- Kannada News Photo gallery Karnataka Congress Some Plan To Karnataka Assembly Poll 2023 through Actor Kichcha Sudeep
ಸ್ಯಾಂಡಲ್‌ವುಡ್ ಸ್ಟಾರ್ ನಟ ಕಾಂಗ್ರೆಸ್ ಸೇರ್ಪಡೆ ಫೈನಲ್ ಆಯ್ತಾ? ಸುದೀಪ್ಗೆ ಹೂಮಾಲೆ ಹಾಕಲು ಹೊರಟ ಕೈ ಹಿಂದೆ ಹತ್ತು ಹಲವು ಪ್ಲ್ಯಾನ್
ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಸುದೀಪ್ ಈಗ ರಾಜಕೀಯ ಎಂಟ್ರಿ ಕೊಡಲಿದ್ದಾರಂತೆ. ಈ ಸುದ್ದಿ ಕಳೆದ ಕೆಲ ತಿಂಗಳಿಂದ ಹರಿದಾಡಿತ್ತು. ಇದೀಗ ಮತ್ತೆ ಈ ಸುದ್ದಿ ಮುನ್ನಲೆಗೆ ಬಂದಿದೆ. ಹೌದು. ಕಾಂಗ್ರೆಸ್ ಪಕ್ಷ ಸದೀಪ್ ಅವರಿಗೆ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಮೂಲಕ ಬಲೆ ಬೀಸಿದೆಯಂತೆ. ಈಗಾಗಲೇ ರಾಹುಲ್ ಗಾಂಧಿ ಆಪ್ತರಿಂದಲೇ ಸುದೀಪ್ಗೆ ಬಿಗ್ ಆಫರ್ ನೀಡಿದೆಯಂತೆ. ಸುದೀಪ್ ಗೆ ಹೂಮಾಲೆ ಹಾಕಲು ಕಾಂಗ್ರೆಸ್ ಹಿಂದೆ ಹತ್ತು ಹಲವು ಲೆಕ್ಕಾಚಾರಗಳು ಇವೆ.
Updated on: Feb 14, 2023 | 10:46 PM

ಸುದೀಪ್ ಗೆ ದೊಡ್ಡ ಮಟ್ಟದ ಫ್ಯಾನ್ ಫಾಲೋಯಿಂಗ್ ಪಕ್ಷಕ್ಕೆ ಲಾಭ

ಕಲಾವಿದರಿಗೆ ಜಾತಿ ಸಮುದಾಯದ ಇಲ್ಲದಿದ್ದರೂ ಜಾತಿ ಮೇಲೆ ಆ್ಯಕ್ಟಿವ್ ಪಾಲಿಟಿಕ್ಸ್

ಪ್ರಬಲ ಎಸ್ ಟಿ ಸಮುದಾಯಕ್ಕೆ ಸೇರಿರುವ ನಟ ಸುದೀಪ್, ವಾಲ್ಮೀಕಿ ಸಮುದಾಯದ ಐಕಾನ್ ಕೂಡ ಹೌದು.

ಸುಮಾರು 10 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಎಸ್‌ಟಿ ಸಮುದಾಯ ಅದರಲ್ಲೂ ವಾಲ್ಮೀಕಿ ಸಮುದಾಯ ಪ್ರಬಲವಾಗಿದೆ. ಎಸ್.ಟಿ ಸಮುದಾಯದ ದೊಡ್ಡ ಮತಬ್ಯಾಂಕ್ ಸುದೀಪ್ ಸೇರ್ಪಡೆಯಿಂದ ಕಾಂಗ್ರೆಸ್ ಪಕ್ಷದತ್ತ ಬರಬಹುದು.

ಕಾಂಗ್ರೆಸ್ ಪಾರ್ಟಿಗೆ ಬಹಳ ವರ್ಷಗಳ ನಂತರ ಸ್ಟಾರ್ ಫೇಸ್ ವ್ಯಾಲ್ಯೂ ಸಿಗುವ ನಿರೀಕ್ಷೆ.


ಹಳೆ ತಲೆಮಾರಿನ ಪಕ್ಷ ಎಂಬ ಹಣೆಪಟ್ಟಿಯಿಂದ ಕಾಂಗ್ರೆಸ್ ಪಕ್ಷ ಹೊರಬರಲು ಅನುಕೂಲ

ಯುವ ಮತದಾರರು ದೊಡ್ಡ ಸಂಖ್ಯೆಯಲ್ಲಿ ಸುದೀಪ್ ಹಾದಿ ಹಿಡಿದು ಕೈ ಹಿಡಿಯಬಹುದು ಎನ್ನುವ ನಿರೀಕ್ಷೆ.

ಸ್ಟಾರ್ ಗಿರಿಯಿಂದ ನ್ಯೂಟ್ರಲ್ ಮತದಾರರ ಮನಸ್ಸು ಗೆಲ್ಲಬಹುದು. ಇದರೊಂದಿಗೆ ಕಾಂಗ್ರೆಸ್ ಪಕ್ಷದಲ್ಲೂ ಹೊಸನೀರು ಹರಿಯುತ್ತಿದೆ ಎಂಬುದಕ್ಕೆ ಸಾಕ್ಷಿ ಒದಗಿಸಬಹುದು ಎನ್ನುವ ಪ್ಲ್ಯಾನ್.

ರಮ್ಯಾ ಮೂಲಕ ನಟ ಸುದೀಪ್ ಗೆ ರೆಡ್ ಕಾರ್ಪೆಟ್ ಹಾಸಲು ಕಾಂಗ್ರೆಸ್ ಮುಂದಾಗಿದ್ದು, ಇದರ ಹಿಂದೆ ಹತ್ತು ಹಲವು ಪ್ಲ್ಯಾನ್ ಮಾಡಿಕೊಂಡಿದೆ.




