
ಆದರೆ ಮಳೆಯಿಂದ ನಿರಂತರ ಮಳೆಯಿಂದಾಗಿ ಕಾರ್ಯಕ್ರಮವನ್ನು ಒಳಾಂಗಣಕ್ಕೆ ಸ್ಥಳಾಂತರಿಸಲಾಯಿತು. ಯೋಗದ ನಂತರ ಸ್ಥಳೀಯ ಮಹಿಳೆಯರೊಂದಿಗೆ ಮೋದಿ ಮಾತುಕತೆ ನಡೆಸಿದ್ದಾರೆ. ಹಾಗೂ ಅವರ ಜತೆ ಸೆಲ್ಫಿ ಕೂಡ ಕ್ಲಿಕ್ಕಿಸಿದ್ದಾರೆ.

ಆದರೆ ಮಳೆಯಿಂದ ನಿರಂತರ ಮಳೆಯಿಂದಾಗಿ ಕಾರ್ಯಕ್ರಮವನ್ನು ಒಳಾಂಗಣಕ್ಕೆ ಸ್ಥಳಾಂತರಿಸಲಾಯಿತು. ಯೋಗದ ನಂತರ ಸ್ಥಳೀಯ ಮಹಿಳೆಯರೊಂದಿಗೆ ಮೋದಿ ಮಾತುಕತೆ ನಡೆಸಿದ್ದಾರೆ. ಹಾಗೂ ಅವರ ಜತೆ ಸೆಲ್ಫಿ ಕೂಡ ಕ್ಲಿಕ್ಕಿಸಿದ್ದಾರೆ.

ಯೋಗ ಪ್ರದರ್ಶನ ನಂತರ ಮೋದಿ ಅವರು ಸಭೆಯನ್ನುದ್ದೇಶಿ ಮಾತನಾಡಿದ್ದಾರೆ. ಯೋಗವು ಜ್ಞಾನ ಮಾತ್ರವಲ್ಲ ವಿಜ್ಞಾನವು ಕೂಡ ಆಗಿದೆ, ಇಂದು ಮಾಹಿತಿ ಸಂಪನ್ಮೂಲಗಳ ಪ್ರವಾಹವೇ ಇದೆ ಅಂತಹ ಪರಿಸ್ಥಿತಿಯಲ್ಲಿ ಒಂದು ವಿಷಯದ ಮೇಲೆ ಕೇಂದ್ರೀಕರಿಸುವುದು ಕಷ್ಟವಾಗುತ್ತಿದೆ, ಇದರ ಪರಿಹಾರವು ಯೋಗದಲ್ಲಿದೆ ಎಂದು ಹೇಳಿದರು.

ಕಳೆದ ವರ್ಷ 130ಕ್ಕೂ ಹೆಚ್ಚು ದೇಶಗಳು ಭಾಗವಹಿಸಿದ್ದ ಅಮೆರಿಕದ ಪ್ರಧಾನ ಕಚೇರಿಯಲ್ಲಿ ಯೋಗ ದಿನಾಚರಣೆ ಮುನ್ನಡೆಸಲು ನನಗೆ ಅವಕಾಶ ಸಿಕ್ಕಿತು. ಯೋಗಾಸನದಿಂದ ಮಾನಸಿಕ, ದೈಹಿಕ ಆರೋಗ್ಯ ವೃದ್ಧಿಯಾಗುತ್ತದೆ, ಯೋಗ ಇಂದು ಜಾಗತಿಕ ಮಟ್ಟದಲ್ಲಿ ಮನ್ನಣೆ ಗಳಿಸಿದೆ. ಯೋಗಾಭ್ಯಾಸದಿಂದ ಅನೇಕ ರೋಗಗಳಿಗೆ ಮುಕ್ತಿ ಸಿಗಲಿದೆ, ರೋಗಗಳು ಗುಣಮುಖವಾಗುವ ಬಗ್ಗೆ ವೈಜ್ಞಾನಿಕವಾಗಿ ದೃಢಪಟ್ಟಿದೆ ಎಂದು ಹೇಳಿದರು.

ಆರೋಗ್ಯ ರಕ್ಷಣೆ, ಸಮಾಜ ಸ್ವಾಸ್ಥ್ಯ ಕಾಪಾಡಲು ಯೋಗ ಅತ್ಯಗತ್ಯ,ಯೋಗ ದಿನನಿತ್ಯದ ಜೀವನಕ್ಕೆ ಸಹಾಯಕವಾಗಲಿದೆ ಎಂದರು. ಪ್ರಪಂಚದ ಎಲ್ಲಾ ಹಿರಿಯ ನಾಯಕರು ಅವಕಾಶ ಸಿಕ್ಕಾಗಲೆಲ್ಲಾ ನನ್ನೊಂದಿಗೆ ಯೋಗದ ಬಗ್ಗೆ ಚರ್ಚಿಸುತ್ತಾರೆ. ಇದು ಪ್ರಪಂಚದ ಜನರ ದೈನಂದಿನ ಜೀವನದ ಭಾಗವಾಗುತ್ತಿದೆ.

ಭಾರತದಲ್ಲಿ ಋಷಿಕೇಶ, ಕಾಶಿಯಿಂದ ಕೇರಳದವರೆಗೆ ಯೋಗ ಪ್ರವಾಸೋದ್ಯಮದ ಕ್ರೇಜ್ ಇದೆ. ಭಾರತದಲ್ಲಿ ಅಧಿಕೃತ ಯೋಗ ತರಬೇತಿ ಲಭ್ಯವಿದೆ. ಜನರು ತಮ್ಮ ಫಿಟ್‌ನೆಸ್‌ಗಾಗಿ ವೈಯಕ್ತಿಕ ಯೋಗ ತರಬೇತುದಾರರನ್ನು ನೇಮಿಸಿಕೊಳ್ಳುತ್ತಿದ್ದಾರೆ.

ಬೆಳಗ್ಗೆ 6.30ಕ್ಕೆ ಯೋಗ ಕಾರ್ಯಕ್ರಮ ಆರಂಭವಾಗಬೇಕಿತ್ತು, ಆದರೆ ಮಳೆಯಿಂದಾಗಿ ಕಾರ್ಯಕ್ರಮವು ತಡವಾಗಿ ಆರಂಭವಾಯಿತು. ಪ್ರಧಾನಿ 7 ಸಾವಿರ ಜನರ ಜತೆ ಯೋಗ ಮಾಡಬೇಕಿತ್ತು ಆದರೆ ಮಳೆಯಿಂದಾಗಿ ಕೇವಲ 50 ಜನರಿದ್ದ ಸಭಾಂಗಣದಲ್ಲಿ ಯೋಗ ಮಾಡುವಂತಾಯಿತು.