Indo Pak Border: ಥಾರ್ ಮರುಭೂಮಿಯ ಪಾಕ್ ಗಡಿ ತನೋತ್ಗೆ ಬರುವವರು ಇಬ್ಬರೇ; ಬೆಸ್ಟ್ ಫ್ರೆಂಡ್ ಅಥವಾ ವರ್ಸ್ಟ್ ಎನಿಮಿ
ಪಾಕಿಸ್ತಾನದ ಗಡಿ ಎಂದಾಕ್ಷಣ ನಮ್ಮೆದುರು ಬರುವುದು ಕಾಶ್ಮೀರ. ಆದರೆ ಪಾಕಿಸ್ತಾನವು ಗುಜರಾತ್, ರಾಜಸ್ಥಾನ, ಪಂಜಾಬ್ ರಾಜ್ಯಗಳೊಂದಿಗೂ ಗಡಿ ಹಂಚಿಕೊಂಡಿದೆ. ಅದರಲ್ಲಿಯೂ ರಾಜಸ್ಥಾನದ ಥಾರ್ ಮರುಭೂಮಿಯಲ್ಲಿರುವ ಗಡಿಯಲ್ಲಿ ಕೆಲಸ ಮಾಡುವುದೆಂದರೆ ಯೋಧರ ಪಾಲಿಗೆ ಸಿಯಾಚಿನ್ನಷ್ಟೇ ಸವಾಲಿನ ಸಂಗತಿ. ಥಾರ್ ಮರುಭೂಮಿಯಲ್ಲಿ ಪಾಕ್ ಗಡಿ ಹೇಗಿದೆ ಎಂಬ ಪ್ರಶ್ನೆಗೆ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲ್ಲೂಕು ಉಪ್ಪಿನಂಗಡಿಯ ರೈತರಾದ ಗೋಪಾಲಕೃಷ್ಣ ಕುಂಟಿನಿ ಚಿತ್ರಗಳ ಮೂಲಕ ಉತ್ತರಿಸಿದ್ದಾರೆ. ರಾಜಸ್ಥಾನದ ಥಾರ್ ಮರುಭೂಮಿಯಲ್ಲಿ ಸಿಗುವ ತನೋತ್ ಊರಿನ ಆಚೆಗೆ ಪಾಕಿಸ್ತಾನವಿದೆ. ಇಲ್ಲಿನ ಬವ್ಲಿಯಾನ್ನಲ್ಲಿ 30 ರೌಂಡ್ಸ್ (ಗುಂಡು) ಇರುವ ಸ್ಟೆನ್ ಗನ್ ಹಿಡಿದುಕೊಂಡು ಯೋಧರು ಇರುಳೂ ಹಗಲೂ ಕಾಯುತ್ತಿದ್ದಾರೆ. ಪ್ರತಿ ಯೋಧನಿಗೆ ದಿನಕ್ಕೆ 12 ಗಂಟೆ ಪಾಳಿ. 52 ಡಿಗ್ರಿ ಸೆಲ್ಸಿಯಸ್ನಲ್ಲಿ ಕೊತ ಕೊತ ಕುದಿಯುತ್ತಾ ದೇಶ ರಕ್ಷಣೆ ಮಾಡಬೇಕು. ಹಿಮಾಲಯದ ಮೈನಸ್ 4 ಡಿಗ್ರಿಯಷ್ಟೇ ಕಠಿಣ ಇದು.
Published On - 10:51 am, Mon, 22 August 22