ಕಣ್ಣಿನ ಕೆಳಗೆ ಇರುವ ಡಾರ್ಕ್ ಸರ್ಕಲ್ಗೆ ಪರಿಹಾರ ಇಲ್ಲಿದೆ
ಕಣ್ಣಿನ ಕೆಳಗೆ ಇರುವ ಡಾರ್ಕ್ ಸರ್ಕಲ್ ಸೌಂದರ್ಯವನ್ನು ಕುಗ್ಗಿಸುವುದರಲ್ಲಿ ಅನುಮಾನವಿಲ್ಲ. ಡಾರ್ಕ್ ಸರ್ಕಲ್ನಿಂದ ಮುಖದ ಲಕ್ಷಣ ಕಡಿಮೆಯಾಗುತ್ತದೆ. ಎದ್ದು ಕಾಣುವ ಡಾರ್ಕ್ ಸರ್ಕಲ್ಗೆ ಕಾರಣ ಹಲವು ಇದೆ.
Updated on: Jun 10, 2022 | 8:15 AM

ಅಲೋವೆರಾ ಜೆಲ್ ಮತ್ತು ವಿಟಮಿನ್ ಇ ಮಿಶ್ರಣ ಮಾಡಿ ಮಲಗುವ ಮುನ್ನ ಕಣ್ಣಿನ ಕೆಳಗೆ ಕಪ್ಪಾಗಿರುವ ಜಾಗಕ್ಕೆ ಹಚ್ಚಿ. ಪ್ರತಿದಿನ ಹಚ್ಚಿದಾಗ ಕೆಲವೇ ದಿನಗಳಲ್ಲಿ ಡಾರ್ಕ್ ಸರ್ಕಲ್ ಕಡಿಮೆಯಾಗುವುದು. ಇದು ಆ್ಯಂಟಿ ಆಕ್ಸಿಡೆಂಟ್ ಗುಣ ಹೊಂದಿದೆ. ಮುಖದಲ್ಲಿರುವ ಮೊಡವೆಗಳನ್ನು ಶಮನಗೊಳಿಸಲು ಇದನ್ನು ಬಳಸಬಹುದು.

ರಾತ್ರಿ ಮಲಗುವ ಮುನ್ನ ಬಾದಾಮಿ ಎಣ್ಣೆ ಮತ್ತು ಜೇನುತುಪ್ಪವನ್ನು ಬಳಸಬಹುದು. ಇದು ಡಾರ್ಕ್ ಸರ್ಕಲ್ನ ತೆಗೆದು ಹಾಕುವ ಜೊತೆಗೆ ಮುಖದ ಕಾಂತಿ ಹೆಚ್ಚಿಸುವುದು. ಜೇನುತುಪ್ಪ ಬ್ಯಾಕ್ಟೀರಿಯಾದ ವಿರೋಧಿ ಗುಣಗಳನ್ನು ಹೊಂದಿದೆ. ಹೀಗಾಗಿ ಇವೆರಡನ್ನೂ ಮಿಶ್ರಣ ಮಾಡಿ ರಾತ್ರಿ ವೇಳೆ ಹಚ್ಚಿ.

ಕಾಫಿ ಪುಡಿ ಚರ್ಮಕ್ಕೆ ಹೆಚ್ಚು ಪ್ರಯೋಜನಕಾರಿ ಗುಣವನ್ನು ಹೊಂದಿದೆ. ಕಣ್ಣಿನ ಸುತ್ತ ಇರುವ ಕಪ್ಪನ್ನು ಕಡಿಮೆ ಮಾಡಲು ಕಾಫಿ ಪುಡಿ ಸಹಾಯಕವಾಗುತ್ತದೆ. ಕಾಫಿ ಪುಡಿ ಮತ್ತು ತೆಂಗಿನ ಎಣ್ಣೆಯನ್ನು ಚೆನ್ನಾಗಿ ಬೆರೆಸಿ ವಾರಕ್ಕೆ ಎರಡು ಬಾರಿ ಹಚ್ಚಿದರೆ ಕೆಲವೇ ವಾರದಲ್ಲಿ ಉತ್ತಮ ಫಲಿತಾಂಶ ಸಿಗುತ್ತದೆ. ತೆಂಗಿನ ಎಣ್ಣೆ ಬದಲು ಜೇನುತುಪ್ಪವನ್ನೂ ಬಳಸಬಹುದು.

ಮುಖದ ಕಾಂತಿಯನ್ನು ಹೆಚ್ಚಿಸುವ ಶಕ್ತಿ ರೋಸ್ ವಾಟರ್ಗೆ ಇದೆ. ಹತ್ತಿಯ ಸಹಾಯದಿಂದ ರೋಸ್ ವಾಟರ್ನ ಕಣ್ಣಿನ ಸುತ್ತ ಹಚ್ಚಿ. ಪ್ರತಿದಿನ ಹಚ್ಚಿದರೆ ಕೆಲವೇ ದಿನಗಳಲ್ಲಿ ಕಣ್ಣಿನ ಸುತ್ತ ಇರುವ ಕಪ್ಪು ಕಲೆ ಕಡಿಮೆಯಾಗುತ್ತದೆ.

ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಆಲೂಗಡ್ಡೆ ಇದ್ದೇ ಇರುತ್ತದೆ. ಅಲೂಗಡ್ಡೆಯಿಂದ ಕಪ್ಪು ಕಲೆ ಹೋಗಲಾಡಿಸಬಹುದು. ಆಲೂಗಡ್ಡೆಯನ್ನು ತುರಿದು ಅದರ ರಸವನ್ನು ಹತ್ತಿಯ ಸಹಾಯದಿಂದ ಕಣ್ಣಿನ ಕಪ್ಪು ಸರ್ಕಲ್ಗೆ ಹಚ್ಚಿ. 10 ನಿಮಿಷ ಬಳಿಕ ತೊಳೆಯಿರಿ.



















