Tech Tips: ನಿಮ್ಮ ಫೇಸ್​ಬುಕ್ ಪ್ರೊಫೈಲ್ ಯಾರೆಲ್ಲ ನೋಡುತ್ತಿದ್ದಾರೆಂದು ತಿಳಿಯಬೇಕೆ?: ಇಲ್ಲಿದೆ ಟ್ರಿಕ್

Updated on: Jun 11, 2023 | 6:55 AM

Facebook Tricks: ವಾಸ್ತವವಾಗಿ ಎಫ್​ಬಿ ಈ ಉದ್ದೇಶಕ್ಕಾಗಿ ಯಾವುದೇ ವಿಶೇಷ ವೈಶಿಷ್ಟ್ಯವನ್ನು ಕಲ್ಪಿಸಿಲ್ಲ. ಆದರೆ, ಕೆಲ ಟ್ರಿಕ್ ಬಳಸಿ ನಿಮ್ಮ ಫೇಸ್​ಬುಕ್ ಅನ್ನು ಯಾರು ನೋಡಿದ್ದಾರೆಂದು ಕಂಡುಹಿಡಿಯಬಹುದು. ಅದು ಹೇಗೆ? ಇಲ್ಲಿದೆ ನೋಡಿ.

1 / 8
ಇಂದಿನ ಹೈ-ಫೈ ಜಗತ್ತಿನಲ್ಲಿ ಇಂಟರ್​ನೆಟ್ ಮೂಲೆಮೂಲೆಗೆ ತಲುಪಿದ್ದು ಸಾಮಾಜಿಕ ಜಾಲತಾಣ ಕೂಡ ಅಷ್ಟೇ ವೇಗದಲ್ಲಿ ಖ್ಯಾತಿ ಪಡೆಯುತ್ತಿದೆ. ಸೋಷಿಯಲ್ ಮೀಡಿಯಾ ಎಂಬುದು ಇಂದು ಮಾಂತ್ರಿಕ ಜಗತ್ತು ಎಂಬಂತಾಗಿದೆ. ಈಗೀಗ ಇದನ್ನು ದುರುಪಯೋಗ ಪಡಿಸಿಕೊಳ್ಳುವವರೂ ಹಲವರಿದ್ದಾರೆ.

ಇಂದಿನ ಹೈ-ಫೈ ಜಗತ್ತಿನಲ್ಲಿ ಇಂಟರ್​ನೆಟ್ ಮೂಲೆಮೂಲೆಗೆ ತಲುಪಿದ್ದು ಸಾಮಾಜಿಕ ಜಾಲತಾಣ ಕೂಡ ಅಷ್ಟೇ ವೇಗದಲ್ಲಿ ಖ್ಯಾತಿ ಪಡೆಯುತ್ತಿದೆ. ಸೋಷಿಯಲ್ ಮೀಡಿಯಾ ಎಂಬುದು ಇಂದು ಮಾಂತ್ರಿಕ ಜಗತ್ತು ಎಂಬಂತಾಗಿದೆ. ಈಗೀಗ ಇದನ್ನು ದುರುಪಯೋಗ ಪಡಿಸಿಕೊಳ್ಳುವವರೂ ಹಲವರಿದ್ದಾರೆ.

2 / 8

ಇದರಲ್ಲಿ ಅತ್ಯಂತ ಜನಪ್ರಿಯ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಾದ ಫೇಸ್‌ಬುಕ್ ಅನ್ನು ಎಲ್ಲಾ ವಯಸ್ಸಿನ ಜನರು ಉಪಯೋಗಿಸುತ್ತಿದ್ದಾರೆ. ಪ್ರತಿದಿನ ಸುಮಾರು ಕೋಟಿಗಟ್ಟಲೆ ಜನರು ಇದರಲ್ಲಿ ಸಕ್ರಿಯರಾಗಿದ್ದಾರೆ. ನೀವುಕೂಡ ಫೇಸ್‌ಬುಕ್ ಅನ್ನು ಬಳಸಿದರೆ ಅನೇಕ ಜನರು ನಿಮ್ಮ ಪ್ರೊಫೈಲ್‌ಗೆ ವಿಸಿಟ್ ಮಾಡುತ್ತಾರೆ. ಆದರೆ ನಿಮ್ಮ ಪ್ರೊಫೈಲ್ ಅನ್ನು ಯಾರು ರಹಸ್ಯವಾಗಿ ನೋಡುತ್ತಿದ್ದಾರೆಂದು ನೋಡಲು ಸಾಧ್ಯವಿಲ್ಲ.

