Independence Day 2024: ಇದೇ ಮೊದಲ ಬಾರಿಗೆ ಚನ್ನಪಟ್ಟಣದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಧ್ವಜಾರೋಹಣ, ಜಿಲ್ಲೆಯ ನಾನಾ ಕಡೆಗಳಲ್ಲಿ ಹೇಗಿತ್ತು ಸಂಭ್ರಮ

|

Updated on: Aug 15, 2024 | 11:12 AM

ದೇಶಾದ್ಯಂತ 78ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ-ಸಡಗರ ಗರಿಗೆದರಿದೆ. ಸ್ವಾತಂತ್ರ್ಯೋತ್ಸವದ ಹಬ್ಬವನ್ನ ಅದ್ಧೂರಿಯಾಗಿ ಆಚರಣೆ ಮಾಡಲಾಗ್ತಿದೆ. ಚನ್ನಪಟ್ಟಣದ ಮೇಲೆ ಕಣ್ಣಿಟ್ಟಿರುವ ಡಿಕೆ ಶಿವಕುಮಾರ್ ಅವರು ಇದೇ ಮೊದಲ ಬಾರಿಗೆ ಚನ್ನಪಟ್ಟಣದ ಸರ್ಕಾರಿ ಬಾಲಕರ ಪದವಿ ಕಾಲೇಜು ಆವರಣದಲ್ಲಿ ಧ್ವಜಾರೋಹಣ ಮಾಡಿದ್ದಾರೆ.

1 / 7
ಡಿಸಿಎಂ ಡಿ.ಕೆ.ಶಿವಕುಮಾರ್ ಚನ್ನಪಟ್ಟಣದಲ್ಲಿ ಧ್ವಜಾರೋಹಣ ನೆರವೇರಿಸಿದ್ದಾರೆ. ಅಲ್ಲಿನ ಸರ್ಕಾರಿ ಬಾಲಕರ ಪದವಿ ಕಾಲೇಜು ಆವರಣದಲ್ಲಿ ಇದೇ ಮೊದಲ ಬಾರಿಗೆ ಧ್ವಜಾರೋಹಣ ಮಾಡಿದ್ದಾರೆ.

2 / 7
ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನ ಸಂಭ್ರಮದಿಂದ ಆಚರಿಸಲಾಯ್ತು. ಹುಬ್ಬಳ್ಳಿ-ಧಾರವಾಡ ಪಾಲಿಕೆ ವತಿಯಿಂದ ರಾಷ್ಟ್ರ ಧ್ವಜಾರೋಹಣ ಮಾಡಲಾಯ್ತು. ಪಾಲಿಕೆ ಆಯುಕ್ತ ಈಶ್ವರ್ ಉಳ್ಳಾಗಡ್ಡಿ ಅವ್ರು ಧ್ವಜಾರೋಹಣ ಮಾಡಿದ್ರು.

3 / 7
ಅಮೆರಿಕ ಚಿಕಾಗೋದ ಇಂಡಿಯನ್ ಕಮ್ಯುನಿಟಿ ಔಟ್ರೀಚ್ ಆರ್ಗನೈಸೇಷನ್ ವತಿಯಿಂದ 78ನೇ ಸ್ವಾತಂತ್ರ್ಯ  ದಿನಾಚರಣೆ ಆಚರಿಸಲಾಯ್ತು. ಇದ್ರ ಅಂಗವಾಗಿ ಇಂಡಿಯಾ ಡೇ ಪರೇಡ್ ಆಯೋಜಿಸಲಾಗಿತ್ತು. ಕನ್ನಡಿಗರು ಒಟ್ಟಾಗಿ ಕನ್ನಡ ಸಂಗೀತಕ್ಕೆ ನೃತ್ಯ ಮಾಡುತ್ತಾ ಸಂಭ್ರಮಿಸಿದ್ರು.

4 / 7
ಕೋಲಾರದ ಕ್ಲಾಕ್ ಟವರ್ ನಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಕೋಲಾರ ಡಿಸಿ ಅಕ್ರಂ ಪಾಷಾ ಹಾಗೂ ಎಸ್ಪಿ ನಿಖಿಲ್ .ಬಿ. ಧ್ವಜಾರೋಹಣ ಮಾಡಿದರು ಬಳಿ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಧ್ವಜಾರೋಹಣ ಮಾಡಿ ರಾಷ್ಟಗೀತೆ ಹಾಡಿ ಶುಭಾಶಯ ಕೋರಿದರು.

5 / 7
ಧಾರವಾಡದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ‌ರಿಂದ ಧ್ವಜಾರೋಹಣ ನೆರವೇರಿತು. ನಗರದ ಆರ್‌.ಎನ್‌. ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿ ಪರೇಡ್ ವೀಕ್ಷಿಸಿದರು. ಜಿಲ್ಲಾಧಿಕಾರಿ ದಿವ್ಯಪ್ರಭು, ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಎಸ್ಪಿ ಗೋಪಾಲ ಬ್ಯಾಕೋಡ್, ಜಿಪಂ ಸಿಇಒ ಸ್ವರೂಪ ಇತರರು ಭಾಗಿಯಾಗಿದ್ದಾರೆ.

6 / 7
ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಧ್ವಜಾರೋಹಣ ನೆರವೇರಿಸಿದರು. ಸಚಿವ ಕೆ.ವೆಂಕಟೇಶ್ ಗೆ ಸಂಸದ ಸುನೀಲ್ ಬೋಸ್, ಶಾಸಕ ಪುಟ್ಟರಂಗಶೆಟ್ಟಿ ಸಾಥ್ ನೀಡಿದ್ರು. ಚಾಮರಾಜನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.

7 / 7
ಚಿಕ್ಕಬಳ್ಳಾಪುರ ನಗರದ ಸರ್ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಉನ್ನತ ಶಿಕ್ಷಣ ಖಾತೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ರಿಂದ 78 ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿತು. ಸಚಿವರಿಗೆ ಪೊಲೀಸ್, ಗೃಹ ರಕ್ಷಕದಳ, ಅರಣ್ಯ ಇಲಾಖೆ ಸೇರಿದಂತೆ ವಿದ್ಯಾರ್ಥಿಗಳಿಂದ ಗೌರವ ವಂದನೆ ಸಲ್ಲಿಸಿದರು.