Updated on: Jul 06, 2023 | 11:26 PM
ನಟಿ ಜಾನ್ಹವಿ ಕಪೂರ್ ತಮ್ಮ ಬ್ಲಾಕ್ ಆಂಡ್ ವೈಟ್ ಚಿತ್ರಗಳನ್ನು ಅಪ್ಲೋಡ್ ಮಾಡಿದ್ದಾರೆ.
ಸದಾ ಬಣ್ಣ ಬಣ್ಣದ, ಸ್ಟೈಲಿಷ್ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದ ಜಾನ್ಹವಿ ಅಚಾನಕ್ ಬ್ಲಾಕ್-ವೈಟ್ ಚಿತ್ರಗಳನ್ನೇಕೆ ಹಂಚಿಕೊಂಡಿದ್ದಾರೆ.
ಜಾನ್ಹವಿ ಉಲಜ್ ಹೆಸರಿನ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗದ್ದಾರೆ ಆ ಸಿನಿಮಾದ ಶೂಟಿಂಗ್ ವೇಳೆಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಉಲಜ್ ಸಿನಿಮಾಕ್ಕೂ ಈ ಬ್ಲಾಕ್ ಆಂಡ್ ವೈಟ್ ಚಿತ್ರಗಳಿಗೂ ಸಂಬಂಧವಿದೆ. ಉಲಜ್ ಭಿನ್ನ ಮಾದರಿಯ ಸಿನಿಮಾ ಎನ್ನಲಾಗುತ್ತಿದೆ.
ಉಲಜ್ ಸಿನಿಮಾದ 20 ದಿನದ ಶೂಟಿಂಗ್ ಮುಗಿಸಿರುವ ಜಾನ್ಹವಿ ಇನ್ನೂ 20 ದಿನ ಅದೇ ಸಿನಿಮಾಕ್ಕಾಗಿ ಶೂಟಿಂಗ್ ಮಾಡಲಿದ್ದಾರೆ.
ಶ್ರೀದೇವಿಯ ಪುತ್ರಿ ಜಾನ್ಹವಿ ಬಾಲಿವುಡ್ನ ಬೇಡಿಕೆಯ ಯುವನಟಿ, ಇದೀಗ ದಕ್ಷಿಣ ಭಾರತ ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ.
ಜೂ ಎನ್ಟಿಆರ್ ನಟಿಸುತ್ತಿರುವ ದೇವರ ಸಿನಿಮಾದಲ್ಲಿ ಜಾನ್ಹವಿ ಕಪೂರ್ ನಾಯಕಿ.