ಐಪಿಎಲ್ 2021 ರ ಎರಡನೇ ಭಾಗವನ್ನು ಪುನರಾರಂಭಿಸಲು ಒಂದು ತಿಂಗಳಿಗಿಂತ ಕಡಿಮೆ ಸಮಯ ಉಳಿದಿದೆ. ಇದಕ್ಕಾಗಿ ಕೆಲವು ತಂಡಗಳು ಯುಎಇ ತಲುಪಿದ್ದರೆ, ಕೆಲವು ತಂಡಗಳು ಶೀಘ್ರವೇ ತಲುಪಲಿವೆ. ಈ ಎಲ್ಲದರ ನಡುವೆ ಕೆಲವು ಹೊಸ ಆಟಗಾರರು ಕೂಡ ತಂಡಗಳನ್ನು ಪ್ರವೇಶಿಸಿದ್ದಾರೆ. ಐಪಿಎಲ್ 2021 ರ ಎರಡನೇ ಭಾಗಕ್ಕೆ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ನ ಅನೇಕ ಆಟಗಾರರು ಲಭ್ಯವಿರುವುದಿಲ್ಲ. ಈ ಕಾರಣದಿಂದಾಗಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು, ರಾಜಸ್ಥಾನ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ ಹೊಸ ಆಟಗಾರರನ್ನು ಬದಲಾವಣೆಯಾಗಿ ಸೇರಿಸಬೇಕಾಯಿತು.