- Kannada News Photo gallery kalaburagi nandikur gram panchayat members did Jalayoga and inspired youth
International Yoga Day 2023: ಜಲಯೋಗ ಪ್ರದರ್ಶಿಸಿ ಗಮನ ಸೆಳೆದ ಕಲಬುರಗಿ ಜಿಲ್ಲೆಯ ನಂದಿಕೂರು ಗ್ರಾ.ಪಂ. ಸದಸ್ಯ
ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಕಲಬುರಗಿ ಜಿಲ್ಲೆಯ ನಂದಿಕೂರು ಗ್ರಾ.ಪಂ. ಸದಸ್ಯ ಪವನ್ ಕುಮಾರ ವಳಕೇರಿ ಬಾವಿಗೆ ಇಳಿದು ಜಲಯೋಗ ಮಾಡಿದ್ದಾರೆ. ನೀರಿನೊಳಗೆ ವಿವಿಧ ಭಂಗಿಗಳನ್ನು ಪ್ರದರ್ಶಿಸಿದ್ದಾರೆ.
Updated on: Jun 21, 2023 | 11:45 AM

ಜೂನ್ 21ರ ಇಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನಲೆ ಯೋಗ ಮಾಡುವ ಮೂಲಕ ದೇಶಾದ್ಯಂತ ಹಬ್ಬದಂತೆ ಈ ದಿನವನ್ನು ಆಚರಿಸಲಾಗುತ್ತಿದೆ. ಆದ್ರೆ ಕಲಬುರಗಿಯಲ್ಲಿ ಜಲತಪಸ್ವಿಯೊಬ್ಬರು ಜಲಯೋಗಾಸನ ಮಾಡಿ ಗಮನ ಸೆಳೆದಿದ್ದಾರೆ.

ನೆಲದ ಮೇಲೆ ಕಷ್ಟಪಟ್ಟು, ಪರದಾಡಿ ಹಾಕುವ ಯೋಗಾಸನಗಳನ್ನು ನೀರೊಳಗೆ ನೀರು ಕುಡಿದಷ್ಟೇ ಸುಲಭವಾಗಿ ಆಸನಗಳನ್ನು ಮಾಡಿ ಜಲತಪಸ್ವಿಯೊಬ್ಬರು ಗಮನಸೆಳೆದಿದ್ದಾರೆ.

ಕಲಬುರಗಿ ಜಿಲ್ಲೆಯ ನಂದಿಕೂರು ಗ್ರಾ.ಪಂ. ಸದಸ್ಯ ಪವನ್ ಕುಮಾರ ವಳಕೇರಿ ಜಲಯೋಗಾಸನ ಮಾಡುವ ಮೂಲಕ ವಿಶಿಷ್ಟ ರೀತಿಯಲ್ಲಿ ವಿಶ್ವ ಯೋಗ ದಿನ ಆಚರಿಸಿದ್ದಾರೆ.

ಬಾವಿಯಲ್ಲಿ ಸತತ ಎರಡು ಗಂಟೆಗೂ ಅಧಿಕ ಸಮಯ ಜಲಯೋಗಾಸನ ಮಾಡಿ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ.

ನಂದಿಕೂರು ಗ್ರಾಮದ ಮಲ್ಲೇಶಪ್ಪ ಎಂಬುವರ ತೋಟದ ಬಾವಿಯಲ್ಲಿ ಸದಸ್ಯ ಪವನ್ ಕುಮಾರ ವಳಕೇರಿ ಜಲಯೋಗಾಸನ ಮಾಡಿದರು.

ಕಳೆದ ಹಲವು ವರ್ಷಗಳಿಂದ ಪವನ್ ಕುಮಾರ್ ಅವರು ಬಾವಿಯಲ್ಲಿ ಜಲಯೋಗಸಾನ ಅಭ್ಯಾಸ ಮಾಡುತ್ತಾ ಬಂದಿದ್ದಾರೆ.

ಪದ್ಮಾಸನ, ಸುಪ್ತ ವಜ್ರಾಸನ, ಪರ್ವತಾಸನ, ಉತ್ಕಟಾಸನ, ಮತ್ಸ್ಯಾಸನ ಸೇರಿದಂತೆ ಕೆಲವು ಆಸನಗಳನ್ನು ನೀರಿನಲ್ಲಿ ಮಾಡಿದ್ದಾರೆ.

ಬಾವಿಯಲ್ಲಿ ಜಲಯೋಗಾಸನ ಮಾಡುತ್ತಿರುವ ಪವನ್ ಕುಮಾರ ವಳಕೇರಿ.

ನೀರಿನೊಳಗೆ ವಿವಿಧ ಭಂಗಿಗಳ ಪ್ರದರ್ಶನ ಮಾಡಿದ ನಂದಿಕೂರು ಗ್ರಾ.ಪಂ. ಸದಸ್ಯ




