ನಟಿ ಜಾನ್ವಿ ಕಪೂರ್ ಅವರಿಗೆ ಸಿನಿಮಾರಂಗದಲ್ಲಿ ಆಫರ್ಗೆ ಏನೂ ಕೊರತೆ ಇಲ್ಲ. ತಂದೆ ಬೋನಿ ಕಪೂರ್ ದೊಡ್ಡ ನಿರ್ಮಾಪಕ. ಹೀಗಾಗಿ, ಅವರಿಗೆ ಸಿಕ್ಕಾಪಟ್ಟೆ ಅವಕಾಶಗಳು ಬರುತ್ತವೆ.
ಆಫರ್ಗಳಿಗೆ ಕೊರತೆ ಇಲ್ಲದೆ ಇದ್ದರೂ ಜಾನ್ವಿ ಕಪೂರ್ ಆಗಾಗ ಫೋಟೋಶೂಟ್ ಮಾಡಿಸುತ್ತಾರೆ. ವಿವಿಧ ರೀತಿಯ ಫೋಟೋಗಳನ್ನು ಹಂಚಿಕೊಂಡು ಅವರು ಸಂಭ್ರಮಿಸುತ್ತಾರೆ.
ಈಗ ಜಾನ್ವಿ ಜಪೂರ್ ಅವರು ಹೊಸ ಫೋಟೋ ಹಂಚಿಕೊಂಡಿದ್ದಾರೆ. ಇದಕ್ಕೆ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್ ಮಾಡಿದ್ದಾರೆ.
ಲೈಮ್ ಗ್ರೀನ್ ಬಣ್ಣದ ಉಡುಗೆ ತೊಟ್ಟು ಜಾನ್ವಿ ಕಪೂರ್ ಗಮನ ಸೆಳೆದಿದ್ದಾರೆ. ಈ ಫೋಟೋಗೆ ಭರ್ಜರಿ ಲೈಕ್ಸ್ ಸಿಕ್ಕಿದೆ.
ಜೂನಿಯರ್ ಎನ್ಟಿಆರ್ 30ನೇ ಚಿತ್ರಕ್ಕೆ ಜಾನ್ವಿ ಕಪೂರ್ ನಾಯಕಿ. ಈ ಸಿನಿಮಾ ಮೂಲಕ ವೃತ್ತಿ ಬದುಕಿನ ಮೈಲೇಜ್ ಹೆಚ್ಚಿಸಿಕೊಳ್ಳುವ ನಿರೀಕ್ಷೆಯಲ್ಲಿ ಅವರಿದ್ದಾರೆ.