200MP ಕ್ಯಾಮೆರಾದ ಸ್ಮಾರ್ಟ್​ಫೋನ್ ಮೂಲಕ ಭಾರತಕ್ಕೆ ಕಮ್​ಬ್ಯಾಕ್ ಮಾಡುತ್ತಿದೆ ಹಾನರ್

200MP Camera Phone: ಚೀನಾದಲ್ಲಿ ಕೆಲವು ತಿಂಗಳ ಹಿಂದೆ ಬಿಡುಗಡೆಯಾದ 200 ಮೆಗಾ ಪಿಕ್ಸೆಲ್ ಕ್ಯಾಮೆರಾದ ಹಾನರ್ 90 ಸ್ಮಾರ್ಟ್​ಫೋನ್ ಮೂಲಕ ಪ್ರಸಿದ್ಧ ಹಾನರ್ ಕಂಪನಿ ಸುಮಾರು ಮೂರು ವರ್ಷಗಳ ಬಳಿಕ ಭಾರತಕ್ಕೆ ಕಮ್​ಬ್ಯಾಕ್ ಮಾಡಲು ತಯಾರಾಗಿದೆ.

Vinay Bhat
|

Updated on: Aug 20, 2023 | 6:55 AM

ಹಾನರ್ 90 ಈಗಾಗಲೇ ವಿದೇಶದಲ್ಲಿ ಬಿಡುಗಡೆಗೊಂಡಿದ್ದರೂ ಇದು ಭಾರತೀಯ ರೂಪಾಂತರಕ್ಕೆ ಕೆಲವು ಕಸ್ಟಮೈಸೇಶನ್‌ಗಳನ್ನು ನಿರೀಕ್ಷಿಸಬಹುದು. ಮುಖ್ಯವಾಗಿ ಇವುಗಳು ಸುಧಾರಿತ ಕ್ಯಾಮರಾ ತಂತ್ರಜ್ಞಾನದಿಂದ ಕೂಡಿವೆಯಂತೆ. ಜೊತೆಗೆ ಅಮೊಲೊಡ್, ಕ್ವಾಡ್-ಕರ್ವ್, ಫ್ಲೋಟಿಂಗ್ ಡಿಸ್ ಪ್ಲೇ ಮೂಲಕ ಬರಲಿದೆ. ವದಂತಿಗಳ ಪ್ರಕಾರ, ಹಾನರ್ 90 ಬೆಲೆ ಭಾರತದಲ್ಲಿ ಸುಮಾರು 40,000 ರೂ. ಎನ್ನಲಾಗಿದೆ.

1 / 7
ಇತ್ತೀಚಿಗೆ ರಿಯಲ್‌ ಮಿ ಕಂಪನಿಯಿಂದ ಹೊರ ನಡೆದಿರುವ ರಿಯಲ್‌ ಮಿ ಮಾಜಿ ಉಪಾಧ್ಯಕ್ಷ ಮಾಧವ್ ಶೇತ್ ಹಾನರ್ ಜೊತೆ ಕೈಜೋಡಿಸಿದ್ದು, ಭಾರತದಲ್ಲಿ ಹಾನರ್​ನ ಕಾರ್ಯತಂತ್ರವನ್ನು ಬಹಿರಂಗ ಪಡಿಸಿದ್ದಾರೆ. ಜೊತೆಗೆ ಹಾನರ್ ಭಾರತದಲ್ಲಿ 150 ಸೇವಾ ಕೇಂದ್ರಗಳ ಬೃಹತ್ ಜಾಲವನ್ನು ಪ್ರಾರಂಭಿಸಲು ತಯಾರಿಸಿ ನಡೆಸಿದೆ ಎಂದು ಹೇಳಿದ್ದಾರೆ.

2 / 7
ಸುಮಾರು ಮೂರು ವರ್ಷಗಳಿಂದ ಭಾರತೀಯ ಮಾರುಕಟ್ಟೆಯಿಂದ ದೂರ ಉಳಿದಿದ್ದ ಪ್ರಸಿದ್ಧ ಹಾನರ್ ಕಂಪನಿ ಇದೀಗ ಭರ್ಜರಿ ಆಗಿ ಕಮ್​ಬ್ಯಾಕ್ ಮಾಡಲು ತಯಾರಾಗುತ್ತಿದೆ. ತನ್ನ 200 ಮೆಗಾ ಪಿಕ್ಸೆಲ್ ಕ್ಯಾಮೆರಾದ ಹಾನರ್ 90 ಸರಣಿಯ ಸ್ಮಾರ್ಟ್​ಫೋನ್ ಮೂಲಕ ಭಾರತಕ್ಕೆ ಬರುವುದು ಖಚಿತವಾಗಿದೆ.

3 / 7
ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ ಇಂಡಿಯಾ ತನ್ನ ಸೈಟ್​ನಲ್ಲಿ ಹಾನರ್ 90 ಪುಟವನ್ನು ಲೈವ್ ಮಾಡಿದೆ. ಹಾನರ್ 90 ಬಿಡುಗಡೆ ದಿನಾಂಕ ಸೇರಿದಂತೆ ಹೆಚ್ಚಿನ ಮಾಹಿತಿಯನ್ನು ಪುಟವು ಬಹಿರಂಗಪಡಿಸದಿದ್ದರೂ, ಈ ಸ್ಮಾರ್ಟ್‌ಫೋನ್ ಅನ್ನು ಇ-ಕಾಮರ್ಸ್ ಸೈಟ್‌ನಲ್ಲಿ ಮಾರಾಟ ಮಾಡಲಾಗುವುದು ಎಂಬುದು ಖಚಿತವಾಗಿ ತಿಳಿದುಬಂದಿದೆ.

4 / 7
ಹಾನರ್ 90 ಫೋನಿನಲ್ಲಿ ಪ್ರಾಥಮಿಕ ಕ್ಯಾಮೆರಾ ಬರೋಬ್ಬರಿ 200-ಮೆಗಾಪಿಕ್ಸೆಲ್ ಇರಲಿದೆ. ಜೊತೆಗೆ 12-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ ಮತ್ತು 2-ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್‌ನೊಂದಿಗೆ ಜೋಡಿಸಲಾಗಿದೆ. ಸೆಲ್ಫಿಗಾಗಿ ಮುಂಭಾಗದಲ್ಲಿ 50-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ.

5 / 7
ಹಾನರ್ 90 ಬಳಿಕ ಕಂಪನಿಯು ಹಾನರ್ X ಸರಣಿಯನ್ನು ಬಿಡುಗಡೆ ಮಾಡಲಿದೆ. ಇದು ಮಧ್ಯ-ಶ್ರೇಣಿಯವರಿಗೆ ಹೇಳಿ ಮಾಡಿಸಿದ ಫೋನ್ ಆಗಿದೆ. ಜೊತೆಗೆ ಹೈ-ಎಂಡ್ ಮಿಡ್-ರೇಂಜರ್‌ಗಳ ಕಂಪನಿಯ ಫೋಲ್ಡಬಲ್ ಫೋನ್‌ಗಳನ್ನು ಒಳಗೊಂಡಿರುವ ಹಾನರ್ ಮ್ಯಾಜಿಕ್ ಸರಣಿಯನ್ನು ಸಹ ನಿರೀಕ್ಷಿಸಬಹುದು. TWS, ಟ್ಯಾಬ್ಲೆಟ್‌ಗಳು ಸೇರಿದಂತೆ ಪೂರಕ ಉತ್ಪನ್ನಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆಯಂತೆ.

6 / 7
ಭಾರತದಲ್ಲಿನ ಹಾನರ್ ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್ 13 ನೊಂದಿಗೆ ಚಾಲಿತವಾಗುತ್ತವೆ ಮತ್ತು ಗೂಗಲ್ ಮ್ಯಾಪ್ಸ್, ಡ್ರೈವ್, ಮೀಟ್ ಸೇರಿದಂತೆ ಗೂಗಲ್ ಅಪ್ಲಿಕೇಶನ್‌ಗಳನ್ನು ಹೊಂದಿರುತ್ತದೆ ಎಂದು ಮಾಧವ್ ಹೇಳಿದ್ದಾರೆ. ಈ ಮೂಲಕ ಹಾನರ್ ಎರಡು ವರ್ಷಗಳ ಆಂಡ್ರಾಯ್ಡ್ ನವೀಕರಣಗಳನ್ನು ಮತ್ತು ಮೂರು ವರ್ಷಗಳ ಭದ್ರತಾ ನವೀಕರಣಗಳನ್ನು ಖಾತ್ರಿಪಡಿಸಿದೆ.

7 / 7
Follow us