ಬೀಚ್ ತೀರದಲ್ಲಿ ‘ಕಬೀರ್ ಸಿಂಗ್’ ಸುಂದರಿ; ಹೇಗಿದೆ ನೋಡಿ ಫೋಟೋಸ್
ನಿಕಿತಾ ಅವರು ಈಗ ಬ್ರೇಕ್ನಲ್ಲಿದ್ದಾರೆ. ಅವರು ಬೀಚ್ ಪಕ್ಕದ ಸ್ವಿಮ್ಮಿಂಗ್ ಪೂಲ್ನಲ್ಲಿ ನಿಂತಿರುವ ಫೋಟೋಗಳನ್ನು ಸೋಶಿಯಲ್ ಮೀಡಿಯಾ ಮೂಲಕ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಗಳು ವೈರಲ್ ಆಗಿದೆ.
1 / 7
2019ರಲ್ಲಿ ರಿಲೀಸ್ ಆದ ‘ಕಬೀರ್ ಸಿಂಗ್’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದಿಂದ ಅನೇಕರಿಗೆ ದೊಡ್ಡ ಮಟ್ಟದ ಫೇಮ್ ಸಿಕ್ಕಿತು. ಈ ಚಿತ್ರದಲ್ಲಿ ನಿಕಿತಾ ದತ್ತ ಕೂಡ ನಟಿಸಿದ್ದರು. ಅವರಿಗೂ ಸಾಕಷ್ಟು ಫೇಮ್ ಸಿಕ್ಕಿದೆ.
2 / 7
ನಿಕಿತಾ ಅವರು ಈಗ ಬ್ರೇಕ್ನಲ್ಲಿದ್ದಾರೆ. ಅವರು ಬೀಚ್ ಪಕ್ಕದ ಸ್ವಿಮ್ಮಿಂಗ್ ಪೂಲ್ನಲ್ಲಿ ನಿಂತಿರುವ ಫೋಟೋಗಳನ್ನು ಸೋಶಿಯಲ್ ಮೀಡಿಯಾ ಮೂಲಕ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಗಳು ವೈರಲ್ ಆಗಿದೆ.
3 / 7
ನಿಕಿತಾ ಅವರು ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳಿಗೆ ಫ್ಯಾನ್ಸ್ ಕಡೆಯಿಂದ ಭರ್ಜರಿ ಲೈಕ್ಸ್ ಸಿಗುತ್ತಿದೆ. ಫ್ಯಾನ್ಸ್ ನಿಕಿತಾ ಬೋಲ್ಡ್ನೆಸ್ ಕೊಂಡಾಡುತ್ತಿದ್ದಾರೆ.
4 / 7
ನಿಕಿತಾ ಅವರು ಹಲವು ವರ್ಷಗಳಿಂದ ಬಾಲಿವುಡ್ನಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರಿಗೆ ದೊಡ್ಡ ಆಫರ್ ಬಂದಿಲ್ಲ. ಆದರೆ, ಸಿಕ್ಕ ಆಫರ್ಗಳಲ್ಲಿ ತಮ್ಮ ತನವನ್ನು ಅವರು ತೋರಿಸುತ್ತಿದ್ದಾರೆ. ಮಾಡಿದ ಪಾತ್ರಕ್ಕೆ ನ್ಯಾಯ ಒದಗಿಸುತ್ತಿದ್ದಾರೆ.
5 / 7
2014ರಲ್ಲಿ ರಿಲೀಸ್ ಆದ ‘ಲೇಕರ್ ಹಮ್ ದೀವಾನಾ ದಿಲ್’ ಸಿನಿಮಾ ಮೂಲಕ ನಿಕಿತಾ ಬಣ್ಣದ ಲೋಕಕ್ಕೆ ಕಾಲಿಟ್ಟರು. ಆ ಬಳಿಕ ಅವರು ಅಳೆದು ತೂಗಿ ಪಾತ್ರ ಒಪ್ಪಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ.
6 / 7
2015ರಲ್ಲಿ ನಿಕಿತಾ ಅವರು ಕಿರುತೆರೆಗೆ ಕಾಲಿಟ್ಟರು. ಸಾಲು ಸಾಲು ಸಿನಿಮಾಗಳನ್ನು ಒಪ್ಪಿ ಅವರು ನಟಿಸಿದ್ದಾರೆ. ಸದ್ಯ ಮರಾಠಿ ಚಿತ್ರರಂಗಕ್ಕೆ ಕಾಲಿಡೋಕೆ ನಿಕಿತಾ ರೆಡಿ ಆಗಿದ್ದಾರೆ.
7 / 7
ನಿಕಿತಾ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ತಮ್ಮ ನಿತ್ಯ ದಿನಚರಿ ಬಗ್ಗೆ ಅವರು ಆಗಾಗ ಅಪ್ಡೇಟ್ ನೀಡುತ್ತಾ ಇರುತ್ತಾರೆ. ಅವರ ಅಭಿಮಾನಿ ಬಳಗ ದಿನ ಕಳೆದಂತೆ ಹಿರಿದಾಗುತ್ತಲೇ ಇದೆ.
Published On - 8:56 am, Wed, 23 August 23