
ದಿಶಾ ಮದನ್ ಅವರು ಅಪ್ಪಟ ಕನ್ನಡದ ನಟಿ. ಅವರು ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಬಣ್ಣದ ಲೋಕದಲ್ಲಿ ಗುರುತಿಸಿಕೊಂಡ ಅವರು ಈಗ ಕಾನ್ ಪ್ರತಿಷ್ಠಿತ ಚಿತ್ರೋತ್ಸವದ ರೆಡ್ ಕಾರ್ಪೆಟ್ನಲ್ಲಿ ಹೆಜ್ಜೆ ಹಾಕಿ ಗಮನ ಸೆಳೆದಿದ್ದಾರೆ.

ಕಾನ್ ಚಿತ್ರೋತ್ಸವದಲ್ಲಿ ಹಲವು ದೇಶಗಳ ಸೆಲೆಬ್ರಿಟಿಗಳು ಭಾಗಿ ಆಗಿದ್ದಾರೆ. ಬಾಲಿವುಡ್ ಮಂದಿ ಕೂಡ ಹಾಜರಿ ಹಾಕಿದ್ದಾರೆ. ಅವರ ನಡುವೆ ಕನ್ನಡದ ಹುಡುಗಿ ದಿಶಾ ಮದನ್ ಅವರು ಈ ರೀತಿ ಮಿಂಚಿದ್ದಾರೆ. ಅವರ ಸೀರೆ ವಿಶೇಷವಾಗಿದೆ.

ಕಾಂಚಿವರಂ ಸೀರೆಗೆ ದಿಶಾ ಮದನ್ ಅವರು ಆಧುನಿಕತೆಯ ಸ್ಪರ್ಶ ನೀಡಿದ್ದಾರೆ. ಸೀರೆ ಜೊತೆ ಅವರು ಹಲವು ದಶಕಗಳಷ್ಟು ಹಳೆಯದಾದ ಆಭರಣಗಳನ್ನು ಧರಿಸಿದ್ದಾರೆ. ಆ ಮೂಲಕ ದಿಶಾ ಮದನ್ ಅವರು ಎಲ್ಲರ ಕಣ್ಣು ಕುಕ್ಕಿದ್ದಾರೆ.

ಕನ್ನಡದ ಕಿರುತೆರೆಯಲ್ಲಿ ದಿಶಾ ಮದನ್ ಅವರು ಫೇಮಸ್ ಆಗಿದ್ದಾರೆ. ಡ್ಯಾನ್ಸಿಂಗ್ ಸ್ಟಾರ್ ರಿಯಾಲಿಟಿ ಶೋನಲ್ಲಿ ಅವರು ಜನಮೆಚ್ಚುಗೆ ಪಡೆದರು. ನಂತರ ಫ್ರೆಂಚ್ ಬಿರಿಯಾನಿ ಸಿನಿಮಾದಲ್ಲಿ ನಟಿಸಿ ಅಭಿಮಾನಿಗಳನ್ನು ರಂಜಿಸಿದರು.

‘ನಾನು ಕನ್ನಡ ಚಿತ್ರರಂಗದವಳು’ ಎಂದು ದಿಶಾ ಮದನ್ ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಕಾನ್ ಚಿತ್ರೋತ್ಸವದ ರೆಡ್ ಕಾರ್ಪೆಟ್ನಲ್ಲಿ ಪೋಸ್ ನೀಡುವ ಅವಕಾಶ ಪಡೆದಿದ್ದಕ್ಕೆ ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ.