
ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಮಗಳು ಆರಾಧ್ಯಾ ಜೊತೆ ಇಶಾ ಅಂಬಾನಿ ಮದುವೆಗೆ ಬಂದಿದ್ದರು. ಈ ವಿವಾಹ ಕಾರ್ಯ 2018ರ ಡಿಸೆಂಬರ್ ತಿಂಗಳಲ್ಲಿ ನಡೆದಿತ್ತು. ಈ ಸಂದರ್ಭದಲ್ಲಿ ಇವರು ಒಟ್ಟಾಗಿ ಇದ್ದರು.

2019ರ ಮಾರ್ಚ್ ತಿಂಗಳಲ್ಲಿ ಆಕಾಶ್ ಅಂಬಾನಿ ವಿವಾಹ ಏರ್ಪಟ್ಟಿತ್ತು. ಈ ಮದುವೆ ಕಾರ್ಯ ಅದ್ದೂರಿಯಾಗಿ ನೆರವೇರಿತ್ತು. ಈ ವಿವಾಹಕ್ಕೂ ಅಭಿಷೇಕ್-ಐಶ್ವರ್ಯಾ ಮಗಳ ಜೊತೆ ಬಂದಿದ್ದರು. ಈ ಫೋಟೋಗಳು ಗಮನ ಸೆಳೆದಿದ್ದವು.

ಆಕಾಶ್ ವಿವಾಹ ನಡೆದು ಐದು ವರ್ಷಗಳು ಕಳೆದಿವೆ. ಈಗ ಐಶ್ವರ್ಯಾ ಹಾಗೂ ಅಭಿಷೇಕ್ ಸಂಸಾರದಲ್ಲಿ ಸಂಪೂರ್ಣವಾಗಿ ಬದಲಾಗಿದೆ. ಅಭಿಷೇಕ್ ಹಾಗೂ ಐಶ್ವರ್ಯಾ ಪ್ರತ್ಯೇಕವಾಗಿ ಬಂದು ಪೋಸ್ ಕೊಟ್ಟಿದ್ದಾರೆ ಅನ್ನೋದು ಇಲ್ಲಿ ಗಮನಿಸಬೇಕಾದ ವಿಚಾರ.

ಐಶ್ವರ್ಯಾ ಅವರು ಮಗಳ ಆರಾಧ್ಯಾ ಜೊತೆ ಅನಂತ್ ಅಂಬಾನಿ ಮದುವೆಗೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಅಭಿಷಕ್ ಬಚ್ಚನ್ ಅವರು ಪತ್ನಿ ಜೊತೆ ಕಾಣಿಸಿಕೊಂಡಿರಲಿಲ್ಲ. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

ಐಶ್ವರ್ಯಾ ಅವರು ಭಾರತದ ಶ್ರೀಮಂತ ನಟಿಯರಲ್ಲಿ ಮೊದಲ ಸ್ಥಾನದಲ್ಲಿ ಇದ್ದಾರೆ. ಒಂದೊಮ್ಮೆ ಪತಿಯಿಂದ ಅವರು ವಿಚ್ಛೇದನ ಪಡೆದರೂ ಅಂತಹ ವ್ಯತ್ಯಾಸ ಏನೂ ಆಗುವುದಿಲ್ಲ.