Ind vs Pak: ಏಷ್ಯಾಕಪ್ ಇತಿಹಾಸದಲ್ಲಿ ರೋಚಕತೆ ಸೃಷ್ಟಿಸಿದ ಭಾರತ- ಪಾಕಿಸ್ತಾನ ನಡುವಿನ 5 ಪಂದ್ಯಗಳಿವು

Asia cup 2022: ಏಷ್ಯಾಕಪ್ ಇತಿಹಾಸದಲ್ಲಿ ಉಭಯ ದೇಶಗಳ ನಡುವಿನ ಬಹುತೇಕ ಎಲ್ಲಾ ಪಂದ್ಯಗಳು ಸ್ಮರಣೀಯವಾಗಿವೆ. ಆದರೂ ಕೆಲವು ಪಂದ್ಯಗಳು ಉಭಯ ದೇಶಗಳ ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಇನ್ನೂ ನೆನಪಿನಲ್ಲಿ ಉಳಿದಿವೆ.

TV9 Web
| Updated By: ಪೃಥ್ವಿಶಂಕರ

Updated on:Aug 21, 2022 | 5:53 PM

ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಮೈದಾನಕ್ಕೆ ಇಳಿದಾಗಲೆಲ್ಲ ಅಲ್ಲೊಂದು ಕದನವೇ ಆರಂಭವಾಗಿಬಿಡುತ್ತದೆ. ಒಂದೆಡೆ ಆಟಗಾರರು ಶತಯಾಗತಾಯ ತಂಡಕ್ಕೆ ಗೆಲುವು ತಂದುಕೊಡಲು ಪ್ರಯತ್ನಿಸಿದರೆ ಮತ್ತೊಂದೆಡೆ ಅಭಿಮಾನಿಗಳು ಕೂಡ ತನ್ನ ನೆಚ್ಚಿನ ತಂಡ ಗೆಲ್ಲುವುದಕ್ಕಾಗಿ ದೇವರಲ್ಲಿ ಹರಕೆ ಕಟ್ಟಿಕೊಳ್ಳಲು ಆರಂಭಿಸುತ್ತಾರೆ. ಈಗ ಅಂತಹ ಘಟನೆಗಳನ್ನು ಮತ್ತೊಮ್ಮೆ ಏಷ್ಯಾಕಪ್​ನಲ್ಲಿ ಭಾಗ್ಯ ನಮ್ಮದಾಗಿದೆ. ದುಬೈ ಮೈದಾನದಲ್ಲಿ ಆಗಸ್ಟ್ 28 ರಂದು ಉಭಯ ದೇಶಗಳು ಮತ್ತೆ ಗುಂಪು ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಈ ಬ್ಲಾಕ್‌ಬಸ್ಟರ್ ಪಂದ್ಯದಲ್ಲಿ ಭಾರತ ತಂಡದ ನಾಯಕತ್ವ ರೋಹಿತ್ ಶರ್ಮಾ ಕೈಯಲ್ಲಿದ್ದರೆ, ಬಾಬರ್ ಅಜಮ್ ಪಾಕಿಸ್ತಾನ ತಂಡದ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಏಷ್ಯಾಕಪ್ ಇತಿಹಾಸದಲ್ಲಿ ಉಭಯ ದೇಶಗಳ ನಡುವಿನ ಬಹುತೇಕ ಎಲ್ಲಾ ಪಂದ್ಯಗಳು ಸ್ಮರಣೀಯವಾಗಿವೆ. ಆದರೂ ಕೆಲವು ಪಂದ್ಯಗಳು ಉಭಯ ದೇಶಗಳ ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಇನ್ನೂ ನೆನಪಿನಲ್ಲಿ ಉಳಿದಿವೆ. ಈಗ ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಐದು ರೋಚಕ ಪಂದ್ಯಗಳ ಬಗ್ಗೆ ತಿಳಿದುಕೊಳ್ಳೋಣ.

