IPL 2024: 10 ಸಿಕ್ಸ್, 10 ಎಸೆತಗಳಲ್ಲಿ 50 ರನ್! ಜ್ಯಾಕ್ಸ್‌ ಸುನಾಮಿಗೆ ದಾಖಲೆಗಳೆಲ್ಲ ಉಡೀಸ್

Updated on: Apr 28, 2024 | 8:32 PM

IPL 2024: ಗುಜರಾತ್ ನೀಡಿದ 201 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಆರ್​ಸಿಬಿ ಪರ ಆರಂಭಿಕ ವಿರಾಟ್ ಕೊಹ್ಲಿ ಅಜೇಯ 70 ರನ್ ಬಾರಿಸಿದರೆ, ಸ್ಫೋಟಕ ಬ್ಯಾಟಿಂಗ್ ನಡೆಸಿದ ವಿಲ್ ಜ್ಯಾಕ್ಸ್ ಕೇವಲ 41 ಎಸೆತಗಳಲ್ಲಿ ಅಜೇಯ ಶತಕ ಬಾರಿಸಿದರು. ಇದರೊಂದಿಗೆ ಹಲವು ದಾಖಲೆಗಳನ್ನು ನಿರ್ಮಿಸಿದರು.

1 / 6
ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 9 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಲೀಗ್​ನಲ್ಲಿ 3ನೇ ಜಯ ಸಾಧಿಸಿದೆ.

ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 9 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಲೀಗ್​ನಲ್ಲಿ 3ನೇ ಜಯ ಸಾಧಿಸಿದೆ.

2 / 6

ಗೆಲುವಿಗೆ ಗುಜರಾತ್ ನೀಡಿದ 201 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಆರ್​ಸಿಬಿ ಪರ ಆರಂಭಿಕ ವಿರಾಟ್ ಕೊಹ್ಲಿ ಅಜೇಯ 70 ರನ್ ಬಾರಿಸಿದರೆ, ಸ್ಫೋಟಕ ಬ್ಯಾಟಿಂಗ್ ನಡೆಸಿದ ವಿಲ್ ಜ್ಯಾಕ್ಸ್ ಕೇವಲ 41 ಎಸೆತಗಳಲ್ಲಿ ಅಜೇಯ ಶತಕ ಬಾರಿಸಿದರು. ಇದರೊಂದಿಗೆ ಹಲವು ದಾಖಲೆಗಳನ್ನು ನಿರ್ಮಿಸಿದರು.

3 / 6

ತಮ್ಮ ಇನ್ನಿಂಗ್ಸ್​ನಲ್ಲಿ ಕೇವಲ 41 ಎಸೆತಗಳಲ್ಲಿ ಶತಕ ಪೂರೈಸಿದ ಜ್ಯಾಕ್ಸ್ ತಮ್ಮ ಇನ್ನಿಂಗ್ಸ್​ನಲ್ಲಿ ಬರೋಬ್ಬರಿ ಐದು ಬೌಂಡರಿ ಮತ್ತು 10 ಸಿಕ್ಸರ್‌ಗಳನ್ನು ಸಿಡಿಸಿದರು. ಇದರೊಂದಿಗೆ ಆರ್​ಸಿಬಿ ಪರ ಎರಡನೇ ವೇಗದ ಶತಕ ದಾಖಲಿಸಿದ ದಾಖಲೆ ಬರೆದರು.

4 / 6

ಜ್ಯಾಕ್ಸ್‌ಗೂ ಮೊದಲು 2013 ರಲ್ಲಿ ಪುಣೆ ವಾರಿಯರ್ಸ್ ಇಂಡಿಯಾ ವಿರುದ್ಧ ಕ್ರಿಸ್ ಗೇಲ್ ಕೇವಲ 30 ಎಸೆತಗಳಲ್ಲಿ ಶತಕ ಸಿಡಿಸಿ ಮಿಂಚಿದ್ದರು.

5 / 6

ಈ ಪಂದ್ಯದಲ್ಲಿ ಮೊದಲ 30 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಜ್ಯಾಕ್ಸ್, ಉಳಿದ 50 ರನ್​ಗಳನ್ನು ಕೇವಲ 10 ಎಸೆತಗಳಲ್ಲಿ ಪೂರೈಸಿದರು. ಇದರೊಂದಿಗೆ ಅರ್ಧಶತಕದಿಂದ ಶತಕ ಪೂರೈಸಲು ಅತಿ ಕಡಿಮೆ ಎಸೆತಗಳನ್ನು ತೆಗೆದುಕೊಂಡ ಮೊದಲ ಬ್ಯಾಟರ್ ಎಂಬ ದಾಖಲೆ ಜ್ಯಾಕ್ಸ್ ಪಾಲಾಗಿದೆ.

6 / 6

ಇದರೊಂದಿಗೆ ಈ ಪಂದ್ಯದಲ್ಲಿ ಬರೋಬ್ಬರಿ 10 ಸಿಕ್ಸರ್ ಸಿಡಿಸಿದ ಜ್ಯಾಕ್ಸ್, ಆರಂಭಿಕ ಆಟಗಾರನಾಗದೆ ಆರ್​ಸಿಬಿ ಪರ ಇನ್ನಿಂಗ್ಸ್​ವೊಂದರಲ್ಲಿ ಅಧಿಕ ಸಿಕ್ಸರ್ ಸಿಡಿಸಿದ ಮೊದಲ ಬ್ಯಾಟರ್ ಎನಿಸಿಕೊಂಡರು.

Published On - 8:31 pm, Sun, 28 April 24

ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us