‘ದೇವರ’ ಸಿನಿಮಾ ಅಪ್ಡೇಟ್ ಕೊಟ್ಟ ನಟಿ ಜಾನ್ಹವಿ ಕಪೂರ್
Janhvi Kapoor: ನಟಿ ಜಾನ್ಹವಿ ಕಪೂರ್ ‘ದೇವರ’ ಸಿನಿಮಾದ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ. ‘ದೇವರ’ ಸಿನಿಮಾ ಸೆಟ್ಗೆ ಮತ್ತೆ ಮರಳು ಇಂಗಿತ ವ್ಯಕ್ತಪಡಿಸಿದ್ದಾರೆ. ‘ದೇವರ 2’ ಸಿನಿಮಾದ ಚಿತ್ರೀಕರಣಕ್ಕೆ.
1 / 7
‘ದೇವರ’ ಸಿನಿಮಾ ಮೂಲಕ ಬಾಲಿವುಡ್ ನಟಿ ಜಾನ್ಹವಿ ಕಪೂರ್ ದಕ್ಷಿಣ ಭಾರತ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ. ಮೊದಲ ಸಿನಿಮಾದಲ್ಲಿಯೇ ಜೂ ಎನ್ಟಿಆರ್ ಎದುರು ನಾಯಕಿಯಾಗಿದ್ದಾರೆ ಜಾನ್ಹವಿ.
2 / 7
‘ದೇವರ’ ಸಿನಿಮಾದಲ್ಲಿ ಜಾನ್ಹವಿಗೆ ಎರಡು ಶೇಡ್ನ ಪಾತ್ರವಿದೆಯಂತೆ. ಮೊದಲ ಭಾಗದಲ್ಲಿ ತಂಗಂ ಹೆಸರಿನ ಕಡಲ ತಡಿಯ ಯುವತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಂಗಂ ಪಾತ್ರದ ಚಿತ್ರಗಳನ್ನು ಜಾನ್ಹವಿ ಹಂಚಿಕೊಂಡಿದ್ದರು.
3 / 7
ಇದೀಗ ನಟಿ ಜಾನ್ಹವಿ ಕಪೂರ್ ‘ದೇವರ’ ಸಿನಿಮಾದ ಶೂಟಿಂಗ್ ಮುಗಿಸಿದ್ದಾರೆ. ಜಾನ್ಹವಿ ಪಾತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
4 / 7
‘ತಂಗಂ’ ಪಾತ್ರವನ್ನು ನಿರ್ವಹಿಸಿರುವುದನ್ನು ಸಖತ್ ಎಂಜಾಯ್ ಮಾಡಿದ್ದಾರಂತೆ ಜಾನ್ಹವಿ. ಇದೀಗ ಮತ್ತೆ ತಂಗಂ ಆಗುವ ಆಸೆಯನ್ನು ವ್ಯಕ್ತಪಡಿಸಿರುವ ಜಾನ್ಹವಿ. ಮತ್ತೆ ಸೆಟ್ಗೆ ಬರುವುದನ್ನು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ.
5 / 7
‘ದೇವರ’ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆ ಆಗುತ್ತಿದ್ದು, ಪ್ರಸ್ತುತ ಮೊದಲ ಭಾಗದ ಚಿತ್ರೀಕರಣವಷ್ಟೆ ಪೂರ್ಣಗೊಂಡಿದೆ. ಈ ಸಿನಿಮಾದ ಎರಡನೇ ಭಾಗದ ಚಿತ್ರೀಕರಣದಲ್ಲಿಯೂ ಜಾನ್ಹವಿ ತಂಗಂ ಪಾತ್ರದಲ್ಲಿಯೇ ನಟಿಸಲಿದ್ದಾರೆ.
6 / 7
ಜಾನ್ಹವಿ ಕಪೂರ್, ‘ದೇವರ’ ಸಿನಿಮಾದ ಬಳಿಕ ರಾಮ್ ಚರಣ್ ಜೊತೆಗೆ ನಾಯಕಿಯಾಗಿ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ. ಇನ್ನೂ ಹೆಸರಿಡದ ಆ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಸಹ ನಟಿಸಲಿದ್ದಾರೆ. ಬುಚ್ಚಿಬಾಬು ಸನಾ ನಿರ್ದೇಶಿಸಲಿದ್ದಾರೆ.
7 / 7
ಜಾನ್ಹವಿ ಕಪೂರ್ ಬಾಲಿವುಡ್ನಲ್ಲಿಯೂ ಸಖತ್ ಬ್ಯುಸಿಯಾಗಿದ್ದಾರೆ. ವರುಣ್ ಧವನ್ ಜೊತೆಗೆ ಕಾಮಿಡಿ ಸಿನಿಮಾ ಒಂದನ್ನು ಜಾನ್ಹವಿ ಕಪೂರ್ ಒಪ್ಪಿಕೊಂಡಿದ್ದಾರೆ. ಅದರ ಚಿತ್ರೀಕರಣ ಶೀಘ್ರವೇ ಆರಂಭವಾಗಲಿದೆ.