ಪೆನ್ಸಿಲ್ನಲ್ಲಿ ಮೂಡಿಬಂದ ಬಾಲ ಕೃಷ್ಣ; ಇಲ್ಲಿವೆ ಫೋಟೋಸ್
ಆಗಸ್ಟ್ 26 ರಂದು ಬೆಣ್ಣೆ ಕಳ್ಳ ಕೃಷ್ಣ ಜನಿಸಿದ ದಿನವನ್ನು ವಿಜೃಂಬಣೆಯಿಂದ ಆಚರಿಸಲಾಗುತ್ತಿದೆ. ಈ ನಡುವೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಪಟ್ಟಣದ ನಳೀನಿ ನವೀನ್ ಕುಮಾರ್ ಎಂಬುವವರು, ಪೆನ್ಸಿಲ್ನಲ್ಲಿ ಕೃಷ್ಣನನ್ನು ಕೆತ್ತನೆ ಮಾಡಿ ವಿಶಿಷ್ಟ ಸಾಧನೆ ಮಾಡಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ.
1 / 6
ಶ್ರೀ ಕೃಷ್ಣ ಜನ್ಮಾಷ್ಟಮಿ, ಆಗಸ್ಟ್ 26 ರಂದು ಬೆಣ್ಣೆ ಕಳ್ಳ ಕೃಷ್ಣ ಜನಿಸಿದ ದಿನವನ್ನು ವಿಜೃಂಬಣೆಯಿಂದ ಆಚರಿಸಲಾಗುತ್ತಿದೆ. ಅದರಲ್ಲೂ ತಾಯಂದಿರು ತಮ್ಮ ಮುದ್ದು ಕಂದಮ್ಮನಿಗೆ ರಾಧೆ ಕೃಷ್ಣನ ವೇಷಗಳನ್ನು ತೊಟ್ಟು ಸಂಭ್ರಮಿಸುತ್ತಾರೆ.
2 / 6
ಶ್ರೀಕೃಷ್ಣನನ್ನು ಶ್ರದ್ಧಾ ಭಕ್ತಿಯಿಂದ ಆರಾಧಿಸಲು ಮೀಸಲಾಗಿರುವ ಈ ದಿನವನ್ನು ಸಡಗರದಿಂದ ಎಲ್ಲೆಡೆ ಆಚರಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಈ ನಡುವೆ ರಾಯಚೂರಿನಲ್ಲಿ ಪೆನ್ಸಿಲ್ನಲ್ಲಿ ಬಾಲ ಕೃಷ್ಣನನ್ನು ಕೆತ್ತನೆ ಮಾಡಲಾಗಿದೆ.
3 / 6
ನಾಳೆ(ಸೋಮವಾರ) ಶ್ರೀ ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆ ಬಾಲ ಕೃಷ್ಣನನ್ನ ಪೆನ್ಸಿಲ್ನಲ್ಲಿ ಕೆತ್ತನೆ ಮಾಡಲಾಗಿದ್ದು, ಈ ಮೂಲಕ ವಿಶಿಷ್ಟವಾಗಿ ಕೃಷ್ಣನ ಹುಟ್ಟಿದ ಹಬ್ಬವನ್ನು ಆಚರಿಸಲು ಮುಂದಾಗಿದ್ದಾರೆ.
4 / 6
ಇನ್ನು ಈ ಕೆತ್ತನೆಮ ಮಾಡಿದವರು ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಪಟ್ಟಣದ ನಳೀನಿ ನವೀನ್ ಕುಮಾರ್ ಎಂಬುವವರು, ಪೆನ್ಸಿಲ್ನಲ್ಲಿ ಕೃಷ್ಣನನ್ನು ಕೆತ್ತನೆ ಮಾಡಿ ವಿಶಿಷ್ಟ ಸಾಧನೆ ಮಾಡಿದ್ದಾರೆ.
5 / 6
ಪೆನ್ಸಿಲ್ನಲ್ಲಿ ಮೂಡಿದ ಬಾಲ ಕೃಷ್ಣನ ಸೂಕ್ಷ್ಮ ಕಲಾಕೃತಿ, 1 ಮಿಲಿ ಮೀಟರ್ ಅಗಲ ಹಾಗೂ 1 ಸೆಂಟಿಮೀಟರ್ ಎತ್ತರವಾಗಿದ್ದು, ಸುಮಾರು ನಾಲ್ಕು ಗಂಟೆಗಳಲ್ಲಿ ಈ ಕಲಾಕೃತಿಯನ್ನ ನಳೀನಿ ಅವರು ಕೆತ್ತನೆ ಮಾಡಿದ್ದಾರೆ.
6 / 6
ಇದು ನಳೀನಿಯವರ 104 ಸೂಕ್ಷ್ಮ ಕಲಾಕೃತಿಯಾಗಿದ್ದು, ಈ ಹಿಂದೆಯೂ ಅಯೋಧ್ಯೆ ದೇವಸ್ಥಾನ ಉದ್ಘಾಟನೆ ವೇಳೆ ಅಯೋಧ್ಯೆಯ ಕಲಾಕೃತಿ ಕೆತ್ತನೆ ಮಾಡಿದ್ದರು. ಇದೀಗ ಬಾಲ ಕೃಷ್ಣನನ್ನು ಪೆನ್ಸಿಲ್ನಲ್ಲಿ ಕೆತ್ತನೆ ಮಾಡಿದ್ದಾರೆ.
Published On - 2:41 pm, Sun, 25 August 24