
ಇಂದು (ಮೇ.13) 224 ಕ್ಷೇತ್ರದ ಫಲಿತಾಂಶ ಬರಲಿದ್ದು, ಇಡೀ ರಾಜ್ಯವೇ ಕಾದು ನೋಡುತಿದೆ. ಅದರಂತೆ ಈಗಾಗಲೇ ಮತಎಣಿಕೆ ನಡೆಯುತ್ತಿದ್ದು, ಘಟಾನುಘಟಿ ಅಭ್ಯರ್ಥಿಗಳು ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಹುಬ್ಬಳ್ಳಿಯ ವಿಜಯನಗರದಲ್ಲಿರುವ ಆಂಜನೇಯ ದೇವಸ್ಥಾನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಬೆಂಗಳೂರಿನ ಎಚ್ಎಸ್ಆರ್ ಲೇಔಟ್ನ ಬಸವೇಶ್ವರ ದೇವಸ್ಥಾನದಲ್ಲಿ ಮಾಜಿ ಮುಖ್ಯಮಂತ್ರಿ ವಿಶೇಷ ಪೂಜೆ ಸಲ್ಲಸಿ ಅಭಿಷೇಕ ಮಾಡಿಸಿದ್ದಾರೆ. ಈ ವೇಳೆ ಹೆಚ್ಡಿಕೆಗೆ ಈಶ್ವರ ಲಿಂಗದ ಮೇಲಿನಿಂದ ಹೂವಿನ ಪ್ರಸಾದವಾಗಿದೆ.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳ್ಕರ್ ಹಿಂಡಲಗಾ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಅವರಿಗೆ ಸಹೋದರರು ಸಾಥ್ ನೀಡಿದ್ದಾರೆ.

ಫಲಿತಾಂಶಕ್ಕೂ ಮುನ್ನ ವಿ.ಸೋಮಣ್ಣ ದೇವರ ಮೊರೆ ಹೋಗಿದ್ದಾರೆ. ಚಾಮುಂಡೇಶ್ವರಿ ದರ್ಶನ ಪಡೆದು ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ವಿ ಸೋಮಣ್ಣಗೆ ಸಂಸದ ಪ್ರತಾಪಸಿಂಹ ಸಾಥ್ ನೀಡಿದ್ದಾರೆ.
Published On - 8:54 am, Sat, 13 May 23