1 / 6
ಹರ್ಭಜನ್ ಗೆಲುವಿನ ಸಿಕ್ಸರ್: ಆ ಬಾರಿಯ ಏಷ್ಯಾಕಪ್​ನಲ್ಲಿ ಹರ್ಭಜನ್ ಸಿಂಗ್ ಹಾಗೂ ಶೋಯೆಬ್ ಅಖ್ತರ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಡಂಬುಲಾದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ಮೊದಲು ಬ್ಯಾಟ್ ಮಾಡಿತು. ಸಲ್ಮಾನ್ ಬಟ್ ಅವರ 74 ರನ್‌ಗಳೊಂದಿಗೆ ಪಾಕಿಸ್ತಾನ ತಂಡ 267 ರನ್ ಗಳಿಸಿತು. ಭಾರತ ಇನ್ನೂ ಒಂದು ಎಸೆತ ಬಾಕಿ ಇರುವಾಗಲೇ ಜಯ ಸಾಧಿಸಿತು. ಮೊಹಮ್ಮದ್ ಅಮೀರ್ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಹರ್ಭಜನ್ ಪಂದ್ಯವನ್ನು ಅದ್ಭುತವಾಗಿ ಅಂತ್ಯಗೊಳಿಸಿದರು. ಆ ಪಂದ್ಯದಲ್ಲಿ ಗೌತಮ್ ಗಂಭೀರ್ (83) ಮತ್ತು ಎಂಎಸ್ ಧೋನಿ (56) ಕೂಡ ಅತ್ಯುತ್ತಮ ಇನ್ನಿಂಗ್ಸ್ ಆಡಿದ್ದರು.

2 / 6
ಕೊಹ್ಲಿ ಕ್ಲಾಸಿಕ್ ಇನ್ನಿಂಗ್ಸ್ : 2012ರ ಏಷ್ಯಾಕಪ್​ನಲ್ಲಿ ಭಾರತ-ಪಾಕಿಸ್ತಾನ ನಡುವಿನ ಪಂದ್ಯ ವಿರಾಟ್ ಕೊಹ್ಲಿ ಪಾಲಿಗೆ ವಿಶೇಷವಾಗಿತ್ತು. ಮೀರ್‌ಪುರದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 50 ಓವರ್‌ಗಳಲ್ಲಿ 329/6 ಸ್ಕೋರ್ ಮಾಡಿತು. ನಾಸಿರ್ ಜಮ್ಶೆಡ್ 112 ಮತ್ತು ಮೊಹಮ್ಮದ್ ಹಫೀಜ್ 105 ರನ್ ಗಳಿಸಿದರು. ಇದಕ್ಕೆ ಉತ್ತರವಾಗಿ ಭಾರತ ಇನ್ನೂ 13 ಎಸೆತಗಳು ಬಾಕಿ ಇರುವಂತೆಯೇ ಆರು ವಿಕೆಟ್‌ಗಳ ಜಯ ಸಾಧಿಸಿತು. ವಿರಾಟ್ ಕೊಹ್ಲಿ 148 ಎಸೆತಗಳಲ್ಲಿ 183 ರನ್ ಗಳಿಸಿದರು. ಇದು ಏಕದಿನದಲ್ಲಿ ಅವರ ಅತ್ಯುತ್ತಮ ಸ್ಕೋರ್ ಆಗಿದೆ.

3 / 6
ಅಫ್ರಿದಿ ಬ್ಯಾಟಿಂಗ್ ಬಿರುಗಾಳಿ: 2014ರ ಏಷ್ಯಾಕಪ್​ನಲ್ಲಿ ಭಾರತ-ಪಾಕಿಸ್ತಾನ ನಡುವಿನ ಪಂದ್ಯ ಅಭಿಮಾನಿಗಳ ಮನದಲ್ಲಿ ಇನ್ನೂ ಮಾಸಿಲ್ಲ. ಆದರೆ ಮೀರ್‌ಪುರದಲ್ಲಿ ನಡೆದ ಆ ಪಂದ್ಯದಲ್ಲಿ ಭಾರತ ಒಂದು ವಿಕೆಟ್‌ನಿಂದ ಪಾಕಿಸ್ತಾನದ ವಿರುದ್ಧ ಸೋಲು ಅನುಭವಿಸಬೇಕಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ಎಂಟು ವಿಕೆಟಿಗೆ 245 ರನ್ ಗಳಿಸಿತು. ಇದಕ್ಕೆ ಉತ್ತರಿಸಿದ ಪಾಕಿಸ್ತಾನ ಇನ್ನೂ ಎರಡು ಎಸೆತಗಳು ಬಾಕಿ ಇರುವಂತೆಯೇ ಪಂದ್ಯವನ್ನು ಗೆದ್ದುಕೊಂಡಿತು. ಶಾಹಿದ್ ಅಫ್ರಿದಿ ಸತತ ಎರಡು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ತಮ್ಮ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು

