‘ಮೆಟ್ ಗಾಲಾ 2023’ ಅದ್ದೂರಿಯಾಗಿ ನೆರವೇರಿದೆ. ಅಮೆರಿಕದ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್ನಲ್ಲಿ ಈ ಕಾರ್ಯಕ್ರಮ ನಡೆದಿದೆ. ಭಾರತದ ಸೆಲೆಬ್ರೆಟಿಗಳು ಕೂಡ ಭಾಗಿಯಾಗಿದ್ದರು.
ಭಾರತದ ನಟಿಯರಾದ ಆಲಿಯಾ ಭಟ್ ಹಾಗೂ ಪ್ರಿಯಾಂಕಾ ಚೋಪ್ರಾ ಕಾರ್ಯಕ್ರಮದಲ್ಲಿ ಮಿಂಚಿದ್ದಾರೆ. ಜೊತೆಗೆ ಭಾರತದ ಉದ್ಯಮಿ ಮುಖೇಶ್ ಅಂಬಾನಿಯ ಏಕೈಕ ಪುತ್ರಿಯೂ ಕೂಡ ಇಲ್ಲಿ ಭಾಗಿಯಾಗಿದ್ದಾರೆ.
ಕೋಟಿ ಕೋಟಿ ಬೆಲೆ ಬಾಳುವ ವಜ್ರ, ರತ್ನ ಹಾಗೂ ಮುತ್ತುಗಳಿಂದ ಕೂಡಿದ ಕಪ್ಪು ಬಣ್ಣಸ ಸೀರೆ ಕಮ್ ಗೌನ್ನಲ್ಲಿ ಇಶಾ ಅಂಬಾನಿ ಕಾಣಿಸಿಕೊಂಡಿದ್ದು,ಇದೀಗಾ ಈಕೆಯ ಬಟ್ಟೆಯ ಬಗ್ಗೆ ಎಲ್ಲೆಡೆ ಸುದ್ದಿ ಹರಿದಾಡುತ್ತಿದೆ.
ಈ ದುಬಾರಿ ಬಟ್ಟೆಯನ್ನು ನೇಪಾಳಿ ಮೂಲದ ಕಾಸ್ಟೂಮ್ ಡಿಸೈನರ್ ಪ್ರಬಲ್ ಗುರುಂಗ್ ವಿನ್ಯಾಸಗೊಳಿಸಿದ್ದಾರೆ. ಇಶಾ ಅಂಬಾನಿಯವರ ಮೆಟ್ ಗಾಲಾ ಸ್ಟೈಲಿಸ್ಟ್ ಯಾಂಕಾ ಕಪಾಡಿಯಾ ಪೋಟೋಗಳನ್ನು ಸ್ವತಃ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.
ಇಶಾ ಅಂಬಾನಿಯ ಉಡುಪಿನ ಜೊತೆಗೆ ಕೈಯಲ್ಲಿರುವ ಬ್ಯಾಗ್ ಬೆಲೆಯು ಎಲ್ಲೆಡೆ ಗಮನ ಸೆಳೆದಿದೆ. ಬ್ಯಾಗನ್ನು ಗೊಂಬೆಯ ಮುಖದಂತೆ ವಿನ್ಯಾಸಗೊಳಿಸಲಾಗಿದೆ. ಬ್ಯಾಗ್‌ನ ಬೆಲೆ ಆನ್‌ಲೈನ್‌ನಲ್ಲಿ 30,550 ಡಾಲರ್ ಅಂದರೆ ಸುಮಾರು 24,97,951 ರೂ.
ಖ್ಯಾತ ಉದ್ಯಮಿ ಮುಕೇಶ್ ಅಂಬಾನಿಯ ಕುಟುಂಬದ ಮಹಿಳೆಯರು ಪ್ರತೀ ಬಾರಿ ದುಬಾರಿ ಆಭರಣಗಳು ಹಾಗೂ ಬಟ್ಟೆಬರೆಗಳಿಂದಲೇ ಸುದ್ದಿಯಲ್ಲಿರುತ್ತಾರೆ.