Tech Tips: ಫ್ಲಿಪ್ಕಾರ್ಟ್ನಲ್ಲಿ ನಿಮ್ಮ ಹಳೆಯ ಫೋನನ್ನು ಮಾರಾಟ ಮಾಡುವುದು ಹೇಗೆ?
Flipkart Mobile Sale: ನಿಮ್ಮ ಹಳೆಯ ಸ್ಮಾರ್ಟ್ಫೋನನ್ನು ಯಾವುದೇ ಅಪಾಯವಿಲ್ಲದೆ ಫ್ಲಿಪ್ಕಾರ್ಟ್ನಲ್ಲಿ ಮಾರಾಟ ಮಾಡಬಹುದು. ಇಲ್ಲಿ ನಿಮ್ಮ ಮೊಬೈಲ್ಗೆ ಅರ್ಹವಾಗಿ ಖಚಿತ ಬೆಲೆ ಕೂಡ ಸಿಗುತ್ತದೆ. ಕೆಲವೇ ಸಮಯದಲ್ಲಿ ಹಣ ನಿಮ್ಮ ಬ್ಯಾಂಕ್ ಅಕೌಂಟ್ಗೆ ಬಂದಿರುತ್ತದೆ.
1 / 6
ನಿಮ್ಮ ಹಳೆಯ ಮೊಬೈಲ್ ಅನ್ನು ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್ಕಾರ್ಟ್ ಮೂಲಕ ಮಾರಾಟ ಮಾಡಬಹುದು ಎಂಬುದು ನಿಮಗೆ ಗೊತ್ತೇ?. ಫ್ಲಿಪ್ಕಾರ್ಟ್ ಸಂಸ್ಥೆ ಸೆಲ್- ಬ್ಯಾಕ್ ಎಂಬ ವಿಶೇಷ ಆಯ್ಕೆಯನ್ನು ನೀಡಿದೆ. ಇದರ ಮೂಲಕ ನಿಮ್ಮ ಹಳೆಯ ಸ್ಮಾರ್ಟ್ಫೋನನ್ನು ಯಾವುದೇ ಅಪಾಯವಿಲ್ಲದೆ ಸೇಫ್ ಹಾಗೂ ಸುಲಭವಾಗಿ ಮಾರಾಟ ಮಾಡಬಹುದು.
2 / 6
ಇಲ್ಲಿ ನಿಮ್ಮ ಮೊಬೈಲ್ಗೆ ಅರ್ಹವಾಗಿ ಖಚಿತ ಬೆಲೆ ಕೂಡ ಸಿಗುತ್ತದೆ. ಕೆಲವೇ ಸಮಯದಲ್ಲಿ ಹಣ ನಿಮ್ಮ ಬ್ಯಾಂಕ್ ಅಕೌಂಟ್ಗೆ ಬಂದಿರುತ್ತದೆ. ಫ್ಲಿಪ್ಕಾರ್ಟ್ ಮೂಲಕ ಸೆಕೆಂಡ್ ಹ್ಯಾಂಡ್ ಸ್ಮಾರ್ಟ್ಫೋನ್ ಸೇಲ್ ಮಾಡಲು ಈ ಕೆಳಗಿನ ವಿಧಾನ ಅನುಸರಿಸಿ.
3 / 6
ಫ್ಲಿಪ್ಕಾರ್ಟ್ ಆ್ಯಪ್ ತೆರೆಯಿರಿ ಮತ್ತು ಕೆಳ ಭಾಗದಲ್ಲಿರವ ಕ್ಯಾಟಗರಿ ಸೆಕ್ಷನ್ನಲ್ಲಿ ಸೆಲ್ ಬ್ಯಾಕ್ ಸೆಲೆಕ್ಟ್ ಮಾಡಿ. ಈ ಆಯ್ಕೆ ಸಿಗಲಿಲ್ಲ ಎಂದಾದರೆ ಸರ್ಚ್ ಬಾರ್ನಲ್ಲಿ ಸೆಲ್ ಬ್ಯಾಕ್ ಸರ್ಚ್ ಮಾಡಿ ಓಪನ್ ಮಾಡಿರಿ. ಇಲ್ಲಿ ಕ್ಯೂಆರ್ ಕೋಡ್ ಆಯ್ಕೆ ಕೂಡ ಇದ್ದು ಸ್ಕ್ಯಾನ್ ಮಾಡುವ ಮೂಲಕ ಮುಂದುವರೆಯಬಹುದು.
