
ಪಶ್ಚಿಮ ಬಂಗಾಳ ಹಾಗೂ ಬಾಂಗ್ಲಾದೇಶದ ಔಗು ಪ್ರದೇಶಗಳು ನಿಗೂಢ ಹಾಗೂ ಭಯಾನಕತೆಯಿಂದ ಕೂಡಿದ ಸ್ಥಳವಾಗಿದೆ. ಇಲ್ಲಿ ರಾತ್ರಿಯ ವೇಳೆ ಹೊಳೆಯುವ ದೀಪಗಳು ಕಾಣಿಸಿಕೊಳ್ಳುತ್ತವೆಯಂತೆ. ಇದನ್ನು ಅಲೈಯಾ ಲೈಟ್ಸ್" ಎಂದು ಕರೆಯುತ್ತಾರೆ.

ಕತ್ತಲಾಗುತ್ತಿದ್ದಂತೆ ಕಾಣಿಸಿಕೊಳ್ಳುವ ಈ ದೀಪಗಳು ಕಪ್ಪು, ನೀಲಿ, ಕೆಂಪು ಮತ್ತು ಹಳದಿ ಬಣ್ಣಕ್ಕೆ ಬದಲಾಗುತ್ತಿರುತ್ತದೆ. ದೂರದಿಂದ ನೋಡುವುದಕ್ಕೆ ಸೇಬಿನ ಹಣ್ಣಿನ ಆಕಾರದಲ್ಲಿದ್ದು ಚಲಿಸುವಂತೆ ತೋರುತ್ತವೆ.

ಇದು ದೆವ್ವದ ದೀಪಗಳಂತೆ. ಇದನ್ನು ಹಿಂಬಾಲಿಸಿಕೊಂಡು ಹೊರಟರೆ ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ. ಈಗಾಗಲೇ ಈ ದೀಪಗಳ ಹಿಂದೆ ಹೊರಟ ಅನೇಕರು ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ ಎನ್ನಲಾಗಿದೆ.

ಸ್ಥಳೀಯರು ಹೇಳುವಂತೆ ರಾತ್ರಿಯ ವೇಳೆ ಪ್ರಕಾಶಮಾನವಾಗಿ ಕಾಣಿಸುವ ಈ ದೀಪಗಳು ಪ್ರೇತಾತ್ಮಗಳು ಎನ್ನಲಾಗಿದೆ. ಸತ್ತ ಮೀನುಗಾರರು ಹಾಗೂ ಈ ದೀಪಗಳ ಬಗ್ಗೆ ತಿಳಿಯಲು ಹೊರಟವರು ಸಾವನ್ನಪ್ಪಿದ್ದು, ದೀಪಗಳ ರೂಪದಲ್ಲಿ ಸಂಚರಿಸುತ್ತಿದ್ದಾರಂತೆ

ಕತ್ತಲ ರಾತ್ರಿಯಲ್ಲಿ ಆಕರ್ಷಕವಾಗಿ ಕಾಣಿಸುವ ಈ ದೀಪಗಳು ಕೆಲವೊಮ್ಮೆ ವೇಗವಾಗಿ, ಮಗದೊಮ್ಮೆ ನಿಧಾನವಾಗಿ ಚಲಿಸುತ್ತದೆ. ಏನಿರಬಹುದು ಎಂದು ಇದನ್ನು ಹಿಂಬಾಲಿಸಿಕೊಂಡು ಹೊರಟವರ ದಾರಿಯನ್ನು ಈ ಆತ್ಮಗಳು ತಪ್ಪಿಸುತ್ತವೆಯಂತೆ ಎನ್ನಲಾಗಿದೆ