ವಿಜಯಪುರ: ಖಾಸಗಿ ಶಾಲೆಗೆ ಸೆಡ್ಡು ಹೊಡೆದ ಸರ್ಕಾರಿ ಶಾಲೆ; ಏನೇನಿದೆ ವಿಶೇಷತೆ?
ಸರ್ಕಾರಿ ಶಾಲೆಗಳು ಬದಲಾಗುತ್ತಿವೆ. ಖಾಸಗಿ ಶಾಲೆಗಳ ಅಬ್ಬರದ ನಡುವೆಯೋ ಸರ್ಕಾರಿ ಶಾಲೆಗಳು ಪೈಪೋಟಿ ನೀಡುತ್ತಿವೆ. ಇದಕ್ಕೆ ವಿಜಯಪುರದ ಸರ್ಕಾರಿ ಶಾಲೆಗಳು ಉದಾಹರಣೆಯಾಗಿದೆ. ಯಾಕೆ ಅಂತೀರಾ? ಈ ಸ್ಟೋರಿ ಓದಿ.
1 / 6
ಸರ್ಕಾರಿ ಶಾಲೆಗಳು ಅಂದರೆ ಸಾಕು ಜನರಿಗೆ ಅಸಡ್ಯ. ಅಲ್ಲಿ ಮಕ್ಕಳು ಕಲಿಯೋದಿಲ್ಲ, ಕಲಿಸೋರು ಇಲ್ಲ. ಸೌಲಭ್ಯಗಳಂತೂ ಇಲ್ಲವೇ ಇಲ್ಲ ಎನ್ನುವುದು ಪೋಷಕರ ಮಾತು. ಇದಕ್ಕೆ ತದ್ವಿರುದ್ಧವಾಗಿ ಬದಲಾಗುತ್ತಿವೆ ವಿಜಯಪುರದ ಸರ್ಕಾರಿ ಶಾಲೆಗಳು.
2 / 6
ಅದರಲ್ಲೂ ವಿಜಯಪುರದ ಇಬ್ರಾಹಿಂಪುರದ ಬಳಿಯ ಸರ್ಕಾರಿ ಪ್ರಾಥಮಿಕ ಶಾಲೆ ನಂಬರ್ 6 ಶಾಲೆ ನೋಡಿದರೆ ನಿಮಗೆ ಆಶ್ಚರ್ಯ ಆಗೋದರಲ್ಲಿ ಅನುಮಾನವೇ ಇಲ್ಲ. ಖಾಸಗಿ ಶಾಲೆಯಲ್ಲಿರುವಂತೆ ಸೌಲಭ್ಯಗಳು, ಹೈಟೆಕ್ ಕ್ಲಾಸ್, ಆಟವಾಡಲು ಮೈದಾನ ಎಲ್ಲವೂ ಇದೆ.
3 / 6
ಇದೊಂದು ಶಾಲೆ ಕೇವಲ ಉದಾಹರಣೆ. ಜಿಲ್ಲೆಯ ಬಹುತೇಕ ಸರ್ಕಾರಿ ಶಾಲೆಗಳು ಬದಲಾಗುತ್ತಿದ್ದು, ಖಾಸಗಿ ಶಾಲೆ ಎಲ್ಲ ಕಾರ್ಯವನ್ನ ಅಳವಡಿಸಿ ಬದಲಾವಣೆ ಮಾಡಲಾಗಿದೆ. ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಶಿಕ್ಷಣ ಇಲಾಖೆ ಅಧಿಕಾರಿಗಳು, ಮಕ್ಕಳು ಹಾಗೂ ಪೋಷಕರ ಸಭೆ ನಡೆಸುತ್ತಿದ್ದಾರೆ.
4 / 6
ಕಳೆದ ಎರಡು ವರ್ಷಗಳಿಂದ ತಿಂಗಳ ಮೂರನೇ ಶನಿವಾರ ಕಡ್ಡಾಯವಾಗಿ ಪೋಷಕರ ಸಭೆ ನಡೆಸುತ್ತಿದ್ದು, ಮಕ್ಕಳ ಶಿಕ್ಷಣದ ಬಗ್ಗೆ ಪೋಷಕರಿಗೆ ಮಾಹಿತಿ ನೀಡುತ್ತಿದ್ದಾರೆ. ಜೊತೆಗೆ ಮಕ್ಕಳ ಬೆಳೆವಣಿಗೆಗೆ ಬೇಕಾದ ಸಲಹೆ ಸೂಚನೆ ವಿನಿಮಯ ಮಾಡಿಕೊಳುತ್ತಿದ್ದಾರೆ.
5 / 6
ಶಿಕ್ಷಣ ಇಲಾಖೆಯ ಅಧಿಕಾರಿಗಳ ಈ ವಿಶಿಷ್ಟವಾದ ಪ್ರಯತ್ನ, ಸರ್ಕಾರಿ ಶಾಲೆ ಮಕ್ಕಳ ಪೋಷಕರ ಸಂತಸಕ್ಕೆ ಕಾರಣವಾಗಿದೆ. ಖಾಸಗಿ ಶಾಲೆಯ ಮಕ್ಕಳಿಗೆ ಶಿಕ್ಷಕರು ಹಾಗೂ ಪೋಷಕರು ಸಭೆ ಕರೆಯುತ್ತಿದ್ದರು. ಆದರೆ, ಬಡವರ ಮಕ್ಕಳು ಕಲಿಯುವ ಸರ್ಕಾರಿ ಶಾಲೆಯಲ್ಲಿ ಸಭೆ ಇರಲಿಲ್ಲ. ಇದರಿಂದ ನಮ್ಮ ಮಕ್ಕಳು ಓದುತ್ತಾರೋ, ಇಲ್ಲವೋ ಗೊತ್ತಾಗುತ್ತಿರಲಿಲ್ಲ. ಇದೀಗ ಸಭೆ ನಡೆಸುತ್ತಿರುವುದರಿಂದ ನಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಮಾಹಿತಿ ಸಿಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
6 / 6
ಜಿಲ್ಲೆಯ ಸುಮಾರು 1500 ಶಾಲೆಗಳಲ್ಲಿ ಈ ರೀತಿಯ ಕಾರ್ಯಕ್ರಮ ನಡೆಯುತ್ತಿದ್ದು, ಶಿಕ್ಷಣ ವ್ಯವಸ್ಥೆಯಲ್ಲಿ ಉತ್ತಮ ಬದಲಾವಣೆ ಕಾಣುತ್ತಿದೆ ಎಂದು ಸಂತಸ ಪಟ್ಟಿದ್ದಾರೆ. ಒಟ್ಟಾರೆ ವಿಜಯಪುರ ಜಿಲ್ಲೆಯ ಅಧಿಕಾರಿಗಳು ನಡೆಸುತ್ತಿರುವ ಈ ವಿಶಿಷ್ಟ ಕಾರ್ಯ, ಮಕ್ಕಳಿಗೆ ಹಾಗೂ ಅವರ ಪೋಷಕರಿಗೆ ಸಂತಸ ತಂದಿದ್ದು, ಸರ್ಕಾರಿ ಶಾಲೆಗಳ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಲಿ ಎನ್ನುವುದು ಎಲ್ಲರ ಆಶಯವಾಗಿದೆ.