಳು ಮತ್ತು ಇತರ ಜನರು ಬಂದು ಹೋಗುವುದಕ್ಕೆ 75 ಕೋಟಿ ರೂ. ವ್ಯಯಿಸಿದ್ದು, ಇದು ವಿಶ್ವಕಪ್‌ನ ಬ್ರ್ಯಾಂಡಿಂಗ್ ಮತ್ತು ಪ್ರಚಾರದ ವೆಚ್ಚವನ್ನು ಸಹ ಒಳಗೊಂಡಿದೆ.