4 / 6
ಅಮೀರ್ ಬೌಲಿಂಗ್: 2016ರ ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಸ್ಮರಣೀಯ ಪಂದ್ಯ. ಆ ಪಂದ್ಯದಲ್ಲಿ ಪಾಕಿಸ್ತಾನ ತಂಡಕ್ಕೆ ನಿಗದಿತ 20 ಓವರ್ ಕೂಡ ಆಡಲು ಸಾಧ್ಯವಾಗದೆ ಇಡೀ ಇನಿಂಗ್ಸ್ 83 ರನ್​ಗಳಿಗೆ ಕುಸಿದಿತ್ತು. ಭಾರತಕ್ಕೆ ಗುರಿ ಸುಲಭ ಎನಿಸಿದರೂ ಮೊಹಮ್ಮದ್ ಅಮೀರ್ ಮೂರು ವಿಕೆಟ್ ಪಡೆದು ಪಂದ್ಯದಲ್ಲಿ ರೋಚಕತೆ ಮೂಡಿಸಿದರು. ವಿರಾಟ್ ಕೊಹ್ಲಿ ಕಠಿಣ ಪರಿಸ್ಥಿತಿಯಲ್ಲಿ 49 ರನ್ ಗಳಿಸಿದರು. ಇದರಿಂದಾಗಿ ಭಾರತ ತಂಡ ಇನ್ನೂ 27 ಎಸೆತಗಳು ಬಾಕಿ ಇರುವಂತೆಯೇ ಐದು ವಿಕೆಟ್‌ಗಳಿಂದ ಪಂದ್ಯವನ್ನು ಗೆಲ್ಲಲು ಶಕ್ತವಾಯಿತು.

5 / 6
ಧವನ್-ರೋಹಿತ್ ಅಬ್ಬರ: ಏಷ್ಯಾಕಪ್ 2018 ರಲ್ಲಿ ಭಾರತ ಮತ್ತು ಪಾಕಿಸ್ತಾನ ಎರಡು ಬಾರಿ ಮುಖಾಮುಖಿಯಾಗಿದ್ದವು. ಎರಡೂ ಸಂದರ್ಭಗಳಲ್ಲಿ, ಭಾರತ ತಂಡವು ಅದ್ಭುತ ಜಯ ಸಾಧಿಸಿತು. ಸೂಪರ್-4 ಹಂತದ ಪಂದ್ಯದಲ್ಲಿ ಭಾರತ 9 ವಿಕೆಟ್‌ಗಳ ಜಯ ಸಾಧಿಸಿತ್ತು. ದುಬೈನಲ್ಲಿ ನಡೆದ ಪಂದ್ಯದಲ್ಲಿ ಶೋಯೆಬ್ ಮಲಿಕ್ ಅವರ 78 ರನ್‌ಗಳ ನೆರವಿನಿಂದ ಪಾಕಿಸ್ತಾನ ನಿಗದಿತ 50 ಓವರ್‌ಗಳಲ್ಲಿ ಏಳು ವಿಕೆಟ್‌ಗೆ 237 ರನ್ ಗಳಿಸಿತು. ಇದರೊಂದಿಗೆ ಭಾರತ ತಂಡ 63 ಎಸೆತಗಳು ಬಾಕಿ ಇರುವಂತೆಯೇ 9 ವಿಕೆಟ್‌ಗಳ ಜಯ ಸಾಧಿಸಿತು. ಶಿಖರ್ ಧವನ್ 114 ರನ್ ಗಳಿಸಿ ಗರಿಷ್ಠ ಸ್ಕೋರ್ ಗಳಿಸಿದರೆ, ನಾಯಕ ರೋಹಿತ್ ಶರ್ಮಾ 111 ರನ್ ಗಳಿಸಿ ಅಜೇಯರಾಗಿ ಉಳಿದರು.

6 / 6

Published On - 5:53 pm, Sun, 21 August 22

Follow us
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ

ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ

ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?

ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!

ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ

ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್

ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು

ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್

ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು

ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