
ಇತ್ತೀಚೆಗೆ ಅನೇಕ ಹೀರೋಯಿನ್ಗಳು ತಾಯಿ ಆಗಿದ್ದಾರೆ. ಮಿಲನಾ ನಾಗರಾಜ್, ಕವಿತಾ ಗೌಡ ಸೇರಿ ಅನೇಕರು ಮಗುವಿಗೆ ಜನ್ಮ ನೀಡಿದ್ದಾರೆ. ಈಗ ಕಿರುತೆರೆಯ ಖ್ಯಾತ ನಟಿಯೊಬ್ಬರು ಮಗಳ ಫೋಟೋ ಹಂಚಿಕೊಂಡಿದ್ದಾರೆ.

ಈ ರೀತಿ ಮಗಳ ಫೋಟೋ ಹಂಚಿಕೊಂಡವರು ಬೇರಾರೂ ಅಲ್ಲ ನೇಹಾ ಗೌಡ. ನೇಹಾ ಅವರು ಇತ್ತೀಚೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಈಗ ಅವರು ಮಗಳ ಫೋಟೋನ ಹಂಚಿಕೊಂಡು ಗಮನ ಸೆಳೆದಿದ್ದಾರೆ. ಈ ಫೋಟೋ ವೈರಲ್ ಆಗಿದೆ.

ನೇಹಾ ಹಾಗೂ ಚಂದನ್ ಮದುವೆ ಆಗಿ ಕೆಲವು ವರ್ಷಗಳು ಕಳೆದಿವೆ. ನೇಹಾ ಈಗ ತಾಯಿ ಆಗಿದ್ದಾರೆ. ಅಕ್ಟೋಬರ್ 29ರಂದು ಮಗಳು ಜನಿಸಿದ್ದಾಗಿ ಅವರು ಮಾಹಿತಿ ನೀಡಿದ್ದರು. ಈಗ ಅವರು ಮಗಳ ಫೋಟೋ ರಿವೀಲ್ ಮಾಡಿದ್ದಾರೆ.

ನೇಹಾ ಅವರು ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯತೆ ಪಡೆದವರು. ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ಅವರು ನಟಿಸಿದ್ದರು. ಈ ಧಾರಾವಾಹಿ ಮೂಲಕ ಅವರು ಸಾಕಷ್ಟು ಫೇಮಸ್ ಆದರು.

ಈಗ ನೇಹಾ ಅವರು ಮಗಳ ಆರೈಕೆಗೆ ಹೆಚ್ಚಿನ ಸಮಯ ನೀಡಲಿದ್ದಾರೆ. ಹೀಗಾಗಿ ಅವರು ಯಾವುದೇ ಹೊಸ ಪ್ರಾಜೆಕ್ಟ್ ಒಪ್ಪಿಕೊಂಡಿಲ್ಲ. ಮುಂದಿನ ದಿನಗಳಲ್ಲಿ ಮಗಳ ಮತ್ತಷ್ಟು ಫೋಟೋಗಳನ್ನು ಹಂಚಿಕೊಳ್ಳಲಿ ಎಂದು ಫ್ಯಾನ್ಸ್ ಕಾದಿದ್ದಾರೆ.
Published On - 12:26 pm, Thu, 14 November 24