ಕೇಂದ್ರ ಸರ್ಕಾರ ಪದ್ಮವಿಭೂಷಣ ಮತ್ತು ಪದ್ಮಭೂಷಣ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಈ ಬಾರಿ ದೇಶದ 7 ಗಣ್ಯರಿಗೆ ಪದ್ಮವಿಭೂಷಣ ಹಾಗೂ 19 ಮಂದಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಸರ್ಕಾರ ಗೌರವಿಸಲಿದೆ. ಇದರಲ್ಲಿ ಕ್ರೀಡಾ ವಿಭಾಗದ ಐವರು ಸಾಧಕರಿಗೆ ಈ ಪ್ರಶಸ್ತಿ ಲಭಿಸಿದೆ. ಅವರಲ್ಲಿ ಪಿ.ಆರ್. ಶ್ರೀಜೇಶ್, ಆರ್. ಅಶ್ವಿನ್, ಐ.ಎಂ. ವಿಜಯನ್, ಹರ್ವಿಂದರ್ ಸಿಂಗ್ ಹಾಗೂ ಸತ್ಯಪಾಲ್ ಸಿಂಗ್ ಸೇರಿದ್ದಾರೆ.