ಪ್ರತಿ ಸೋಮವಾರ ದಿನವೂ ಪುಣ್ಯದ ದಿನವೇ.. ಅದರಲ್ಲೂ ಶ್ರಾವಣ ಮಾಸದಲ್ಲಿ ಶಿವಭಕ್ತರು ಸೋಮವಾರವನ್ನು ಅತ್ಯಂತ ಮಹತ್ವದ ದಿನವೆಂದು ಪರಿಗಣಿಸುತ್ತಾರೆ. ಸೋಮವಾರ ಶಿವನಿಗೆ ಅರ್ಪಿತವಾದ ದಿನವಾದ್ದರಿಂದ ಶ್ರಾವಣ ಮಾಸದಲ್ಲಿ ಪ್ರತಿ ಸೋಮವಾರ ಶಿವನ ಪೂಜೆ ಮತ್ತು ಶಿವಲಿಂಗಕ್ಕೆ ಅಭಿಷೇಕ ಮಾಡುವುದು ಶ್ರೇಯಸ್ಕರ. ಭಗವಂತ ಶಿವನನ್ನು ಮೆಚ್ಚಿಸಲು ಮತ್ತು ಆತನ ಅನುಗ್ರಹವನ್ನು ಪಡೆಯಲು, ಕೆಲವು ನಿಯಮಗಳನ್ನು ಅನುಸರಿಸಬೇಕು. ಶ್ರಾವಣ ಮಾಸದ ಸೋಮವಾರ ಶಿವಪೂಜೆಗೆ ಪ್ರಶಸ್ತ ದಿನ. ಧರ್ಮ ಮತ್ತು ಪುರಾಣಗಳ ಪ್ರಕಾರ ಶ್ರಾವಣ ಮಾಸಕ್ಕೆ ಬಹಳ ಮಹತ್ವವಿದೆ. ಪವಿತ್ರವೆಂದು ಪರಿಗಣಿಸಲಾಗಿದೆ.