3 / 8

ವಾಸ್ತವವಾಗಿ ಫೇಸ್​ಬುಕ್ ಈ ಉದ್ದೇಶಕ್ಕಾಗಿ ಯಾವುದೇ ವಿಶೇಷ ವೈಶಿಷ್ಟ್ಯವನ್ನು ಕಲ್ಪಿಸಿಲ್ಲ. ಆದರೆ, ಕೆಲ ಟ್ರಿಕ್ ಬಳಸಿ ನಿಮ್ಮ ಎಫ್​ಬಿ ಅನ್ನು ಯಾರು ನೋಡಿದ್ದಾರೆಂದು ಕಂಡುಹಿಡಿಯಬಹುದು. ಅದು ಹೇಗೆ? ಇಲ್ಲಿದೆ ನೋಡಿ.

4 / 8

ಇದಕ್ಕಾಗಿ ಮೊದಲು ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್‌ನಲ್ಲಿ ಫೇಸ್‌ಬುಕ್ ತೆರೆದು ಲಾಗಿನ್ ಮಾಡಿ. ಲಾಗಿನ್ ಆದ ನಂತರ 'ರೈಟ್ ಕ್ಲಿಕ್' ಮಾಡಬೇಕು. ಅಲ್ಲಿ ನಿಮಗೆ 'ವೀವ್ ಪೇಜ್ ಸೋರ್ಸ್' ಎಂಬ ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.

5 / 8

ವೀವ್ ಪೇಜ್ ಸೋರ್ಸ್ ಮೇಲೆ ಕ್ಲಿಕ್ ಮಾಡಿದ ತಕ್ಷಣ ಪುಟದ ಮೂಲ ಕೋಡ್​ಗಳು ತೆರೆಯುತ್ತದೆ. ಅದರಲ್ಲಿ 'BUDDY_ID' ಎಂಬುದನ್ನು ಹುಡುಕಬೇಕು. ಇದಕ್ಕಾಗಿ Control+F (ctrl+F) ಒತ್ತಿ ಮತ್ತು 'BUDDY_ID' ಎಂದು ಟೈಪ್ ಮಾಡಿ ಎಂಟರ್ ಹೊಡೆಯಿರಿ.

6 / 8

ಈಗ ಹಲವಾರು ಫೇಸ್​ಬುಕ್ ಪ್ರೊಫೈಲ್ ಐಡಿಗಳು 'BUDDY_ID' ಪಕ್ಕದಲ್ಲಿ ಕಾಣಿಸಿಕೊಳ್ಳುತ್ತವೆ. ಅದರಲ್ಲಿ ಒಬ್ಬರ ಐಡಿಯನ್ನು ಕಾಪಿ ಮಾಡಬೇಕು.

7 / 8

ಹೀಗೆ ಕಾಪಿ ಮಾಡಿದ ಐಡಿಯನ್ನು ಹೊಸ ಟ್ಯಾಬ್ ತೆಗೆದು Facebook.com/your selected ID (ನೀವು ಕಾಪಿ ಮಾಡಿದ ಐಡಿ) ಫೆಸ್ಟ್ ಮಾಡಿ ಎಂಟರ್ ಒತ್ತಿರಿ.

8 / 8

ಈ ಐಡಿಯನ್ನು ನಮೂದಿಸಿದ ನಂತರ ನಿಮ್ಮ ಫೇಸ್‌ಬುಕ್ ಪ್ರೊಫೈಲ್ ಅನ್ನು ವೀಕ್ಷಿಸುವವರ ಪುಟ ತೆರೆಯುತ್ತದೆ. ಈ ಮೂಲಕ ಅವರಿಗೂ ತಿಳಿಯದಂತೆ ಈ ಸರಳ ರೀತಿಯಲ್ಲಿ ನಿಮ್ಮ ಫೆಸ್​ಬುಕ್ ಅನ್ನು ಯಾರು ನೋಡಿದ್ದಾರೆಂದು ಕಂಡುಹಿಡಿಯಬಹುದು.

Vinay Bhat

Tv9 ಕನ್ನಡ ಡಿಜಿಟಲ್‌ನಲ್ಲಿ 2021ರ ಜುಲೈನಿಂದ ಕ್ರೀಡಾ ಹಾಗೂ ತಂತ್ರಜ್ಞಾನ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಡಿಜಿಟಲ್ ವಿಭಾಗದಲ್ಲಿ 6 ವರ್ಷ ಅನುಭವ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನವ. ಕ್ರೀಡಾ ಸುದ್ದಿ, ಕ್ರೀಡಾ ಲೇಖನ, ಟೆಕ್ನಾಲಜಿ, ಸಿನಿಮಾ ಸುದ್ದಿ ಬರೆಯುವುದು ನನ್ನ ಆಸಕ್ತದಾಯಕ ವಿಷಯಗಳು.

Read More
Loading...
Unable to load recommendations.
Follow Us