AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Travel India: ಪ್ರಕೃತಿ ಸೌಂದರ್ಯದಿಂದ ಬೆರಗುಗೊಳಿಸುವ ದೇಶದ ನಯನ ಮನೋಹರ ಸರೋವರಗಳಿವು

Indian lakes: ನೀವು ಪ್ರಕೃತಿ ಪ್ರೇಮಿಗಳಾಗಿದ್ದರೆ, ದೇಶದ ಅದ್ಭುತ ಸರೋವರಗಳಿಗೆ ಭೇಟಿ ನೀಡುವ ಕನಸು ಹೊಂದಿದ್ದರೆ ಈ ಸರೋವರಗಳನ್ನು ಮಿಸ್ ಮಾಡಲೇಬೇಡಿ. ಅಸ್ಸಾಂನ ಸೋನ್​ಬಿಲ್, ಮಣಿಪುರದ ಲೋಕ್ಟಾಕ್, ಕಾಶ್ಮೀರದ ದಾಲ್, ಒರಿಸ್ಸಾದ ಚಿಲ್ಕಾ ಸರೋವರಗಳು ತಮ್ಮ ನಯನ ಮನೋಹರ ಸೌಂದರ್ಯದಿಂದ ಪ್ರವಾಸಿಗರನ್ನು ಸೆಳೆಯುತ್ತಿವೆ.

shivaprasad.hs
|

Updated on: Apr 21, 2022 | 9:42 AM

Share
ಭಾರತ ಪ್ರವಾಸಿಗರ ಸ್ವರ್ಗ ಎಂದರೆ ತಪ್ಪಿಲ್ಲ. ವಿವಿಧ ರೀತಿಯ ಭೂಪ್ರದೇಶಗಳಿಂದ ಸಮೃದ್ಧವಾಗಿರುವ ಇಲ್ಲಿ ಹಲವು ಅದ್ಭುತ ಸರೋವರಗಳಿವೆ. ನೀವು ದೇಶದ ಸುಂದರ ಸರೋವರಗಳಿಗೆ ಭೇಟಿ ನೀಡುವ ಪ್ಲಾನ್ ಹೊಂದಿದ್ದರೆ ಇವುಗಳನ್ನು ಮಿಸ್ ಮಾಡಲೇಬೇಡಿ.

1 / 5
ಸೋನ್ ಬಿಲ್ ಸರೋವರ: ಅಸ್ಸಾಂನ ಕರಿಂಗಂಜ್ ಪ್ರದೇಶದಲ್ಲಿರುವ ಈ ಸರೋವರ ಅದ್ಭುತವಾಗಿದೆ. ಬೇಸಿಗೆಯಲ್ಲಿ ನೀವು ಈ ಸರೋವರಕ್ಕೆ ಭೇಟಿ ನೀಡುಬಹುದು.  ಚಳಿಗಾಲದಲ್ಲಿ ಸರೋವರದ ಕೆಲವು ಭಾಗಗಳಲ್ಲಿ ಕೃಷಿ ಮಾಡಲಾಗುತ್ತದೆ.

2 / 5
ಲೋಕ್ಟಾಕ್ ಸರೋವರ: ಈ ಸರೋವರವು ದೇಶದ ಈಶಾನ್ಯ ಭಾಗದಲ್ಲಿರುವ ಮಣಿಪುರದಲ್ಲಿದೆ. ಇದನ್ನು ಸಿಹಿನೀರಿನ ಸರೋವರ ಎಂದೂ ಕರೆಯುತ್ತಾರೆ. ಇದರ ಸೌಂದರ್ಯ ಮನಮೋಹಕವಾಗಿದೆ.

3 / 5
ದಾಲ್ ಸರೋವರ: ಕಾಶ್ಮೀರವು ಭಾರತದ ಜನಪ್ರಿಯ ಪ್ರವಾಸಿ ತಾಣವಾಗಿದೆ. ಇಲ್ಲಿರುವ ದಾಲ್ ಸರೋವರವು ವಿಶಿಷ್ಟವಾದ, ಬೆರಗುಗೊಳಿಸುವ ಸೌಂದರ್ಯವನ್ನು ಹೊಂದಿದೆ. ವಿವಾಹವಾದ ನವಜೋಡಿ ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದರೆ ದಾಲ್ ಸರೋವರವನ್ನು ಮಿಸ್ ಮಾಡಲೇಬೇಡಿ.

4 / 5
ಚಿಲ್ಕಾ ಸರೋವರ: ಒಡಿಶಾದ ಚಿಲ್ಕಾ ಸರೋವರವು ಭಾರತದ ಅತಿದೊಡ್ಡ ಸರೋವರಗಳಲ್ಲಿ ಒಂದಾಗಿದೆ. ನವೆಂಬರ್ ನಿಂದ ಫೆಬ್ರವರಿ ನಡುವೆ ಸರೋವರಕ್ಕೆ ಭೇಟಿ ನೀಡಲು ಉತ್ತಮ ಸಮಯ. ಈ ಸಮಯದಲ್ಲಿ ಇಲ್ಲಿನ ವಾತಾವರಣವು ಆಹ್ಲಾದಕರವಾಗಿರುತ್ತದೆ.

5 / 5