- Kannada News Photo gallery Manore and Devaraj R new movie title Doora Theera Yaana Entertainment News in Kannada
ಮಂಸೋರೆ ಹೊಸ ಸಿನಿಮಾ ‘ದೂರ ತೀರ ಯಾನ’; ವಿಜಯ್ ಕೃಷ್ಣ, ಪ್ರಿಯಾಂಕಾ ಕುಮಾರ್ ಮುಖ್ಯ ಪಾತ್ರ
ನಿರ್ದೇಶಕ ಮಂಸೋರೆ ಅವರು ಈಗಾಗಲೇ ಗಮನಾರ್ಹ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ. ಮಂಸೋರೆ ಮತ್ತು ನಿರ್ಮಾಪಕ ದೇವರಾಜ್ ಆರ್. ಅವರ ಕಾಂಬಿನೇಷನ್ನಲ್ಲಿ ಬಂದ ‘ಆ್ಯಕ್ಟ್ 1978’, ‘19.20.21’ ಸಿನಿಮಾಗಳು ಗಟ್ಟಿ ಕಥಾಹಂದರದ ಕಾರಣಕ್ಕೆ ಸದ್ದು ಮಾಡಿದ್ದವು. ಈಗ ಅವರ ಇನ್ನೊಂದು ಸಿನಿಮಾ ಅನೌನ್ಸ್ ಆಗಿದೆ.
Updated on: Aug 17, 2024 | 10:43 PM

ನಿರ್ದೇಶಕ ಮಂಸೋರೆ ಮತ್ತು ನಿರ್ಮಾಪಕ ದೇವರಾಜ್ ಆರ್. ಮತ್ತೆ ಜತೆಯಾಗಿ ಹೊಸ ಸಿನಿಮಾ ಘೋಷಿಸಿದ್ದಾರೆ. ಅವರ ಹೊಸ ಸಿನಿಮಾದ ಟೈಟಲ್ ಲಾಂಚ್ ಮಾಡಲಾಗಿದೆ. ಈ ಸಿನಿಮಾಗೆ ‘ದೂರ ತೀರ ಯಾನ’ ಎಂದು ಶೀರ್ಷಿಕೆ ಇಡಲಾಗಿದೆ. ಮುಖ್ಯ ಪಾತ್ರದಲ್ಲಿ ವಿಜಯ್ ಕೃಷ್ಣ ಮತ್ತು ಪ್ರಿಯಾಂಕಾ ಕುಮಾರ್ ನಟಿಸಲಿದ್ದಾರೆ.

‘ಡಿ. ಕ್ರಿಯೇಷನ್ಸ್’ ಮೂಲಕ ‘ದೂರ ತೀರ ಯಾನ’ ಸಿನಿಮಾ ಮೂಡಿಬರಲಿದೆ. ಇತ್ತೀಚೆಗೆ ಈ ಸಿನಿಮಾದ ಟೈಟಲ್ ಅನಾವರಣ ಕಾರ್ಯಕ್ರಮ ಹಾಗೂ ಸುದ್ದಿಗೋಷ್ಠಿ ನಡೆಯಿತು. ಈ ವೇಳೆ ಸಿನಿಮಾ ಬಗ್ಗೆ ಚಿತ್ರತಂಡದವರು ಮಾಹಿತಿ ಹಂಚಿಕೊಂಡರು. ‘ಪ್ರೇಕ್ಷಕರ ಅಭಿರುಚಿ ಬದಲಾಗಿದ್ದು, ಅವರ ನಿರೀಕ್ಷೆಗಳು ಬಹಳ ಇದೆ. ಅವರಿಗೆ ಬೇಕಾದ ರೀತಿಯ ನಾನು ಮಾಡಲು ಹೊರಟಿರುವ ಸಿನಿಮಾ ಇದು’ ಎಂದು ಮಂಸೋರೆ ಹೇಳಿದ್ದಾರೆ.

‘ದೂರ ತೀರ ಯಾನ’ ಒಂದು ಜರ್ನಿ ಸಿನಿಮಾ. ಸಿನಿಮಾದ ಮೊದಲ 10 ನಿಮಿಷ ಮಾತ್ರ ಬೆಂಗಳೂರಲ್ಲಿ ನಡೆಯುತ್ತದೆ. ಬೆಂಗಳೂರಿನಿಂದ ಗೋವಾಕ್ಕೆ ಹೊರಟ ಹುಡುಗ ಮತ್ತು ಹುಡುಗಿ ಹೊಸ ರೀತಿಯ ಪ್ರೀತಿಯನ್ನು ಕಂಡುಕೊಳ್ಳುವ ಕಥೆ ಇದಾಗಿದೆ. ವೆಬ್ ಸಿರೀಸ್ಗಳಲ್ಲಿ ನಟಿಸಿ ಅನುಭವ ಪಡೆದ ವಿಜಯ್ ಕೃಷ್ಣ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ.

‘ರುದ್ರ ಗರುಡ ಪುರಾಣ’ ಸಿನಿಮಾದ ಖ್ಯಾತಿಯ ನಟಿ ಪ್ರಿಯಾಂಕಾ ಕುಮಾರ್ ಅವರು ‘ದೂರ ತೀರ ಯಾನ’ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಬಕೇಶ್ ಮತ್ತು ಕಾರ್ತಿಕ್ ಅವರು ಸಂಗೀತ ನಿರ್ದೇಶನ ಈ ಸಿನಿಮಾಗೆ ಇರಲಿದೆ. ಶೇಖರ್ ಚಂದ್ರ ಅವರು ಛಾಯಾಗ್ರಹಣ ಮಾಡಲಿದ್ದಾರೆ. ನಾಗೇಂದ್ರ ಕೆ. ಉಜ್ಜನಿ ಅವರು ಸಂಕಲನ ಮಾಡಲಿದ್ದಾರೆ.

ಚೇತನಾ ತೀರ್ಥಹಳ್ಳಿ ಅವರು ಈ ಸಿನಿಮಾಗೆ ಸಂಭಾಷಣೆ ಬರೆಯುತ್ತಿದ್ದಾರೆ. ಸೆಪ್ಟೆಂಬರ್ಲ್ಲಿ ಚಿತ್ರೀಕರಣ ಆರಂಭ ಆಗಲಿದೆ. ಟೈಟಲ್ ಟೀಸರ್ಗೆ ನಟ ಡಾಲಿ ಧನಂಜಯ್ ಅವರು ಧ್ವನಿ ನೀಡಿದ್ದಾರೆ. ‘ಬಹಳ ದಿನಗಳಿಂದ ಒಳ್ಳೆಯ ಪಾತ್ರಕ್ಕಾಗಿ ಕಾದಿದ್ದೆ. ಈ ಸಿನಿಮಾದಲ್ಲಿ ಅದು ಸಿಕ್ಕಿದೆ’ ಎಂದು ವಿಜಯ್ ಕೃಷ್ಣ ಹೇಳಿದ್ದಾರೆ.




