
ಕನ್ನಡದ ಚಿತ್ರಗಳು ವಿಶ್ವಾದ್ಯಂತ ಸದ್ದು ಮಾಡುತ್ತಿವೆ. 2022ರಲ್ಲಿ ಅತಿ ಹೆಚ್ಚು ಜನಪ್ರಿಯತೆ ಪಡೆದ ಟಾಪ್ 10 ಸಿನಿಮಾಗಳ ಪಟ್ಟಿಯನ್ನು ಐಎಂಡಿಬಿ ವೆಬ್ಸೈಟ್ ಬಿಡುಗಡೆ ಮಾಡಿದೆ. ಇದರಲ್ಲಿ ‘ಕಾಂತಾರ’, ‘ಕೆಜಿಎಫ್ 2’, ‘777 ಚಾರ್ಲಿ’ ಚಿತ್ರಗಳು ಸ್ಥಾನ ಪಡೆದಿವೆ.

ಟಾಪ್ 10 ಚಿತ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದವರಿಗೆ ಐಎಂಡಿಬಿ ಕಡೆಯಿಂದ ಸ್ಮರಣಿಕೆ ಕಳಿಸಲಾಗಿದೆ. ಅದನ್ನು ಸ್ವೀಕರಿಸಿರುವ ಚಿತ್ರಂಡದವರು ಖುಷಿಯಿಂದ ಫೋಟೋಗೆ ಪೋಸ್ ನೀಡಿದ್ದಾರೆ. ಈ ಫೋಟೋಗಳು ವೈರಲ್ ಆಗಿವೆ.

‘ಕಾಂತಾರ’ ಚಿತ್ರದ ಮೂಲಕ ಮೂಲಕ ರಿಷಬ್ ಶೆಟ್ಟಿ ಅವರು ಪ್ಯಾನ್ ಇಂಡಿಯಾ ಹೀರೋ ಆಗಿದ್ದಾರೆ. ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ ಧೂಳೆಬ್ಬಿಸಿದೆ. ಐಎಂಡಿಬಿಯಲ್ಲಿ ಈ ಚಿತ್ರ 8.6 ರೇಟಿಂಗ್ ಪಡೆದಿದೆ.

‘777 ಚಾರ್ಲಿ’ ಸಿನಿಮಾದಿಂದ ನಿರ್ದೇಶಕ ಕಿರಣ್ ರಾಜ್ ಅವರು ಯಶಸ್ಸು ಕಂಡಿದ್ದಾರೆ. ರಕ್ಷಿತ್ ಶೆಟ್ಟಿ ನಟನೆಯ ಈ ಸಿನಿಮಾ ಐಎಂಡಿಬಿಯಲ್ಲಿ 8.9 ರೇಟಿಂಗ್ ಪಡೆದಿರುವುದು ವಿಶೇಷ.

‘ಹೊಂಬಾಳೆ ಫಿಲ್ಮ್ಸ್’ ಮೂಲಕ ನಿರ್ಮಾಪಕ ವಿಜಯ್ ಕಿರಗಂದೂರು ಅವರು ಮಹತ್ವದ ಸಿನಿಮಾಗಳನ್ನು ನಿರ್ಮಿಸುತ್ತಿದ್ದಾರೆ. ಅವರ ನಿರ್ಮಾಣದಲ್ಲಿ ಮೂಡಿಬಂದ ‘ಕೆಜಿಎಫ್ 2’ ಮತ್ತು ‘ಕಾಂತಾರ’ ಚಿತ್ರಗಳು ಐಎಂಡಿಬಿ ಟಾಪ್ 10ರ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಅವರಿಗೆ ಖುಷಿ ನೀಡಿದೆ.