‘ನಾನು ರಾಕೇಶ್ ಜತೆ ಮದುವೆ ಆಗೋಕೆ ಸಿದ್ಧ, ಆದರೆ..’ ಹೊಸ ಕಾರಣ ನೀಡಿದ ಶಮಿತಾ
TV9 Web | Updated By: ರಾಜೇಶ್ ದುಗ್ಗುಮನೆ
Updated on:
Feb 05, 2022 | 4:28 PM
ಈಗ ಶಮಿತಾ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ. ರಾಕೇಶ್ ಅವರನ್ನು ಮದುವೆ ಆಗೋಕೆ ಅವರು ಸಿದ್ಧರಿದ್ದಾರಂತೆ. ಆದರೆ.. ಅವರು ಸದ್ಯಕ್ಕೆ ವಿವಾಹ ಆಗುತ್ತಿಲ್ಲ. ಅದಕ್ಕೆ ಅವರು ಕಾರಣ ನೀಡಿದ್ದಾರೆ.
1 / 6
ಬಿಗ್ ಬಾಸ್ ಮನೆಯಲ್ಲಿ ಹಲವು ಪ್ರೇಮ ಕಹಾನಿಗಳು ಹುಟ್ಟಿಕೊಂಡಿವೆ. ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರದಲ್ಲಿ ಇವರಲ್ಲಿ ಕೆಲವರು ಮದುವೆ ಆಗಿದ್ದಾರೆ. ಅದೇ ರೀತಿ ಬಿಗ್ ಬಾಸ್ ಸ್ಪರ್ಧಿಗಳಾದ ಶಮಿತಾ ಶೆಟ್ಟಿ ಹಾಗೂ ರಾಕೇಶ್ ಬಾಪಟ್ ನಡುವೆಯೂ ಪ್ರೀತಿ ಮೊಳೆತಿದೆ.
2 / 6
‘ಬಿಗ್ ಬಾಸ್ ಒಟಿಟಿ’ಯಲ್ಲಿ ಇಬ್ಬರಿಗೂ ಪರಿಚಯ ಆಯಿತು. ಇವರ ಪರಿಚಯ ಗೆಳೆತನವಾಗಿ ಬೆಳೆದು, ಈಗ ಪ್ರೀತಿಗೆ ತಿರುಗಿದೆ. ಇಬ್ಬರೂ ಪರಸ್ಪರ ಒಬ್ಬರನ್ನು ಒಬ್ಬರು ಅರಿತುಕೊಂಡಿದ್ದಾರೆ. ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಅಚ್ಚುಮೆಚ್ಚು. ಈಗ ಶಮಿತಾ ಮದುವೆ ಬಗ್ಗೆ ಮಾತನಾಡಿದ್ದಾರೆ.
3 / 6
‘ಬಿಗ್ ಬಾಸ್ ಒಟಿಟಿ’ ಬಳಿಕ ಶಮಿತಾ ಹಾಗೂ ರಾಕೇಶ್ ‘ಬಿಗ್ ಬಾಸ್ 15’ನೇ ಸೀಸನ್ಗೆ ಬಂದರು. ಕಿಡ್ನಿಯಲ್ಲಿ ಕಲ್ಲು ಇರುವ ಹಿನ್ನೆಲೆಯಲ್ಲಿ ರಾಕೇಶ್ ಅರ್ಧಕ್ಕೆ ಮರಳಿದರು, ಶಮಿತಾ ಫಿನಾಲೆ ರೇಸ್ನಲ್ಲಿದ್ದರು. ಆದರೆ, ಗೆಲ್ಲೋಕೆ ಆಗಲಿಲ್ಲ.
4 / 6
ಈಗ ಶಮಿತಾ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ. ಅವರು ರಾಕೇಶ್ ಅವರನ್ನು ಮದುವೆ ಆಗೋಕೆ ಸಿದ್ಧರಿದ್ದಾರಂತೆ. ಆದರೆ.. ಅವರು ಸದ್ಯಕ್ಕೆ ವಿವಾಹ ಆಗುತ್ತಿಲ್ಲ. ಅದಕ್ಕೆ ಅವರು ಕಾರಣ ನೀಡಿದ್ದಾರೆ.
5 / 6
‘ನಾನು ಕೆಲಸ ಮಾಡಬೇಕು, ಮದುವೆ ಆಗಬೇಕು. ನಾನು ನನಗೆ ಒಂದಷ್ಟು ನಿಯಮಗಳನ್ನು ಹಾಕಿಕೊಂಡಿದ್ದೇನೆ. ಇದರಿಂದ ನಾನು ಬಹಳ ವರ್ಷಗಳಿಂದ ಒಂಟಿಯಾಗಿದ್ದೆ’ ಎಂದಿದ್ದಾರೆ ಶಮಿತಾ.
6 / 6
‘ಈಗ ನನ್ನನ್ನು ಅರ್ಥೈಸಿಕೊಂಡಿರುವ ವ್ಯಕ್ತಿಯೊಬ್ಬರು ಸಿಕ್ಕಿದ್ದಾರೆ. ಈ ವರ್ಷ ಮದುವೆ ಆಗಬೇಕು ಎನ್ನುವ ಆಲೋಚನೆ ಇದೆ. ಆದರೆ, ರಾಕೇಶ್ ಅವರನ್ನು ನಾನು ಇನ್ನಷ್ಟು ಅರ್ಥ ಮಾಡಿಕೊಳ್ಳಬೇಕು. ಆ ಬಳಿಕ ಮದುವೆ’ ಎಂದಿದ್ದಾರೆ ಶಮಿತಾ.
Published On - 4:23 pm, Sat, 5 February 22