Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಲು ರಜೆ ಮುಕ್ತಾಯ, ಮಳೆ ಪರಿಣಾಮ: ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಟ್ರಾಫಿಕ್ ಜಾಮ್

ಬೆಂಗಳೂರು, ಅಕ್ಟೋಬರ್ 14: ಹಬ್ಬದ ರಜೆಗಳು, ದೀರ್ಘ ವಾರಾಂತ್ಯದ ನಂತರ ಬೆಂಗಳೂರಿನ ರಸ್ತೆಗಳಲ್ಲಿ ಸೋಮವಾರ ಬೆಳಗ್ಗೆ ಟ್ರಾಫಿಕ್ ಜಾಮ್ ಉಂಟಾಯಿತು. ಊರಿನಿಂದ ಬರುವವರು, ಕಚೇರಿಗೆ ತೆರಳುವವರು, ಮಧ್ಯೆ ಪಿರಿಪಿರಿ ಮಳೆ ಸಂಚಾರದ ದಟ್ಟಣೆ ಹೆಚ್ಚಳಕ್ಕೆ ಕಾರಣವಾಯಿತು. ಪರಿಣಾಮವಾಗಿ ವಾಹನ ಸಂಚಾರರು ಪರದಾಡುವಂತಾಯಿತು.

Ganapathi Sharma
|

Updated on: Oct 14, 2024 | 2:49 PM

ಇಂದು (ಸೋಮವಾರ) ಬೆಳಗ್ಗೆ ಬೆಂಗಳೂರಿನಾದ್ಯಂತ ಭಾರಿ ಸಂಚಾರ ದಟ್ಟಣೆ ಕಂಡುಬಂದಿದೆ. ವಾಹನಗಳ ವಿಪರೀತ ಒಳಹರಿವಿನಿಂದ ಈ ದಟ್ಟಣೆ ಉಂಟಾಗಿದೆ ಎಂದು ಬೆಂಗಳೂರಿನ ಜಂಟಿ ಆಯುಕ್ತ (ಸಂಚಾರ) ಎಂಎನ್ ಅನುಚೇತ್ ತಿಳಿಸಿದ್ದಾರೆ.

1 / 5
ಬೆಂಗಳೂರಿನ ತುಮಕೂರು ರಸ್ತೆ, ಮಾದಾವರದಿಂದ ಗೊರಗುಂಟೆಪಾಳ್ಯ ಮೆಟ್ರೋ ನಿಲ್ದಾಣದವರೆಗೆ ನಿರಂತರ ಟ್ರಾಫಿಕ್ ಜಾಮ್ ಉಂಟಾಯಿತು. ಇದು ಔಟರ್ ರಿಂಗ್ರಸ್ತೆಯ ಎರಡೂ ಪಥಗಳ ಮೇಲೆ ಪರಿಣಾಮ ಬೀರಿತು. ಹೆಬ್ಬಾಳ ಕಡೆಗೆ ರಸ್ತೆಯಲ್ಲಿ ಸುಮಾರು ಮೂರು ಕಿಲೋಮೀಟರ್ ದೂರದವರೆಗೆ ದಟ್ಟಣೆ ವಿಸ್ತರಿಸಿತ್ತು. ಗೊರಗುಂಟೆಪಾಳ್ಯ ಕಡೆಗೆ ಸಾಗುವ ಪೀಣ್ಯ ಮೇಲ್ಸೇತುವೆಯಲ್ಲಿ ಸರಕು ಸಾಗಣೆ ವಾಹನ ಕೆಟ್ಟು ನಿಂತಿದ್ದು, ಟ್ರಾಫಿಕ್ ಜಾಮ್ ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸಿತು.

2 / 5
ಹೆಬ್ಬಾಳ ಜಂಕ್ಷನ್‌ನ ಮೂರು ಭಾಗಗಳು ಸೋಮವಾರ ಬೆಳಿಗ್ಗೆ ನಿಧಾನಗತಿಯ ಚಾಲನೆಯಿಂದ ವಾಹನ ಸವಾರರನ್ನು ಉಸಿರುಗಟ್ಟುವಂತೆ ಮಾಡಿತು. ವಿಶೇಷವಾಗಿ ವಿಮಾನ ನಿಲ್ದಾಣದಿಂದ ನಗರಕ್ಕೆ ಒಳಬರುವ ಮಾರ್ಗದಲ್ಲಿ ವಾಹನ ದಟ್ಟಣೆ ವಿಪರೀತವಾಗಿತ್ತು.

3 / 5
ಮಾರತ್ತಹಳ್ಳಿ ಮತ್ತು ಇಬ್ಲೂರು ಜಂಕ್ಷನ್‌ಗಳಲ್ಲಿ ಬೆಳಗಿನ ಪೀಕ್ ಅವರ್​ನಲ್ಲಿ ವಾಹನಗಳು ತೆವಳುತ್ತಾ ಸಾಗಿದವು. ಅದೇ ರೀತಿ ಮೈಸೂರು ರಸ್ತೆಯ ಮೇಲ್ಸೇತುವೆ ಹಾಗೂ ನಾಯಂಡಹಳ್ಳಿ ಮೆಟ್ರೊ ನಿಲ್ದಾಣ ಮತ್ತು ಸ್ಯಾಟಲೈಟ್ ಬಸ್ ನಿಲ್ದಾಣದ ನಡುವೆ ವಾಹನಗಳ ನಿಧಾನ ಸಂಚಾರ ಕಂಡು ಬಂತು.

4 / 5
ಮಳೆ ಸುರಿದಿದ್ದು, ಟ್ರಾಫಿಕ್ ಜಾಮ್ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿತು. ಬೆಳಿಗ್ಗೆ 8.30 ರ ಹೊತ್ತಿಗೆ ಬೆಂಗಳೂರು ನಗರ ಮತ್ತು ಎಚ್‌ಎಎಲ್ ವಿಮಾನ ನಿಲ್ದಾಣದ ಹವಾಮಾನ ಕೇಂದ್ರಗಳಲ್ಲಿ ಕ್ರಮವಾಗಿ 3.3 ಮಿಮೀ ಮತ್ತು 3.0 ಮಿಮೀ ಮಳೆ ದಾಖಲಾಗಿದೆ.

5 / 5
Follow us
Weekly Horoscope: ಮಾರ್ಚ್ 30 ರಿಂದ ಏಪ್ರಿಲ್ 6 ರವರೆಗಿನ ವಾರ ಭವಿಷ್ಯ

IPL 2025: ಕನ್ನಡಿಗನ ಕರಾರುವಾಕ್ ದಾಳಿಗೆ ತತ್ತರಿಸಿದ ಮುಂಬೈ ಇಂಡಿಯನ್ಸ್

Daily Devotional: ಯುಗಾದಿ ಆಚರಣೆ ಹಾಗೂ ಅದರ ಮಹತ್ವ ತಿಳಿಯಿರಿ

Daily Horoscope: ಯುಗಾದಿಯಂದು ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ

ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ

‘ಕೆಡಿ’ ಸಿನಿಮಾದ ನಿಜವಾದ ‘ಹೀರೋ’ ಅನ್ನು ಕೊಂಡಾಡಿದ ಧ್ರುವ ಸರ್ಜಾ

ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು

ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ

2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್

ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು