Tech Tips: ಒಂದು ವಾಟ್ಸ್ಆ್ಯಪ್ ಖಾತೆಯನ್ನು ಒಮ್ಮೆಲೆ ಎಷ್ಟು ಕಡೆಯಲ್ಲಿ ತೆರೆದಿಟ್ಟುಕೊಳ್ಳಬಹುದು?
WhatsApp Tips: ನಾಲ್ಕಕ್ಕಿಂತ ಅಧಿಕ ಸಾಧನಗಳಲ್ಲಿ ಒಂದೇ ಖಾತೆಯ ವಾಟ್ಸ್ಆ್ಯಪ್ ತೆರೆದಿಡಲು ಸಾಧ್ಯವಿಲ್ಲ. ಈ ಆಯ್ಕೆಯನ್ನು ವಾಟ್ಸ್ಆ್ಯಪ್ ಇನ್ನೂ ನೀಡಿಲ್ಲ. ಬಳಕೆದಾರ ಪ್ರಯತ್ನಿಸಲು ಮುಂದಾದರೂ ಖಾತೆ ಓಪನ್ ಆಗುವುದಿಲ್ಲ.
1 / 8
ಕಳೆದ ಕೆಲವು ತಿಂಗಳ ಹಿಂದಿನ ವರೆಗೆ ವಾಟ್ಸ್ಆ್ಯಪ್ ಖಾತೆಯನ್ನು ಮೊಬೈಲ್, ಲ್ಯಾಪ್ಟಾಪ್, ಡೆಸ್ಕ್ಟಾಪ್ಗಳಲ್ಲಿ ಮಾತ್ರ ಬಳಸಲು ಅವಕಾಶವಿತ್ತು. ಒಂದಕ್ಕಿಂತ ಹೆಚ್ಚು ಸ್ಮಾರ್ಟ್ಫೋನ್ಗಳಲ್ಲಿ ಬಳಸುವ ಆಯ್ಕೆ ಇರಲಿಲ್ಲ. ಆದರೆ, ಇತ್ತೀಚೆಗಷ್ಟೆ ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ನೂತನ ಫೀಚರ್ ಬಿಡುಗಡೆ ಮಾಡಿತ್ತು.
2 / 8
ವಾಟ್ಸ್ಆ್ಯಪ್ನ ಈ ನೂತನ ಆಯ್ಕೆಯ ಮೂಲಕ ಬಳಕೆದಾರರು ಒಂದೇ ಬಾರಿಗೆ ನಾಲ್ಕು ಫೋನ್ಗಳಲ್ಲಿ ಒಂದೇ ವಾಟ್ಸ್ಆ್ಯಪ್ ಖಾತೆಯನ್ನು ಬಳಸಬಹುದಾಗಿದೆ. ಅಂದರೆ ನೀವು ನಾಲ್ಕು ಫೋನ್ಗಳಲ್ಲಿ ಒಂದೇ ವಾಟ್ಸ್ಆ್ಯಪ್ ಖಾತೆಯನ್ನು ತೆರೆದಿಟ್ಟುಕೊಳ್ಳಬಹುದು.
3 / 8
ನಾಲ್ಕಕ್ಕಿಂತ ಅಧಿಕ ಸಾಧನಗಳಲ್ಲಿ ಒಂದೇ ಖಾತೆಯ ವಾಟ್ಸ್ಆ್ಯಪ್ ತೆರೆದಿಡಲು ಸಾಧ್ಯವಿಲ್ಲ. ಈ ಆಯ್ಕೆಯನ್ನು ವಾಟ್ಸ್ಆ್ಯಪ್ ಇನ್ನೂ ನೀಡಿಲ್ಲ. ಬಳಕೆದಾರ ಪ್ರಯತ್ನಿಸಲು ಮುಂದಾದರೂ ಖಾತೆ ಓಪನ್ ಆಗುವುದಿಲ್ಲ.
4 / 8
ಬೇರೆ ಫೋನ್ನಲ್ಲಿ ವಾಟ್ಸ್ಆ್ಯಪ್ ಖಾತೆ ಬಳಸಬೇಕಿದ್ದರೆ ಹೊಸದಾಗಿ ಇನ್ಸ್ಟಾಲ್ ಮಾಡಿಕೊಳ್ಳಬೇಕು. ನಂತರ ಖಾತೆ ಸೆಟಪ್ ಮಾಡುವಾಗ ಫೋನ್ ನಂಬರ್ ನಮೂದಿಸುವ ಬದಲು ‘ಅಸ್ತಿತ್ವದಲ್ಲಿರುವ ಖಾತೆ (Existing Account)’ ಆಯ್ಕೆಯನ್ನು ಆಯ್ದುಕೊಳ್ಳಬೇಕು.
5 / 8
ನಂತರ ಕ್ಯುಆರ್ ಕೋಡ್ ಕಾಣಿಸುತ್ತದೆ. ಆಗ ನೀವು ಈಗಾಗಲೇ ವಾಟ್ಸ್ಆ್ಯಪ್ ಖಾತೆ ಹೊಂದಿರುವ ಫೋನ್ನಿಂದ ಸ್ಕ್ಯಾನ್ ಮಾಡುವ ಮೂಲಕ ಲಾಗಿನ್ ಆಗಬಹುದು. ಈ ವಿಶೇಷ ಫೀಚರ್ iOS ಮತ್ತು Android ಸ್ಮಾರ್ಟ್ಫೋನ್ಗಳಲ್ಲಿ ಲಭ್ಯವಿದೆ.
6 / 8
ಎಲ್ಲಾದರು ವಾಟ್ಸ್ಆ್ಯಪ್ ಲಾಗಿನ್ ಆಗಿರುವ ಮೊಬೈಲ್ಫೋನ್ ದೀರ್ಘಕಾಲದವರೆಗೆ ನಿಷ್ಕ್ರಿಯವಾಗಿದ್ದರೆ, ಆ ನಂತರ ವಾಟ್ಸ್ಆ್ಯಪ್ ಲಾಗಿನ್ ಆಗಿರುವ ಎಲ್ಲ ಫೋನ್ಗಳಿಂದ ಸ್ವಯಂಚಾಲಿತವಾಗಿ ಲಾಗೌಟ್ ಆಗುತ್ತದೆ.
7 / 8
ಏಕ ಕಾಲಕ್ಕೆ ನಾಲ್ಕು ಫೋನ್ಗಳಲ್ಲಿ ವಾಟ್ಸ್ಆ್ಯಪ್ನ ಒಂದೇ ಖಾತೆ ಬಳಸುವ ಈ ಆಯ್ಕೆಯಿಂದ ಸಂದೇಶ ಕಳುಹಿಸುವ ಪ್ರಕ್ರಿಯೆ ಇನ್ನಷ್ಟು ಸುಲಭವಾಗುತ್ತದೆ. ಜೊತೆಗೆ ಸೈನ್ ಔಟ್ ಮಾಡದೆಯೇ ಬೇರೆ ಫೋನ್ನಿಂದ ಮೆಸೇಜ್ ಕಳುಹಿಸುವುದು, ಅರ್ಧಕ್ಕೆ ನಿಲ್ಲಿಸಿದ್ದ ಚಾಟ್ಗಳನ್ನು ಮುಂದುವರಿಸಲು ಅನುಕೂಲವಾಗಲಿದೆ ಎಂದು ಕಂಪನಿ ತಿಳಿಸಿದೆ.
8 / 8
ಈ ಆಯ್ಕೆಯಿಂದ ಉದ್ಯಮ ಸಂಸ್ಥೆಗಳಿಗೆ, ವ್ಯಾಪಾರಿಗಳಿಗೆ ಪ್ರಯೋಜನ ಪಡೆಯುತ್ತಿದ್ದಾರೆ. ಉದ್ಯಮ ಸಂಸ್ಥೆಗಳ ಉದ್ಯೋಗಿಗಳು ಒಂದೇ ಖಾತೆಯನ್ನು ನಾಲ್ಕು ಮೊಬೈಲ್ಗಳಲ್ಲಿ ಬಳಸುವ ಮೂಲಕ ಗ್ರಾಹಕರ ಜತೆ ಸಂವಹನ ನಡೆಸಲು ಅನುಕೂಲವಾಗಲಿದೆ.