KRS Dam: ಮೂರನೇ ಬಾರಿಗೆ ಕಾವೇರಿಗೆ ಬಾಗಿನ ಅರ್ಪಿಸಿದ ನಾಡದೊರೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್

|

Updated on: Jul 29, 2024 | 12:48 PM

ಕಾವೇರಿ ಜಲಾನಯನ ಪ್ರದೇಶದಲ್ಲಿ ಧಾರಕಾರ ಮಳೆಯಾಗುತ್ತಿದೆ. ಹೀಗಾಗಿ ಜೀವನದಿ ಕಾವೇರಿ ಅಪಾಯದ ಮಟ್ಟವನ್ನ ಮೀರಿ ಹರಿಯುತ್ತಿದ್ದಾಳೆ. ಅಷ್ಟೇ ಅಲ್ಲ ನದಿ ತಟದಲ್ಲಿ ಪ್ರವಾಹ ಭೀತಿಯನ್ನು ಕೂಡ ಸೃಷ್ಠಿ ಮಾಡಿದ್ದಾಳೆ. ಈ ಮಧ್ಯೆ ಸಂಪೂರ್ಣ ಭರ್ತಿಯಾಗಿರೊ ಕನ್ನಂಬಾಡಿ ಅಣೆಕಟ್ಟಿಗೆ ಸಿಎಂ ಹಾಗೂ ಡಿಸಿಎಂ ಬಾಗಿನ ಅರ್ಪಿಸಿದ್ದಾರೆ.

1 / 8
ಕಾವೇರಿ ಜಲನಯನ ಪ್ರದೇಶದಲ್ಲಿ ಕಳೆದ ಹಲವು ದಿನಗಳಿಂದ ಧಾರಕಾರ ಮಳೆಯಾಗುತ್ತಿದೆ. ಮಳೆರಾಯನ ಆರ್ಭಟಕ್ಕೆ ಮಂಡ್ಯ ಜಿಲ್ಲೆ ಶ್ರೀರಂಗಟ್ಟಣ ತಾಲೂಕಿನ ಕೆಆರ್​ಎಸ್ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಜೀವನದಿ ಕಾವೇರಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದಾಳೆ.

2 / 8
ಎರಡು ವರ್ಷಗಳ ನಂತರ ಹಳೇ ಮೈಸೂರ ಭಾಗದ ಜೀವನದಿ ಕಾವೇರಿ ಸಂಪೂರ್ಣ ಭರ್ತಿಯಾಗಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಕೆಆರ್​ಎಸ್ ಜಲಾಶಯದಲ್ಲಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದ್ದಾರೆ.

3 / 8
ಸಿಎಂ, ಡಿಸಿಎಂಗೆ ಸಚಿವರಾದ ಎನ್​.ಚಲುವರಾಯಸ್ವಾಮಿ, ಹೆಚ್​.ಸಿ.ಮಹದೇವಪ್ಪ, ಕೆ.ವೆಂಕಟೇಶ್​, ಕಾಂಗ್ರೆಸ್ ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ತನ್ವೀರ್ ಸೇಠ್​​, ರವಿಕುಮಾರ್​ ಸೇರಿದಂತೆ ಹಲವರು ಸಾಥ್ ನೀಡಿದ್ದಾರೆ.

4 / 8
ಸಿಎಂ ಸಿದ್ದರಾಮಯ್ಯ ತಮ್ಮ ಅವಧಿಯಲ್ಲಿ ಮೂರನೇ ಬಾರಿಗೆ ಕೆಆರ್​ಎಸ್ ಗೆ ಬಾಗಿನ ಅರ್ಪಿಸಿದ್ದಾರೆ. ಹೀಗಾಗಿ ಜಿಲ್ಲಾಡಳಿತ ಎಲ್ಲ ಸಿದ್ದತೆ ಮಾಡಿಕೊಂಡಿದೆ.

5 / 8
ಮೊದಲಿಗೆ ಸಿಎಂ ಸಿದ್ದರಾಮಯ್ಯನವರು ಬಾಗಿನಗಳಿಗೆ ಹೂ ಹಾಕಿ ಕೈ ಮುಗಿದು ಪೂಜೆ ಸಲ್ಲಿಸಿ ಬಳಿಕ ಕಾವೇರಿ ತಾಯಿಗೆ ಬಾಗಿನ ಅರ್ಪಿಸಿದರು. ಕಾವೇರಿ ಮಾತೆ ಪ್ರತಿಮೆಗೆ ಕೃಷಿ ಸಚಿವರು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿವಕುಮಾರ್ ಪುಷ್ಪಾರ್ಚನೆ ಮಾಡಿದ್ರು.

6 / 8
ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ವಿಶ್ವೇಶ್ವರಯ್ಯನವರ ಹೂವಿನ ಭಾವಚಿತ್ರ ನಿರ್ಮಾಣ ಮಾಡಿದ್ದು, ಕಾವೇರಿ ಮಾತೆ ಮೂರ್ತಿ ಹಸಿರು ಚಪ್ಪರದಿಂದ ಕಂಗೊಳಿಸುತ್ತಿದೆ.

7 / 8
ಮೊದಲ ಬಾರಿಗೆ ಸಿಎಂ ಆದಾಗ 2013 ಹಾಗೂ 2014 ರಲ್ಲಿ ಸಿದ್ದರಾಮಯ್ಯ ಬಾಗಿನ ಅರ್ಪಿಸಿದ್ದರು. ಆನಂತರ ಬರಗಾಲ ಹಿನ್ನೆಲೆ ಜಲಾಶಯ ಭರ್ತಿಯಾಗಿರಲಿಲ್ಲ. ಎರಡನೇ ಅವಧಿಗೂ ಸಿಎಂ ಆದಗಲೂ 2023ರಲ್ಲಿ ಕನ್ನಂಬಾಡಿ ಅಣೆಕಟ್ಟು ಭರ್ತಿಯಾಗಿರಲಿಲ್ಲ. ಈ ವರ್ಷ ಸಂಪೂರ್ಣ ಭರ್ತಿಯಾಗಿದ್ದು ಬಾಗಿನ ಅರ್ಪಿಸಿದ್ದಾರೆ.

8 / 8
ಕೃಷಿ ಪ್ರದೇಶಕ್ಕೆ ಅಪಾರ ನೀರನ್ನೇ ಉಣಿಸಿದ್ದಾಳೆ ಕಾವೇರಿ ತಾಯಿ. ಮಂಡ್ಯ, ಮೈಸೂರು ಭಾಗದ ಜನರಿಗೆ, ಬೆಂಗಳೂರಿಗರಿಗೆ ಜೀವ ಜಲ.