4 / 6
ಈಗ ನೀವು ನಿಮ್ಮ ಮೊಬೈಲ್ ಫೋನ್‌ನ ಬ್ರ್ಯಾಂಡ್, ಮಾಡೆಲ್ ಮತ್ತು IMEI ಸಂಖ್ಯೆಯಂತಹ ಮಾಹಿತಿ ನೀಡಬೇಕು. ನಂತರ ನಿಮ್ಮ ನೆಟ್‌ವರ್ಕ್ ಪಾಲುದಾರರಿಂದ ಫೋನ್‌ಗೆ ಎಷ್ಟು ಬೆಲೆ ಎಂಬ ಮಾಹಿತಿ ಕಾಣಿಸುತ್ತದೆ. ಅಲ್ಲಿ ನೀಡಿರುವ ಬೆಲೆ ನಿಮಗೆ ಒಪ್ಪಿಗೆ ಇದ್ದಲ್ಲಿ 1 ರೂ. ಪಾವತಿಸಿ. ಬಳಿಕ ಮನೆ ಬಾಗಿಲಿಗೆ ಬಂದು ಪಿಕ್ ಅಪ್ ಮಾಡುತ್ತಾರೆ.
5 / 6
ಈ ಆರ್ಡರ್ ಖಚಿತವಾಯಿತು ಎಂದಾದರೆ 48 ಗಂಟೆಗಳ ಒಳಗೆ ಮೊಬೈಲ್ ಪಡೆದುಕೊಳ್ಳಲು ನಿಮ್ಮ ಮನೆಗೆ ಬರುತ್ತಾರೆ. ನಿಮ್ಮ ಮೊಬೈಲ್ ಕಂಪನಿಯವರು ಮನೆಗೆ ಬಂದು ಮೊಬೈಲ್ ಪರಿಶೀಲಿಸಿ ಅಂತಿಮ ಬೆಲೆಯನ್ನು ಹೇಳುತ್ತಾರೆ. ಈ ಬೆಲೆ ನಿಮಗೆ ಇಷ್ಟವಾದರೆ ಮುಂದುವರೆಸಬಹುದು. ನೀವು ಮುಂದುವರೆಸಿದರೆ 24 ಗಂಟೆಗಳ ಒಳಗೆ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಆಗುತ್ತದೆ. ಆರ್ಡರ್ ರದ್ದುಗೊಳಿಸಿದರೆ 1 ರೂ. ಅನ್ನು ನಿಮಗೆ ಪುನಃ ನೀಡಲಾಗುತ್ತದೆ.
6 / 6
ನಿಮ್ಮ ಹಳೆಯ ಫೋನನ್ನು ಮಾರಾಟ ಮಾಡುವ ಮುನ್ನ ಅದರಲ್ಲಿರುವ ಅಕೌಂಟ್ಸ್, ಫೈಲ್ಸ್, ಫೋಟೋಗಳನೆಲ್ಲಾ ಬ್ಯಾಕಪ್ ಮಾಡಿಕೊಳ್ಳಿ. ಅಂತೆಯೇ, ಎಕ್ಸ್, ಫೇಸ್ಬುಕ್, ವಾಟ್ಸ್ಆ್ಯಪ್, ಇನ್ಸ್ಟಾಗ್ರಾಮ್, ಫೋನ್ ಪೇ, ಗೂಗಲ್ ಪೇ ಸೇರಿದಂತೆ ನೀವು ಲಾಗಿನ್ ಆಗಿರುವ ಆಕೌಂಟ್ನಿಂದ ಲಾಗ್ ಜೌಟ್ ಆಗಿದ್ದೀರಾ ಅನ್ನೋದನ್ನ ಖಚಿತ ಪಡಿಸಿಕೊಳ್ಳಿ.