ಸಂಪೂರ್ಣವಾಗಿ ಚಿನ್ನ, ವಜ್ರದಿಂದ ವಿನ್ಯಾಸಗೊಳಿಸಿದ ಬ್ಲೌಸ್ ತೊಟ್ಟು ಮಿಂಚಿದ ಅಂಬಾನಿಯ ಏಕೈಕ ಪುತ್ರಿ
ಮುಖೇಶ್ ಅಂಬಾನಿಯವರ ಏಕೈಕ ಪುತ್ರಿ ಇಶಾ ಅಂಬಾನಿ ವಿವಾಹ ಪೂರ್ವ ಸಮಾರಂಭದಲ್ಲಿ ರೆಡ್ ಮತ್ತು ಗೋಲ್ಡನ್ ಮಿಶ್ರಿತ ಗ್ರ್ಯಾಂಡ್ ಲೆಹಂಗಾ ತೊಟ್ಟು ಮಿಂಚಿದ್ದು ಈ ಗ್ರ್ಯಾಂಡ್ ಲೆಹಾಂಗದ ಬ್ಲೌಸ್ ಅನ್ನು ಸಂಪೂರ್ಣವಾಗಿ ಚಿನ್ನ, ವಜ್ರದಿಂದ ವಿನ್ಯಾಸಗೊಳಿಸಲಾಗಿದೆ.
1 / 6
ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ಸ್ ಅವರ ವಿವಾಹ ಪೂರ್ವ ಸಮಾರಂಭ ಇತ್ತೀಚೆಗಷ್ಟೇ ಅದ್ಧೂರಿಯಾಗಿ ನಡೆದಿದೆ.
2 / 6
ಈ ಅದ್ಧೂರಿ ಸಮಾರಂಭದಲ್ಲಿ ಅಂಬಾನಿ ಮನೆಯ ನಾರಿಮಣಿಗಳು ಧರಿಸಿದ ಬಟ್ಟೆಬರೆ ಹಾಗೂ ಆಭರಣಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಲ್ಲಿದೆ.
3 / 6
ಮುಖೇಶ್ ಅಂಬಾನಿಯವರ ಏಕೈಕ ಪುತ್ರಿ ಇಶಾ ಅಂಬಾನಿ ವಿವಾಹ ಪೂರ್ವ ಸಮಾರಂಭದಲ್ಲಿ ರೆಡ್ ಮತ್ತು ಗೋಲ್ಡನ್ ಮಿಶ್ರಿತ ಗ್ರ್ಯಾಂಡ್ ಲೆಹಂಗಾ ತೊಟ್ಟು ಮಿಂಚಿದ್ದು ಸೆಲೆಬ್ರೆಟಿಗಳು ಸೇರಿದಂತೆ ಎಲ್ಲರ ಗಮನ ಸೆಳೆದಿದೆ.
4 / 6
ಈ ಗ್ರ್ಯಾಂಡ್ ಲೆಹಾಂಗದ ಬ್ಲೌಸ್ ಅನ್ನು ಸಂಪೂರ್ಣವಾಗಿ ಚಿನ್ನ, ವಜ್ರದಿಂದ ವಿನ್ಯಾಸಗೊಳಿಸಲಾಗಿದೆ. ಸದ್ಯ ಈ ಬ್ಲೌಸ್ ವಿನ್ಯಾಸಗೊಳಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
5 / 6
ಈ ಅದ್ಧೂರಿ ಬ್ಲೌಸ್ ಅನ್ನು ಸೆಲೆಬ್ರೆಟಿ ಕಾಸ್ಟೂಮ್ ಡಿಸೈನರ್ ಅಬು ಜಾನಿ ಸಂದೀಪ್ ಖೋಸ್ಲಾ ಅವರ ತಂಡ ವಿನ್ಯಾಸಗೊಳಿಸಿದೆ. ಇಶಾ ಅಂಬಾನಿಯ ವೈಯಕ್ತಿಕ ಸಂಗ್ರಹದ ಚಿನ್ನ, ವಜ್ರ, ಮುತ್ತು, ರತ್ನ, ಪಚ್ಚೆ, ರತ್ನ ಸೇರಿಸಿ ಇಡೀ ಬ್ಲೌಸ್ ತಯಾರಿಸಲಾಗಿದೆ.
6 / 6
ಕೋಟಿ ಕೋಟಿ ಬೆಲೆ ಬಾಳುವ ಗ್ರ್ಯಾಂಡ್ ಲೆಹಾಂಗ ತೊಟ್ಟು ಮಿಂಚಿದ ಇಶಾ ಅಂಬಾನಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಸಾಕಷ್ಟು ನೆಟ್ಟಿಗರು ಧರೆಗಿಳಿದ ದೇವ ಕನ್ಯೆ ಎಂದು ಕಾಮೆಂಟ್ ಮಾಡಿದ್ದಾರೆ.