ಕಾಜಲ್ ಅಗರ್ವಾಲ್ ವಯಸ್ಸು ಇಳಿಯುತ್ತಿದೆಯೋ? ಏರುತ್ತಿದೆಯೋ?

Updated on: Aug 04, 2023 | 10:48 PM

Kajol Aggarwal: ಮದುವೆಯಾದ ಬಳಿಕ ಚಿತ್ರರಂಗದಿಂದ ದೂರಾಗುವ ನಟಿಯರ ನಡುವೆ ಮದುವೆಯಾಗಿ ತಾಯಿಯಾದ ಬಳಿಕವೂ ನಟನೆಯ ಮುಂದುವರೆಸಿರುವ ಕಾಜೊಲ್ ವಿಶೇಷ. ಇಲ್ಲಿವೆ ಅವರ ಇತ್ತೀಚಿನ ಕೆಲ ಚಿತ್ರಗಳು.

1 / 8
ನಟಿ ಕಾಜಲ್ ಅಗರ್ವಾಲ್ ತಮ್ಮ ಹೊಸ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ನಟಿ ಕಾಜಲ್ ಅಗರ್ವಾಲ್ ತಮ್ಮ ಹೊಸ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

2 / 8

2022 ರಲ್ಲಿ ನಟಿ ಕಾಜೊಲ್ ಗಂಡು ಮಗುವಿನ ತಾಯಿಯಾದರು. ತಾಯಿಯಾದ ಬಳಿಕ ಹೆಚ್ಚು ಬಿಡುವು ತೆಗೆದುಕೊಳ್ಳದೆ ಮತ್ತೆ ನಟನೆಗೆ ಕಮ್ ಬ್ಯಾಕ್ ಮಾಡಿದ್ದಾರೆ.

3 / 8

ಮದುವೆ ಆಗಿ ತಾಯಿಯಾದ ಬಳಿಕವೂ ನಟನೆ ಮುಂದುವರೆಸಿರುವ ಕಾಜೋಲ್ ಇತ್ತೀಚೆಗೆ ಸ್ತ್ರೀ ಪ್ರಧಾನ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

4 / 8

ಎರಡು ದಶಕಗಳಿಂದಲೂ ಚಿತ್ರರಂಗದಲ್ಲಿರುವ ಕಾಜೊಲ್ ಅಗರ್ವಾಲ್ ವೃತ್ತಿಯಲ್ಲಿ ಅಭೂತಪೂರ್ವವಾದ ಯಶಸ್ಸನ್ನು ಗಳಿಸಿದ್ದಾರೆ. ಇನ್ನೂ ನಟನೆಯಲ್ಲಿಯೇ ಮುಂದುವರೆದಿದ್ದಾರೆ.

5 / 8

2004 ರಲ್ಲಿ ಹಿಂದಿ ಸಿನಿಮಾ ಮೂಲಕ ನಟನೆಗೆ ಕಾಲಿಟ್ಟ ಕಾಜೋಲ್ ಅಗರ್ವಾಲ್ ಬೆಳೆದಿದ್ದು ಮಾತ್ರ ತೆಲುಗು ಚಿತ್ರರಂಗದಲ್ಲಿ.

6 / 8

ಈ ವರ್ಷ ಈಗಾಗಲೇ ಕಾಜೊಲ್ ನಟನೆಯ ಎರಡು ಸಿನಿಮಾಗಳು ಬಿಡುಗಡೆ ಆಗಿದ್ದು, ಇನ್ನೂ ಒಂದು ಸಿನಿಮಾ ಬಿಡುಗಡೆಯ ಹಂತದಲ್ಲಿದೆ.

7 / 8

ಕಾಜೋಲ್ ಅಗರ್ವಾಲ್ ಕೈಯಲ್ಲಿ ಸದ್ಯಕ್ಕೆ ಮೂರು ಸಿನಿಮಾಗಳಿದ್ದು, ಅವುಗಳಲ್ಲಿ ಒಂದು ಸ್ತ್ರೀ ಪ್ರಧಾನ ಕತೆಯುಳ್ಳ ಸಿನಿಮಾ. ಕಮಲ್ ಹಾಸನ್ ನಟನೆಯ 'ಇಂಡಿಯನ್ 2' ಸಿನಿಮಾದಲ್ಲಿಯೂ ಕಾಜೊಲ್ ನಟಿಸುತ್ತಿದ್ದಾರೆ.

8 / 8

2020 ರ ಅಕ್ಟೋಬರ್ ತಿಂಗಳಲ್ಲಿ ಗೌತಮ್ ಕಿಚಲು ಹೆಸರಿನ ಉದ್ಯಮಿಯೊಟ್ಟಿಗೆ ಕಾಜೊಲ್ ಅಗರ್ವಾಲ್ ವಿವಾಹವಾಯಿತು.

Loading...
Unable to load recommendations.
Follow Us