
‘ದೇವರ’ ಸಿನಿಮಾದಲ್ಲಿ ಜಾನ್ವಿ ಕಪೂರ್ ನಟಿಸಿದ್ದಾರೆ ಎಂದು ಅನೇಕರು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಈ ನಿರೀಕ್ಷೆ ಸುಳ್ಳಾಗುವ ಸೂಚನೆ ಸಿಕ್ಕಿದೆ. ಸಿನಿಮಾಗೆ ಎಲ್ಲೆಡೆ ಮಿಶ್ರಪ್ರತಿಕ್ರಿಯೆ ಸಿಕ್ಕಿದೆ. ಅದೇ ರೀತಿ ಜಾನ್ವಿ ಪಾತ್ರದ ಬಗ್ಗೆ ಫ್ಯಾನ್ಸ್ ಬೇಸರ ಹೊರಹಾಕಿದ್ದಾರೆ.

‘ದೇವರ’ ಸಿನಿಮಾದ ಸಾಂಗ್ಗಳು ಗಮನ ಸೆಳೆದಿದ್ದವು. ಜೂನಿಯರ್ ಎನ್ಟಿಆರ್ ಹಾಗೂ ಜಾನ್ವಿ ಕೆಮಿಸ್ಟ್ರಿ ಕೆಲಸ ಮಾಡಿತ್ತು. ಆದರೆ, ಸಿನಿಮಾ ನೋಡಿದವರಿಗೆ ಶಾಕ್ ಆಗಿದೆ. ಇದಕ್ಕೆ ಕಾರಣವೂ ಇದೆ.

ಜಾನ್ವಿ ಕಪೂರ್ ಅವರು ‘ದೇವರ’ ಸಿನಿಮಾದ ಮೊದಲಾರ್ಧದಲ್ಲಿ ಬರೋದೇ ಇಲ್ಲ. ದ್ವಿತೀಯಾರ್ಧದದಲ್ಲಿ ಅವರು ಕಾಣಿಸೋದು ಒಂದು ಸಾಂಗ್ ಹಾಗೂ ಎರಡು ದೃಶ್ಯಗಳಲ್ಲಿ ಮಾತ್ರ ಅನ್ನೋದು ಬೇಸರದ ವಿಚಾರ. ಇದು ಅವರ ಫ್ಯಾನ್ಸ್ಗೆ ನಿರಾಸೆ ಮೂಡಿಸಿದೆ.

‘ನಂಗೆ ವರನ (ಜೂನಿಯರ್ ಎನ್ಟಿಆರ್) ನೋಡಿದರೆ ಉಕ್ಕೋದೇ ಇಲ್ಲ’, ‘ಹುಡುಗರನ್ನು ನೋಡಿದ ತಕ್ಷಣ ಉಕ್ಕಬೇಕು’ ಎಂಬ ಡೈಲಾಗ್ಗೆ ಜಾನ್ವಿ ಸೀಮಿತ ಆಗಿದ್ದಾರೆ. ಹೇಗೆ ಲೆಕ್ಕ ಹಾಕಿದರೂ ಅವರಿಗೆ ಮೂರಕ್ಕಿಂತ ಹೆಚ್ಚಿನ ದೃಶ್ಯ ಇಲ್ಲ.

‘ದೇವರ’ ಸಿನಿಮಾ ಜಾನ್ವಿ ಕಪೂರ್ ನಟನೆಯ ಮೊದಲ ತೆಲುಗು ಸಿನಿಮಾ. ಈ ಕಾರಣಕ್ಕೆ ಫ್ಯಾನ್ಸ್ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ನಿರ್ದೇಶಕರಿಂದ ಅವರ ಫ್ಯಾನ್ಸ್ ಬೇಸರಗೊಳ್ಳುವಂತೆ ಆಗಿದೆ.