
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಜ್ಯೂ. ಎನ್ಟಿಆರ್ ಭೇಟಿ ಆಗಿದ್ದಾರೆ. ಭಾನುವಾರ (ಆಗಸ್ಟ್ 21) ನಡೆದ ಈ ಭೇಟಿಯ ಸಂದರ್ಭದಲ್ಲಿ ತೆಗೆದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಈ ಭೇಟಿ ವೇಳೆ ಅಮಿತ್ ಶಾ ಎದುರು ಜ್ಯೂ. ಎನ್ಟಿಆರ್ ಕೈ ಕಟ್ಟಿ ಕುಳಿತುಕೊಂಡಿದ್ದಾರೆ. ಅವರ ವಿನಯವಂತ ವ್ಯಕ್ತಿತ್ವಕ್ಕೆ ಅಭಿಮಾನಿಗಳು ಭೇಷ್ ಎನ್ನುತ್ತಿದ್ದಾರೆ.

ರಾಜಕೀಯ ಮತ್ತು ಸಿನಿಮಾ ಕ್ಷೇತ್ರದವರ ನಡುವೆ ಯಾವುದೇ ಭೇಟಿ ನಡೆದರೂ ಅಭಿಮಾನಿಗಳ ಕಣ್ಣು, ಕಿವಿ ಚುರುಕಾಗುತ್ತದೆ. ಈಗ ಜ್ಯೂ. ಎನ್ಟಿಆರ್ ಅಭಿಮಾನಿಗಳಿಗೂ ಹಾಗೆಯೇ ಆಗಿದೆ.

ಕಾರ್ಯನಿಮಿತ್ತ ಅಮಿತ್ ಶಾ ಅವರು ತೆಲಂಗಾಣಕ್ಕೆ ಬಂದಿದ್ದಾರೆ. ಈ ವೇಳೆ ಅವರು ಹೈದರಾಬಾದ್ನಲ್ಲಿ ಜ್ಯೂ. ಎನ್ಟಿಆರ್ ಅವರನ್ನು ಭೇಟಿ ಮಾಡಿದ್ದಾರೆ. ಭೇಟಿಯ ಕಾರಣ ಏನು ಎಂಬುದು ತಿಳಿದುಬಂದಿಲ್ಲ.

ಅಮಿತ್ ಶಾ ಅವರು ಸೋಶಿಯಲ್ ಮೀಡಿಯಾದಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಜ್ಯೂ. ಎನ್ಟಿಆರ್ ಬಗ್ಗೆ ಮೆಚ್ಚುಗೆ ನುಡಿಗಳನ್ನು ಪೋಸ್ಟ್ ಮಾಡಿದ್ದಾರೆ. ‘ತೆಲುಗು ಚಿತ್ರರಂಗದ ರತ್ನ, ಅತ್ಯಂತ ಪ್ರತಿಭಾನ್ವಿತ ನಟ’ ಎಂದು ಹೊಗಳಿದ್ದಾರೆ.